ಭವಿಷ್ಯದ ಸಾರಿಗೆ ವ್ಯವಸ್ಥೆ ಹೇಗಿರಬೇಕು?

Written By:

ನಮ್ಮ ಪೂರ್ಜವರು ಮುಂದಿನ ಶತಮಾನದ ಜನರು ಯಾವ ರೀತಿಯ ವಾಹನಗಳನ್ನು ಹೊಂದಿರಬೇಕೆಂಬ ಕಲ್ಪನೆಯನ್ನು ಹೊಂದಿದ್ದರು. ಆದರೆ ಎಲ್ಲೋ ಒಂದು ಕಡೆ ಅಂತಹ ಕನಸುಗಳನ್ನು ನನಸು ಮಾಡುವಲ್ಲಿ ಎಡವಿದ್ದರು.

ಅದು ಏನೇ ಆಗಿರಲಿ. ಪ್ರಸ್ತುತ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತಮ್ಮ ಭವಿಷ್ಯದ ವಾಹನಗಳನ್ನು ಸೃಷ್ಟಿ ಮಾಡುವುದರಲ್ಲಿ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನೂತನ ಕಾನ್ಸೆಪ್ಟ್‌ಗಳನ್ನು ರೂಪಿಸುತ್ತಲೇ ಇವೆ. ಪ್ರಾಯೋಗಿಕವಾಗಿಯೂ ಇದು ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದರ ಬಗ್ಗೆ ಪ್ರಶ್ನೆಗಳು ತಲೋದೋರಿದರೂ ಸಹ ಆಟೋ ತಯಾರಕ ಸಂಸ್ಥೆಗಳು ಇಂತಹ ನೂತನ ಕಾನ್ಸೆಪ್ಟ್‌ಗಳನ್ನು ತಯಾರಿಸುವುದರಲ್ಲಿ ಕಾರ್ಯಮಗ್ನವಾಗಿದೆ.

ಅಂದ ಹಾಗೆ ಭವಿಷ್ಯದ ಸಾರಿಗೆ ವ್ಯವಸ್ಥೆ ಹೇಗಿರಬೇಕು? ಬಾಡಿಗೆ ಕಾರುಗಳ ವಿನ್ಯಾಸ ಹೇಗೆ ಹೊಂದಿರಬೇಕು ಎಂಬುದರ ಬಗ್ಗೆ ತಿಳಿದಿದೆಯೇ? ಇಲ್ಲಿ 21ನೇ ಶತಮಾನದಲ್ಲಿ ಬದುಕುವ ನಮಗೆ ಮುಂದಿನ ಜನರೇಷನ್ ಬಂಡಿಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

ರೆನೊ ರನ್ನರ್

ರೆನೊ ರನ್ನರ್

ವಾಲ್ಟರ್ ಎಂ ರಾಬರ್ಟ್ ಎಂಬವನ್ನು ರೆನೊ ರನ್ನರ್ ಕಾನ್ಸೆಪ್ಟ್ ಟ್ಯಾಕ್ಸಿ ವಿನ್ಯಾಸವನ್ನು ತಯಾರಿಸಿದ್ದಾರೆ. ರಸ್ತೆ ಟ್ಯಾಕ್ಸಿ ರೈಲು ಹೈಬ್ರಿಡ್ ಈ ಕಾನ್ಸೆಪ್ಟ್ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಇದನ್ನು ನಗರ ಪ್ರದೇಶದ ಟ್ಯಾಕ್ಸಿ ಅಥವಾ ಸಾರ್ವಜನಿಕ ಸಾರಿಗೆ ವಾಹನವಾಗಿ ಬಳಸಬಹುದು. ಇದು ಮೂರು ಕೋಚ್‌ಗಳಿಂದ ಬಂಧಸಲ್ಪಟ್ಟಿದೆ.

ರೆನೊ ರನ್ನರ್ ವೈಶಿಷ್ಟ್ಯ

ರೆನೊ ರನ್ನರ್ ವೈಶಿಷ್ಟ್ಯ

ಸೋಲರ್ ನಿಯಂತ್ರಿತ ವಾಹನ,

360 ಡಿಗ್ರಿಯಲ್ಲಿ ದೃಶ್ಯ ವೀಕ್ಷಣೆ,

ಕೈನಾಟಿಕ್ ಎನರ್ಜಿ ರಿ ಜನರೇಷನ್,

ಇಂಟೆಲಿಜೆಟ್ ಎಲ್‌ಇಡಿ ಲೈಟ್ಸ್

ಪಬ್ಲಿಕ್ ಟ್ರಾನ್ಸ್‌ಪೋರ್ಟ್ 2020

ಪಬ್ಲಿಕ್ ಟ್ರಾನ್ಸ್‌ಪೋರ್ಟ್ 2020

ಸ್ಲೋವಾಕಿಯಾ ಮೂಲದ ಮಾರ್ಸೆಲ್ ಜುಝಿಯಾಕ್ ಎಂಬವರು 2020ನೇ ಸಾಲಿನ ಮಿನಿ ಸಿಟಿ ಟ್ಯಾಕ್ಸಿಗೆ ಈಗಾಗಲೇ ರೂಪುರೇಷೆ ನೀಡುವ ಪ್ರಯತ್ನ ಮಾಡಿದ್ದಾರೆ.

ಪಬ್ಲಿಕ್ ಟ್ರಾನ್ಸ್‌ಪೋರ್ಟ್ 2020

ಪಬ್ಲಿಕ್ ಟ್ರಾನ್ಸ್‌ಪೋರ್ಟ್ 2020

ಈ ಚಾಲಕ ರಹಿತ ವಾಹನದಲ್ಲಿ ನಾಲ್ಕು ಮಂದಿಗೆ ಆರಾಮದಾಯಕವಾಗಿ ಪಯಣಿಸುವ ವ್ಯವಸ್ಥೆಯನ್ನು ಇದು ಹೊಂದಿದೆ.

ಎಲ್ಫ್

ಎಲ್ಫ್

ರಿಜ್ಕಿ ಟ್ಯಾರಿಸಾ ಎಂಬವನ್ನು ಎಲ್ಫ್ ಕಾನ್ಸೆಪ್ಟ್ ತಯಾರಿಸಿದ್ದಾರೆ. ಇದು ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಎಲ್ಫ್

ಎಲ್ಫ್

ಎರಡು ಸೀಟಿನ ಈ ವಾಹನಕ್ಕೆ ಕಡಿಮೆ ಪಾರ್ಕಿಂಗ್ ಸ್ಥಳ ಸಾಕಾಗುವುದು. ಇನ್ನು ಮಡಚಬಹುದಾದ ತಂತ್ರಗಾರಿಕೆಯನ್ನು ಇದು ಹೊಂದಿದೆ.

ಏರ್ ಫ್ಲೋ

ಏರ್ ಫ್ಲೋ

ಲೂಕಾಸ್ ಮೆಡಿಸಿಸ್ ಎಂಬವರು ಏರ್ ಫ್ಲೋ ಸಾರ್ವಜನಿಕ ಸಾರಿಗೆ ವಾಹನವನ್ನು ತಯಾರಿಸಿದ್ದಾರೆ. ವಿಶೇಷವಾಗಿಯೂ ಫಿನ್‌ಲ್ಯಾಂಡ್‌ಗಾಗಿ ಇದನ್ನು ರಚಿಸಲಾಗಿದೆ.

ಏರ್ ಫ್ಲೋ

ಏರ್ ಫ್ಲೋ

40 ಮಂದಿಯನ್ನು ಹೊತ್ತೊಯ್ಯಬಲ್ಲ ಏರ್ ಫ್ಲೋ ಮೇಲ್ಬಾಗದಲ್ಲಿ ಪಾರದರ್ಶಕ ಸೋಲರ್ ಪ್ಯಾನೆಲ್ ಲಗತ್ತಿಸಲಾಗಿದೆ. ಇದು ವಿದ್ಯುತ್ ಉತ್ಪಾದಿಸಲು ನೆರವಾಗಲಿದೆ.

ಕ್ರೆಡೊ ಇ-ಬೋನ್ ಬಸ್

ಕ್ರೆಡೊ ಇ-ಬೋನ್ ಬಸ್

ಪ್ರಾಯೋಗಿಕವಾಗಿಯೂ ಯಶಸ್ಸು ಕಾಣಬಲ್ಲ ಕ್ರೆಡೊ ಇ ಬೋನ್ ಜೀರೋ ಎಮಿಷನ್ ಕಾನ್ಸೆಪ್ಟ್ ಬಸ್ಸಾಗಿದೆ. ಪೀಟರ್ ಸೈಮನ್ ಎಂಬವರು ಇದನ್ನು ವಿನ್ಯಾಸಗೊಳಿಸಿದ್ದಾರೆ.

ಕ್ರೆಡೊ ಇ-ಬೋನ್ ಬಸ್

ಕ್ರೆಡೊ ಇ-ಬೋನ್ ಬಸ್

ಲಿಥಿಯಂ ಇಯಾನ್ ಬ್ಯಾಟರಿ ಹಾಗೂ ಹೈಡ್ರೋಜನ್ ಫ್ಯೂಯಲ್ ಸೆಲ್‌ಗಳಿಂದ ನಿಯಂತ್ರಸಲ್ಪಡುವ ಈ ಬಸ್ಸನಲ್ಲಿ ಹಗುರ ಭಾರದ ಬಿಡಿಭಾಗಗಳನ್ನು ಬಳಕೆ ಮಾಡಲಾಗುವುದು.

ಭವಿಷ್ಯದ ಟ್ಯಾಕ್ಸಿ-ಕ್ಯಾಬ್

ಭವಿಷ್ಯದ ಟ್ಯಾಕ್ಸಿ-ಕ್ಯಾಬ್

ವಿನ್ಯಾಸಗಾರ ಪೆಟ್ರ್ ಕ್ಯೂಬಿಕ್ ಮನದಲ್ಲಿ ಹೊಳೆದಿರುವ ಭವಿಷ್ಯದ ಯೋಜನೆಯ ಫಲವೇ ಸಿಟಿ ಟ್ಯಾಕ್ಸಿ ಆಗಿದೆ. ಇದು ಇಬ್ಬರಿಗೆ ಕುಳಿತುಕೊಳ್ಳಬಹುದಾದ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ.

ಭವಿಷ್ಯದ ಟ್ಯಾಕ್ಸಿ-ಕ್ಯಾಬ್

ಭವಿಷ್ಯದ ಟ್ಯಾಕ್ಸಿ-ಕ್ಯಾಬ್

ಮಹಾನಗರಗಳಲ್ಲಿ ಇದರ ಬಳಕೆ ಹೆಚ್ಚು ಸೂಕ್ತವಾಗಲಿದೆ. ಅಲ್ಲದೆ ಇದರ ವಿಶೇಷ ಸೆನ್ಸಾರ್ ತಂತ್ರಜ್ಞಾನವು ಅಪಘಾತವನ್ನು ತಡೆಗಟ್ಟುವಲ್ಲಿ ನೆರವಾಗಲಿದೆ.

ಸಿಟಿ ಅಕ್ವಾಟಿಕ್ ಟ್ರಾನ್ಸ್‌ಪೋರ್ಟ್ (ಸಿಎಟಿ)

ಸಿಟಿ ಅಕ್ವಾಟಿಕ್ ಟ್ರಾನ್ಸ್‌ಪೋರ್ಟ್ (ಸಿಎಟಿ)

ಕಾಲ್ ಕ್ರಾವೆನ್ ರಚಿಸಿರುವ ವಿನ್ಯಾಸವೇ ಸಿಟಿ ಅಕ್ಟಾಟಿಕ್ ಟ್ರಾನ್ಸ್‌ಫೋರ್ಟ್ ಆಗಿದೆ. ಇದೊಂದು ವೈಯಕ್ತಿಕ ಟ್ಯಾಕ್ಸಿ ಆಗಿದ್ದು, ಇದನ್ನು ಆಟೋಮ್ಯಾಟಿಕ್ ಆಗಿಯೂ ಚಲಿಸುವ ಸಾಮರ್ಥ್ಯ ಹೊಂದಿದೆ.

ಸಿಟಿ ಅಕ್ವಾಟಿಕ್ ಟ್ರಾನ್ಸ್‌ಪೋರ್ಟ್ (ಸಿಎಟಿ)

ಸಿಟಿ ಅಕ್ವಾಟಿಕ್ ಟ್ರಾನ್ಸ್‌ಪೋರ್ಟ್ (ಸಿಎಟಿ)

ಇದರಲ್ಲಿ ವೈ-ಫೈಗಳಂತದ ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಲಾಗಿದೆ. ಪ್ರವಾಸಿ ವಾಹನವಾಗಿಯೂ ಇದನ್ನು ಬಳಸಬಹುದಾಗಿದ್ದಲ್ಲದೆ ಕಚೇರಿಗಳಲ್ಲಿ ನಡೆಯುವ ಸಭೆಯನ್ನು ಹಮ್ಮಿಕೊಳ್ಳಬಹುದು ಎಂದು ಅಭಿಪ್ರಾಯಪಡಲಾಗಿದೆ.

English summary
People during early 20th century had wild ideas about how the world would be in the 21st century. They imagined flying cars, buildings in the sky and so on. But now that we are living in the 21st century we know none of those fantastic ideas came to be true.
Story first published: Tuesday, October 29, 2013, 6:04 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more