ಹೆಲ್ಮೆಟ್ ಹಾಕದ ಪೊಲೀಸ್ ಮೇಲೆಯೇ ಕೇಸ್ ಹಾಕಿದ ನೆಟಿಜನ್‍ಗಳು..
ಕಾನೂನು ಯಾರಪ್ಪನ ಸವತ್ತು ಅಲ್ಲ, ಕಾನೂನು ಎಲ್ಲರಿಗು ವಹಿಸುತ್ತದೆ. ಆಗಾಗ ಇಂತಹ ಮಾತುಗಳು ಕೇಳಿಬರುತ್ತಲೇ ಇರುತ್ತದೆ, ಆದರೇ ಇದನ್ನು ಪಾಲಿಸುವವರು ತುಂಬಾನೆ ಕಮ್ಮಿ ಎನ್ನಬಹುದು. ಉದಾಹರಣೆಗೆ - ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಜೆಗಳ ಮೇಲೆ
ಕಾನೂನು ಯಾರಪ್ಪನ ಸ್ವತ್ತು ಅಲ್ಲ, ಕಾನೂನು ಎಲ್ಲರಿಗೂ ಒಂದೇ.. ಹೀಗೆ ಇಂತಹ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೇ ಇದನ್ನು ಪಾಲಿಸುವವರು ತುಂಬಾನೆ ಕಡಿಮೆ ಎನ್ನಬಹುದು. ಉದಾಹರಣೆಗೆ, ರಸ್ತೆ ನಿಯಮಗಳನ್ನು ಉಲ್ಲಂಘಿಸುವ ಜನಸಾಮಾನ್ಯರ ಮೇಲೆ ದಂಡ ಹಾಕುವ ಪೊಲೀಸರು ಮಾತ್ರ ತಮಗೆ ಕಾನೂನು ಅನ್ವಯಿಸುವುದಿಲ್ಲ ಎನ್ನುವ ವರ್ತನೆ ಮಾಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಹೆಲ್ಮೆಟ್ ಕಡ್ಡಾಯ ಎಂದು ಈಗಾಗಲೇ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ಹೊಸ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿರುವುದಲ್ಲದೇ ಹೆಲ್ಮೆಟ್ ಕುರಿತು ಪೊಲೀಸ್ ಇಲಾಖೆಯು ಸಹ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ. ಹೀಗಿರುವಾಗ ಕೆಲವು ಪೊಲೀಸರೇ ಹಲ್ಮೆಟ್ ಹಾಕದೇ ಬೈಕ್ ಸವಾರಿ ಮಾಡುವುದು ಸಮಾನ್ಯವಾಗಿದೆ.

ರಸ್ತೆಯ ಮೇಲೆ ನಡೆಯುವ ನ್ಯಾಯಅನ್ಯಾಯಗಳನ್ನು ಮತ್ತು ಕಾನೂನು ವ್ಯತಿರೇಕದ ಬಗ್ಗೆ ವಿವರಿಸಲು ಸೋಷಿಯಲ್ ಮೀಡಿಯಾ ಅತ್ಯಂತ ಶಕ್ತಿವಂತವಾದ ಆಯುಧ. ಇದರ ಪ್ರಾಮುಖ್ಯತೆಯನ್ನು ತಿಳಿದುಕೊಂಡ ಹಲವು ಪೊಲೀಸ್ ಶಾಖೆಯು ಟ್ವಿಟರ್ ಮತ್ತು ಫೇಸ್‍ಬುಕ್ ಖಾತೆಗಳನ್ನು ಪ್ರಾರಂಭಿಸಿ ಇನ್ನಷ್ಟು ಅಮೂಲ್ಯವಾದ ಸೇವೆಗಳನ್ನು ನೀಡುತ್ತಿದ್ದಾರೆ.

ಬೆಂಗಳೂರು, ಹೈದ್ರಾಬಾದ್, ಮುಂಬೈ ಮತ್ತು ದೆಹಲಿ ಮೆಟ್ರೊ ಪಾಲಿಟನ್ ನಗರಗಳಲ್ಲಿ ಟ್ವಿಟರ್ ಖಾತೆಯ ಮುಖಾಂತರ ಆ ಕ್ಷಣಕ್ಕೆ ನೆಟಿಜನ್‍ಗಳ ಸಮಸ್ಯೆಯನ್ನು ಪರಿಷ್ಕರಿಸುತ್ತಿರುವುದರೊಂದಿಗೆ, ಬಹಳ ಚುರುಕಾಗಿ ವ್ಯವಹರಿಸುತ್ತಿದ್ದಾರೆ.

ಈ ಟ್ವಿಟರ್ ಮುಖಾಂತರ ಕೆಲವು ದಿನಗಳ ಹಿಂದಷ್ಟೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿರುವ ಪೊಲೀಸ್ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕೇಸ್ ದಾಖಲಾಗಿದೆ. ಹೌದು, ಗುರುಗ್ರಾಮ್ ನಗರಕ್ಕೆ ಸೇರಿದ 28 ವರ್ಷದ ಹರ್ಮಿತ್ ಬಾತ್ರಾ ಹೆಲ್ಮೆಟ್ ಇಲ್ಲದೆ ಹೂಗುತ್ತಿದ್ದ ಪೊಲೀಸ್ ಅಧಿಕಾರಿಯ ಪೋಟೊ ತೆಗೆದು, ಟ್ವಿಟರ್‍ನಲ್ಲಿ ಟ್ವೀಟ್ ಮಾಡಿ, ಗುರುಗ್ರಾಮ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.

ಗುರುಗ್ರಾಮ್‍ನಲ್ಲಿನ ಸಿಖಂದರ್ ಪೂರ್‍ನಲ್ಲಿ ಯೂನಿಫಾರ್ಮ್‍ನಲ್ಲಿದ್ದ ಪೊಲೀಸ್ ಅಧಿಕಾರಿಯು ಕಾರ್ಯಕಾಗಿ ಉಪಯೋಗಿಸುವ ಬೈಕ್ ಮೇಲೆ ಒಬ್ಬ ಮಹಿಳೆಯನ್ನು ಕೂರಿಸುಕೊಂಡು, ಇಬ್ಬರೂ ಹೆಲ್ಮೆಟ್ ಧರಿಸದೆಯೆ ಹೋಗುತ್ತಿರುವಾಗ, ಕಾನೂನು ಯಾರಪ್ಪನ ಸ್ವತ್ತು ಅಲ್ಲ, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳುವ ಅಧಿಕಾರಿಗಳೆ ಹೀಗೆ ಮಾದುತ್ತಿದ್ದಾರೆಂದು ಟ್ವಿಟರ್ ಮೂಲವಾಗಿ ಆ ನಗರಕ್ಕೆ ಸೇರಿದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆದರೇ, ಗುರುಗ್ರಾಮ್ ಪೊಲೀಸರಿಂಡ ಊಹಿಸಲಾಗದ ಹಾಗೆ ಸಮಾಧನವು ಬಂದಿದೆ. ಅದೇನೆಂದರೆ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು, ಆನ್‍ಲೈನ್ ಚಲಾನ್ ಜಾರಿ ಮಾಡುವ ವಿಭಾಗಕ್ಕೆ ಈ ಕೇಸ್ ಅನ್ನು ಕಳುಹಿಸಿರುವ ಹಾಗೆ ಸಮಧಾನವನ್ನು ನೀಡಿದ್ದಾರೆ.
ಮೊದಲು ಟ್ವಿಟರ್ ಮುಖಾಂತರ ಮಾಹಿತಿಯನ್ನು ಶೇರ್ ಮಾಡಿದ ಹರ್ಮಿತ್ ಪೊಲೀಸರ ಟ್ವಿಟರ್ ಸಮಾಧಾನದ ಬದಲಿಗೆ ಮತ್ತೊಂದು ಟ್ವೀಟ್ ಮಾಡಿದ್ದ. ರಸ್ತೆ ನಿಯಮವನ್ನು ಉಲ್ಲಂಘಿಸಿದ ಯಾವ ವಾಹನಗಳ ಮೇಲೆ ಯಾವ ಗುರುಗ್ರಾಮ್ ಶಾಖೆಯ ಮೇಲೆ ರೂ.200ಯ ಇ-ಚಲನ್ ವಿದ್ಧಿಸಿದ್ದಾರೆಂದು ಪ್ರಶ್ನಿಸಿದ್ದಾನೆ.

ಏನಾದರೂ ಸೋಷಿಯಲ್ ಮೀಡಿಯಾ ಏಟಿಗೆ ಪೊಲೀಸ್ ವ್ಯವಸ್ಥೆಯಲ್ಲಿ ಕೊಂಚ ಬದಲವಣೆಗಳು ಆಗುತ್ತಿವೆ. ಅತ್ಯಂತ ಪಾರದರ್ಶಕವಾದ ಪಾಲನೆ ಮತ್ತು ಸಮರ್ಥವಾದ ವ್ಯವಸ್ಥೆಯನ್ನು ಸಾಮಾಜಿಕ ಮಾಧ್ಯಮಗಳನ್ನು ಬಹಳ ಉಪಯೋಗಬತ್ತದೆ ಎಂಬುವುದರಲ್ಲಿ ಯಾವ ಸಂದೇಹವು ಇಲ್ಲ. ಆದ್ದರಿಂದ, ನಿಮಗೂ ಸಹನ್ ಯಾರಾದರು ರಸ್ತೆ ನಿಯಮಗಳನ್ನು ಉಲ್ಲಂಘಿಸುವಾಗ ಕಾಣಿಸಿಕೊಂಡರೆ, ಆ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಟ್ವಿಟರ್ ಅಥವಾ ಫೇಸ್‍ಬುಕ್ ಮುಖಾಂತರ ಆ ಸಂಭಂದಿತ ಅಧಿಕಾರಿಗಳಿಗೆ ಟ್ಯಾಗ್ ಮಾಡಿರಿ.


Click it and Unblock the Notifications








