ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

By Super Admin

ಪಟ್ಟಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ತೊಂದರೆಯಿದು. ಬೃಹತ್ ಫ್ಲ್ಯಾಟ್ ಗಳನ್ನು ಹೊರತುಪಡಿಸಿದರೆ ಸಣ್ಣ ಪುಟ್ಟ ಮನೆಗಳಲ್ಲಿ ಜೀವನ ಸಾಗಿಸುವವರು ತಮ್ಮ ವಾಹನಗಳನ್ನು ಹೊರಗಡೆಯೇ ಪಾರ್ಕಿಂಗ್ ಮಾಡಬೇಕಾಗುತ್ತದೆ.

ಇನ್ನು ಜಾಗ ಇದ್ದರೂ ಪಾರ್ಕಿಂಗ್ ಸ್ಟೇಷನ್ ನಿಲುಗಡೆ ನಿರ್ಮಿಸಲು ಹೆಚ್ಚಿನ ಮೊತ್ತ ತಗಲುತ್ತದೆ. ಇವೆಲ್ಲದಕ್ಕೂ ಪರಿಹಾರವಾಗಿ ಸಂಸ್ಥೆಯೊಂದು ವಿನೂತನ ತಂತ್ರಜ್ಞಾನದೊಂದಿಗೆ ಮುಂದೆ ಬಂದಿದೆ. ಅದೇನಂತೀರಾ? ಮುಂದೆ ಓದಿ...

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಪಾರ್ಕಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ. ಅದುವೇ ಗೇಜ್ ಬಾಕ್ಸ್ (GazeBox).ಸಂಸ್ಥೆಯೇ ಹೇಳುವ ಪ್ರಕಾರ ಇದು ನಿಮ್ಮ ಪಾರ್ಕಿಂಗ್ ಸಮಸ್ಯೆಗೆ ಪರಿಪೂರ್ಣ ಪರಿಹಾರವಲ್ಲ. ಬದಲಾಗಿ ವಾಹನ ನಿಲುಗಡೆಯ ಸಮಸ್ಯೆ ಎದುರಿಸುವ ಮಂದಿಗೆ ಇದೊಂದು ಬದಲಿ ವ್ಯವಸ್ಥೆಯಾಗಿರಲಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ತೆರೆಯುವ ಹಾಗೂ ಮುಚ್ಚುವಂತಹ ವ್ಯವಸ್ಥೆಯನ್ನು ಹೊಂದಿರುವ ಈ ಪಾರ್ಕಿಂಗ್ ವ್ಯವಸ್ಥೆಯು ನಿಮ್ಮ ಕಾರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸಲಿದೆ. ಇದರಿಂದ ಕಳ್ಳರ ಚಿಂತೆಯಿಲ್ಲದೆ ರಾತ್ರಿಯೆಲ್ಲ ಆರಾಮವಾಗಿ ನಿದ್ದೆ ಮಾಡಬಹುದಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಬಿಸಿಲೇ ಆಗಲಿ, ಮಳೆ ಬರಲಿ, ಮಂಜು ಆವರಿಸಲಿ ಅಥವಾ ಗಾಳಿಯೇ ಬೀಸಲಿ ಏನೇ ಆದರೂ ಎಲ್ಲ ಪರಿಸ್ಥಿತಿಯಲ್ಲೂ ಸಂಪೂರ್ಣ ರಕ್ಷಣೆ ಒದಗಿಸಬಹುದಾದ ಪಾರ್ಕಿಂಗ್ ಸೆಂಟರ್ ಇದಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಇದನ್ನು ಬಲಿಷ್ಠವಾಗಿಸಲು ಕಬ್ಬಿಣದ ಸರಳುಗಳು ಹಾಗೂ ಪೋಲಿಕಾರ್ಬನೇಟ್ ಪ್ಯಾನೆಲ್ ಗಳನ್ನು ಬಳಕೆ ಮಾಡಲಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಿಸಬಹುದಾದ ಈ ಗ್ಯಾರೇಜ್ ತೆರೆಯುವ ಮೂಲಕ ಕಾರನ್ನು ಸುರಕ್ಷಿತವಾಗಿ ನಿಲುಗಡೆಗೊಳಿಸಬಹುದಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಅಷ್ಟೇ ಯಾಕೆ ನಿಮಗೆ ಬೇಕಿದ್ದರೆ ಅಲರಾಂ ಸಿಸ್ಟಂ ಹಾಗೂ ಎಸಿ ಸೌಲಭ್ಯಗಳನ್ನು ಇದರಲ್ಲಿ ಆಳವಡಿಸಬಹುದಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಇಟಲಿಯ ಸಂಸ್ಥೆ ನಿರ್ಮಿಸಿರುವ ಗೇಜ್ ಬಾಕ್ಸ್ ಅನ್ನು ಯಾವುದೇ ತೊಡಕುಗಳಿಲ್ಲದೆ ಸುಲಭವಾಗಿ ನೆಲದಲ್ಲಿ ಲಗತ್ತಿಸಬಹುದಾಗಿದೆ.

ಪಾರ್ಕಿಂಗ್ ಜಾಗದ ಅಭಾವ ಕಾಡುತ್ತಿದೆಯೇ? ಬನ್ನಿ ಪರಿಹಾರವಿದೆ

ಅಂದ ಹಾಗೆ ಕಾರು ಪಾರ್ಕಿಂಗ್ ಮಾಡಲು ಇಷ್ಟವಿಲ್ಲದಿದ್ದಲ್ಲಿ ಈ ಬಹುಪಯೋಗಿ ಗೇಜ್ ಬಾಕ್ಸ್ ಅನ್ನು ಟೀ ಟೈಮ್ ಚಿಟ್-ಚಾಟ್ ಗಾಗಿಯೂ ಬಳಕೆ ಮಾಡಬಹುದಾಗಿದೆ.

Most Read Articles

Kannada
Read more on ಕಾರು car
English summary
GazeBox provide shelter for your car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X