ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

Written By:

ಗೂಗಲ್ ಒಡೆತನದ ಬೋಸ್ಟನ್ ಡೈನಾಮಿಕ್ಸ್ ಕಂಪನಿ ಇತ್ತೀಚೆಗೆ ಅತ್ಯಬ್ಧುತ ಹ್ರೈಬ್ರಿಡ್ ರೋಬೋಟ್ ಒಂದನ್ನ ತಯಾರಿಸಿದ್ದು, ಅದರ ದಣಿವರಿಯದ ಆಟಕ್ಕೆ ಎಂತವರೂ ಮನಸೋಲದೇ ಇರಲಾರರು.

To Follow DriveSpark On Facebook, Click The Like Button
ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ನಮ್ಮ ಕಲ್ವನೆಗೂ ಮೀರಿ ಅದ್ಭುತ ಸೃಷ್ಠಿಯೊಂದನ್ನು ಮಾಡಿರುವ ಗೂಗಲ್ ಅಂಗಸಂಸ್ಥೆ ಬೋಸ್ಟನ್ ಡೈನಾಮಿಕ್ಸ್ ಕಂಪನಿ, ಹೈಬ್ರಿಡ್ ರೋಬೋಟ್ ಒಂದನ್ನು ಹೊರ ತಂದಿದ್ದು, ಅದರ ಮುಂದೆ ಮನುಷ್ಯನೇ ಶೂನ್ಯ ಎನ್ನುವಂತಿದೆ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಸಂಪೂರ್ಣ ಹೈಬ್ರಿಡ್ ಆಗಿರುವ ಈ ವಿಚಿತ್ರ ರೋಬೋಟ್, ರಚನೆಯಲ್ಲೂ ಅದ್ಭುತವಾಗಿದೆ. ನಾಲ್ಕು ಕಾಲಿನ ಚಕ್ರಗಳನ್ನು ಹೊಂದಿದ್ದು, ತನ್ನ ಉದ್ದನೆಗಳ ಕೈಗಳ ಮೂಲಕ ನಿಮ್ಮ ಊಹೆಗೂ ನಿಲುಕ ರೀತಿಯಲ್ಲಿ ಸಾಹಸ ಪ್ರದರ್ಶನ ತೋರುತ್ತದೆ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಸುಮಾರು 50 ಕೆಜಿ ಭಾರ ಹೊಂದಿರುವ ಈ ಹೈಬ್ರಿಡ್ ರೋಬೋಟ್, ಸದ್ಯಕ್ಕೆ ಜಗತ್ತಿನ ಬಿಗ್ ಡಾಗ್(ದೊಡ್ಡ ನಾಯಿ) ಎಂದೇ ಬಿಂಬಿತವಾಗಿದೆ. ಹೀಗಾಗಿ ನೂರಾರು ರೋಬೋಟೆಕ್ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ನಾಂದಿಯಾಗಿರುವ ಈ ರೋಬೋ, ಸಾಮಾಜಿಕ ಜಾಲ ತಾಣಗಳಲ್ಲಿ ಹೊಸ ಸಂಚಲನ ಸೃಷ್ಠಿಮಾಡಿದೆ.

ಹೈಬ್ರಿಡ್ ರೋಬೋಟೆಕ್ ಕರಾಮತ್ತು ಪ್ರದರ್ಶನವನ್ನು ನೀವು ಒಮ್ಮೆ ನೋಡಲೇಬೇಕು. ಅದರ ಆಟಕ್ಕೆ ನೀವು ಮೂಗಿನ ಮೇಲೆ ಬೆರಳಿಡುವುದು ಮಾತ್ರ ಗ್ಯಾರೆಂಟಿ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಒಂದೇ ಎರಡೇ ಹೈಬ್ರಿಡ್ ರೋಬೋಟ್ ಆಟ. ಹೀಗಾಗಿಯೇ ಅದೊಂದು ಬಹುಮುಖ ಪ್ರತಿಭೆಯ ಸಮ್ಮಿಲನ ಎಂದೇ ಹೇಳಬಹುದು. ನೀವು ಹೇಳಿದಂತೆ ಕುಣಿಯಬಲ್ಲದು, ಜಿಗಿಯಬಲ್ಲದು, ಕಸರತ್ತು ಪ್ರದರ್ಶನ ಮಾಡಬಲ್ಲದು ಅಲ್ಲದೇ ಒಂಟಿ ಕಾಲಿನ ಮೇಲೆ ಸಾಹಸವನ್ನು ಕೂಡಾ ಮಾಡಬಲ್ಲದು.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಒಂದು ವೇಳೆ ಮುಂದೊಂದು ದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ರೇ ಎಲ್ಲಾ ವಿಭಾಗಗಳಲ್ಲೂ ತಮ್ಮದೇ ಛಾಪು ಮೂಡಿಸಬಲ್ಲ ಅಗಾಧ ಶಕ್ತಿಯನ್ನು ಹೈಬ್ರಿಡ್ ರೋಬೋಟ್ ಹೊಂದಿದೆ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ವಿದ್ಯುತ್ ಚಾಲಿತ ಶಕ್ತಿಯೊಂದಿಗೆ ಅಭಿವೃದ್ಧಿಯಾಗಿರುವ ಈ ವಿಚಿತ್ರ ಹೈಬ್ರಿಡ್ ರೋಬೋಟ್, ಒಮ್ಮೆ ಚಾರ್ಚ್ ಮಾಡಿದ್ರೆ ಸಾಕು 15ಕಿಲೋ ಮೀಟರ್ ಯಾವುದೇ ಅನಾಯಾಸವಿಲ್ಲದೇ ಒಡಬಲ್ಲದು. ಜೊತೆಗೆ 45 ಕೆಜಿ ಭಾರವನ್ನು ಯಾವುದೇ ಮಾಲಾಜಿಲ್ಲದೆ ಎತ್ತಿಕೊಂಡು ಹೋಗಬಲ್ಲದು.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಒಂದು ನೀವು ನಂಬಲೇಬೇಕು ಹೈಜಂಪ್‌ ವಿಭಾಗದಲ್ಲಿ ಇದುವರೆಗೆ ದಾಖಲಾಗಿರುವ ಪ್ರಕಾರ 5.3-ಅಡಿ ಮಾತ್ರ ವಿಶ್ವದಾಖಲೆ ಇದೆ. ಆದ್ರೆ ಹೈಬ್ರಿಡ್ ರೋಬೋಟ್ ಅದನ್ನು ಮೀರಿ ಮತ್ತೊಂದು ವಿಶ್ವದಾಖಲೆಯನ್ನೇ ನಿರ್ಮಿಸುವಷ್ಟು ಶಕ್ತಿ ಹೊಂದಿದೆ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಕೆಲವು ಮೂಲಗಳ ಪ್ರಕಾರ ವಿಶಿಷ್ಟ ಕಾರ್ಯಾಚರಣೆ ತಂತ್ರಾಂಶ ಹೊಂದಿರುವ ಈ ಹೈಬ್ರಿಡ್ ರೋಬೋಟ್ ಅನ್ನು ಅಮೆರಿಕವು ತನ್ನ ಮಿಲಟರಿ ಪಡೆಯಲ್ಲಿ ಬಳಕೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿಗಳಿಲ್ಲ. ಒಂದು ವೇಳೆ ಮೀಲಟರಿ ಸೇರಿದ್ದೇ ಆದಲ್ಲಿ ಅಮೆರಿಕ ಸೇನಾಪಡೆ ಭಯೋತ್ವಾದನೆ ನಿಗ್ರಹಕ್ಕೆ ಬಳಸಿಕೊಳ್ಳಲಿದೆ.

ಇದು ಯಂತ್ರ ಜಗತ್ತಿನ ಕರಾಮತ್ತು: ಹೈಬ್ರಿಡ್ ರೋಬೋಟ್ ಆಟಕ್ಕೆ ಮಾನವನೇ ಮೂಕವಿಸ್ಮಿತ..!!

ಆದ್ರೆ ಗೂಗಲ್ ಒಡೆತನದ ಬೋಸ್ಟನ್ ಡೈನಾಮಿಕ್ಸ್ ಸೃಷ್ಠಿಸಿರುವ ಈ ವಿಚಿತ್ರ ರೋಬೋಟ್ ಸಂಶೋಧನೆಯ ವಿರುದ್ಧ ಭಾರೀ ವಿರೋಧ ಕೇಳಿಬರುತ್ತಿದೆ. ಇದು ಮುಂದೊಂದು ದಿನ ಆಪಾಯಕಾರಿ ಕಾರ್ಯಾಚರಣೆಗಳಿಗೆ ಬಳಕೆಯಾಗಬಹುದು ಎಂಬ ಭಯಾನಕತೆ ವ್ಯಕ್ತಪಡಿಸಲಾಗುತ್ತಿದ್ದು,ಮುಂಬರುವ ದಿನಗಳಲ್ಲಿ ಇದರ ನಿರ್ಣಾಯಕ ಅಂಶ ಹೊರಬಿಳಲಿದೆ.

ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಸೂಪರ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಗೂಗಲ್ google
English summary
The Google-owned robotics company officially unveiled its latest robot, Handle, in a YouTube video posted Wednesday that immediately captivated the Internet.
Story first published: Wednesday, March 1, 2017, 16:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark