ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಬಾಹುಬಲಿ ಹಾಗೂ 'RRR' ಸಿನಿಮಾ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಇತ್ತೀಚೆಗೆ ವೋಲ್ವೋ ಕಾರನ್ನು ಖರೀದಿಸಿರುವುದಾಗಿ ವರದಿಯಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಇತ್ತೀಚಿನ ಹೊಸ ವೋಲ್ವೋ ಕಾರನ್ನು ತಮ್ಮ ಗ್ಯಾರೇಜ್‌ನಲ್ಲಿ ಇತರ ಕಾರುಗಳೊಂದಿಗೆ ಸೇರಿಸಿದ್ದಾರೆ. ಮಾಹಿತಿಯ ಪ್ರಕಾರ ಎಸ್ಎಸ್ ರಾಜಮೌಳಿ ಅವರು ವೋಲ್ವೋ xc40 ಮಾದರಿಯನ್ನು ಖರೀದಿಸಿರುವುದಾಗಿ ತಿಳಿದುಬಂದಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಈ ಬಗ್ಗೆ ರಾಜಮೌಳಿ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಯ ಮೂಲಕ ವೋಲ್ವೋ ಕಾರುಗಳೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರನ್ನು ಡೆಲಿವರಿ ನೀಡುವ ವೇಳೆ ಅವರು ಸ್ವೀಕರಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದ್ದು, ಅಭಿಮಾನಿಗಳು ನಿರ್ದೇಶಕ ಎಸ್‌ಎಸ್‌ ರಾಜಮೌಳಿಗೆ ಶುಭಾಷಯ ತಿಳಿಸಿದ್ದಾರೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ವೋಲ್ವೋ ಕಾರ್ಸ್ ಕೂಡ ತನ್ನ ಅಧಿಕೃತ Instagram ಖಾತೆಯಲ್ಲಿ ಹೊಸ ವೋಲ್ವೋ xc40 ಮಾದರಿಯನ್ನು ಎಸ್ಎಸ್ ರಾಜಮೌಲಿ ಅವರಿಗೆ ವಿತರಣೆ ನೀಡುವ ವೇಳೆ ತೆಗೆದಿರುವ ಫೋಟೋವನ್ನು ಬಿಡುಗಡೆ ಮಾಡಿದೆ. ಕಂಪೆನಿಯು ರಾಜಮೌಳಿ ಅವರಿಗೆ ಕಾರಿನ ಕೀಯನ್ನು ಹಸ್ತಾಂತರಿಸಲಾಗುತ್ತಿರುವ ಫೋಟೋವವನ್ನು ನೋಡಬಹುದಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ವೋಲ್ವೋ XC40 ಕುರಿತು ಮಾತನಾಡುವುದಾದರೆ, ಕಂಪನಿಯು 37.99 ಲಕ್ಷ (ಎಕ್ಸ್-ಶೋರೂಮ್) ಬೆಲೆಯಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲಿ ಏಕೈಕ T4 ಆರ್-ವಿನ್ಯಾಸ ರೂಪಾಂತರದಲ್ಲಿ ವೋಲ್ವೋ XC40 ಅನ್ನು ಪರಿಚಯಿಸಲಾಗಿದೆ. ಇದರ ಸ್ಟೈಲಿಷ್ ಲುಕ್ ಮತ್ತು ಭಾರೀ ಘಾತ್ರ ನೋಡುಗರನ್ನು ಆಕರ್ಷಿಸುತ್ತದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ವೋಲ್ವೋ XC40 ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಕಂಪನಿಯ ಸಿಗ್ನೇಚರ್ ಟಿ-ಆಕಾರದ DRLS ಮತ್ತು ಗ್ಲಾಸ್ ಬ್ಲಾಕ್‌ನಲ್ಲಿ ಸಿಂಗಲ್-ಫ್ರೇಮ್ ಮುಂಭಾಗದ ಗ್ರಿಲ್ ಅನ್ನು ನೀಡಿದೆ. ಇದಲ್ಲದೆ, 18 ಇಂಚಿನ ಅಲಾಯ್ ವೀಲ್‌ಗಳ ದಪ್ಪವಾದ ಕ್ಲಾಡಿಂಗ್‌ನಿಂದ XC40 ರಫ್ ಅಂಡ್ ಟಫ್ ಲುಕ್‌ನಲ್ಲಿ ಕಾಣುತ್ತದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಕಂಪನಿಯು ಈ ಮಾದರಿಗಾಗಿ ವರ್ಟಿಕಲ್ ಟೇಲ್ ಲ್ಯಾಂಪ್ ಮತ್ತು ಟೂ-ಟೋನ್ ಎಕ್ಸ್ಟೀರಿಯರ್ ಬಣ್ಣವನ್ನು ಬಳಸಿದೆ, ಈ ಎಸ್‌ಯುವಿ ವಿಶಿಷ್ಟವಾದ ಮತ್ತು ಬಲವಾದ ರೋಡ್‌ ಗ್ರಿಪ್‌ ಅನ್ನು ಹೊಂದಿದೆ. ಇಂಟೀರಿಯರ್ ಕುರಿತು ಹೇಳುವುದಾದರೆ ಪೋರ್ಟ್ರೈಟ್ ಲೇಔಟ್ ಮತ್ತು ವೋಲ್ವೋ xc40 ನಲ್ಲಿ ಲೆದರ್ ಅಬ್ಹೋಲ್ಸ್ಟ್ರೀ ಬಳಸಲಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಇದಲ್ಲದೆ 9-ಇಂಚಿನ ಟಚ್ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ಹರ್ಮನ್ ಕಾರ್ಡನ್ ಸ್ಟಿರಿಯೊ ಸಿಸ್ಟಮ್, ಪೊವಾರ್ಡ್ ಟೆಟ್ಜೆಟ್, ವ್ಯಾಲೆಂಟ್ ಲೈಟಿಂಗ್, 12.3-ಇಂಚಿನ ಇನ್ಸ್ರುಮೆಂಟ್ ಕ್ಲಸ್ಟರ್, ಕನೆಲ್ ಎಂಟ್ರಿ, ಪನೋರಾಮಿಕ್ ಸನ್‌ ರೂಫ್‌ನೊಂದಿಗೆ ಕಂಪನಿಯು ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಸುರಕ್ಷತಾ ವೈಶಿಷ್ಟ್ಯಗಳಾದ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟೆಂಟ್, ಪಾರ್ಕ್ ಅಸಿಸ್ಟ್ ಕ್ಯಾಮೆರಾ, ಹಿಲ್ ಸ್ಟಾರ್ಟ್ ಮತ್ತು ಅತೃಪ್ತಿ ನಿಯಂತ್ರಣ ಮತ್ತು ಕೊಲಿಷನ್ ಕಂಟ್ರೋಲ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ವೋಲ್ವೋ XC40 ನಲ್ಲಿ ನೀಡಲಾಗಿದೆ. ಈ ವೈಶಿಷ್ಟ್ಯಗಳನ್ನು ಪೆಟ್ರೋಲ್ ಎಂಜಿನ್‌ನಲ್ಲೂ ನೀಡಲಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಅದರ ಎಂಜಿನ್ ಬಗ್ಗೆ ಬಗ್ಗೆ ಹೇಳುವುದಾದರೆ, ವೋಲ್ವೋ xc40 ಎಸ್‌ಯುವಿ 2.0-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್‌ ಅನ್ನು ಬಳಸಲಾಗಿದೆ. ಇದು 187 ಬಿಎಚ್ ಪವರ್ ಮತ್ತು 300 ನ್ಯೂಟನ್ ಮೀಟರ್‌ನ ಟಾರ್ಕ್‌ ಅನ್ನು ಹೊರಹಾಕುತ್ತದೆ. 8-ಸ್ಪೀಡ್ ಸ್ವಯಂಚಾಲಿತ ಗೇರ್‌ ಬಾಕ್ಸ್ ಅನ್ನು ಈ ಎಂಜಿನ್ ಬಳಸಲಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಬೆಲೆ ಏರಿಕೆ

ವೋಲ್ವೊ ಭಾರತದಲ್ಲಿ ತನ್ನ ಸಂಪೂರ್ಣ ಶ್ರೇಣಿಯ ಕಾರುಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇಕಡಾ 4 ರಷ್ಟು ಹೆಚ್ಚಿಸಿದೆ. ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸುವ ವೋಲ್ವೊದ ನಿರ್ಧಾರದಿಂದ ಭಾರದಲ್ಲಿ ಸ್ವೀಡಿಷ್ ಮಾರ್ಕ್ಯೂ ಕಾರುಗಳ ಬೆಲೆ 1 ರಿಂದ 3 ಲಕ್ಷ ರೂ.ಗಳಷ್ಟು ಹೆಚ್ಚಾಗಿದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಸುಮಾರು 3 ಲಕ್ಷ ರೂ.ಗಳಷ್ಟು ಹೆಚ್ಚಿಸಿದ್ದು, ಈ ಹೆಚ್ಚಳವಾದ ಬೆಲೆಗಳು ಕಳೆದ ಮಂಗಳವಾರದಿಂದ ಜಾರಿಗೆ ಬಂದಿವೆ ಎಂದು ಹೇಳಲಾಗುತ್ತಿದೆ. ಬೆಲೆ ಏರಿಕೆಯಿಂದ ಹೆಚ್ಚು ಪರಿಣಾಮ ಬೀರಿದ ವಾಹನಗಳಲ್ಲಿ ವೋಲ್ವೊದ ಎಂಟ್ರಿ ಲೆವೆಲ್ ಕಾರ್ ಫಾರ್ ಇಂಡಿಯಾ, ಎಕ್ಸ್‌ಸಿ 40 ಟಿ 4 ಆರ್ ಕೂಡ ಒಂದು. ಈ ಸಬ್ ಕಾಂಪ್ಯಾಕ್ಟ್ ಐಷಾರಾಮಿ ಎಸ್‌ಯುವಿ ಈಗ 1.25 ಲಕ್ಷ ರೂ.ಗಳಷ್ಟು ಬೆಲೆ ಹೆಚ್ಚಳದೊಂದಿಗೆ ಇದೀಗ ಇದರ ಬೆಲೆ 44.50 ಲಕ್ಷ ರೂ. ಇದೆ.

ವೋಲ್ವೋ xc40 ಕಾರನ್ನು ಖರೀಸಿದ RRR ಸಿನಿಮಾ ನಿರ್ದೇಶಕ ಎಸ್ಎಸ್ ರಾಜಮೌಳಿ

ಬೆಲೆ ಹೆಚ್ಚಳದ ದೃಷ್ಟಿಯಿಂದ ಹೆಚ್ಚು ಪ್ರಭಾವಿತವಾದ ಮಾದರಿಯೆಂದರೆ ಎಕ್ಸ್‌ಸಿ 90 ಬಿ 6 ಇನ್ಕ್ರಿಪ್ಷನ್ ಎಂದೇ ಹೇಳಬಹುದು. ವೋಲ್ವೊದ ಎಸ್‌ಯುವಿಯ ಬಿ6 ಇನ್ಕ್ರಿಪ್ಷನ್ ರೂಪಾಂತರದ ಬೆಲೆ 90.90 ಲಕ್ಷ ರೂ. ಇದ್ದು, ಹೊಸ ಬೆಲೆಯ ಹಚ್ಚಳದ ನಂತರ, ಎಕ್ಸ್ಸಿ 90 ಬಿ 6 ಇನ್ಕ್ರಿಪ್ಷನ್ ರೂಪಾಂತರದ ಬೆಲೆ ಈಗ 93.90 ಲಕ್ಷ ರೂ. ಆಗಿದೆ. ಇನ್ನು ಸೆಡಾನ್ ಕೊಡುಗೆಗಳಲ್ಲಿ ದೊಡ್ಡದಾದ ಎಸ್ 90 ಸಹ ತನ್ನ ಬೆಲೆ 1 ಲಕ್ಷ ರೂ.ಗಳಷ್ಟು ಹೆಚ್ಚಳದೊಂದಿಗೆ ವೋಲ್ವೊ ಎಸ್ 90 ಬಿ5 ಇನ್ಕ್ರಿಪ್ಷನ್ ಈಗ 65.90 ಲಕ್ಷ ರೂ. ಆಗಿದೆ.

Most Read Articles

Kannada
English summary
Film director ss rajamouli buys new volvo xc40 suv
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X