ಭಾರತ-ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ..?

By Nagaraja

ಭಾರತ ಮತ್ತು ಪಾಕಿಸ್ತಾನ ನಡುವಣ ಹಂಚಿಕೊಳ್ಳುತ್ತಿರುವ ಗಡಿ ಪ್ರದೇಶದಲ್ಲಿ ಪದೇ ಪದೇ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗುತ್ತಿದ್ದು, ಯಾವ ಕ್ಷಣ ಬೇಕಾದರೂ ಯುದ್ಧಕಾಲ ತುರ್ತು ಪರಿಸ್ಥಿತಿ ಎದುರಾಗಲಿದೆ ಎಂಬಂತಹ ಭೀತಿ ಕಾಡುತ್ತಿದೆ.

Also Read: ಮೃದುವಾದ ಹಕ್ಕಿ ಢಿಕ್ಕಿಯಿಂದ ವಿಮಾನ ಪತನ; ಏನಿದರ ಮರ್ಮ?

ಈ ನಿಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಇರುವ ಎರಡು ಕಿಲ್ಲರ್ ಫೈಟರ್ ಯುದ್ಧ ವಿಮಾನಗಳ ಬಗ್ಗೆ ತುಲನೆ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುವುದು. ಅವುಗಳೆಂದರೆ ಭಾರತದ ಹೆಮ್ಮೆಯ ಎಚ್ಎಎಲ್ ತೇಜಸ್ ಮತ್ತು ಪಾಕಿಸ್ತಾನದ ಜೆಎಫ್-17 ಥಂಡರ್ ಯುದ್ಧ ವಿಮಾನ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಭಾರತೀಯ ವಾಯು ಸೇನೆ ಹಾಗೂ ನೌಕಾ ಪಡೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ತೇಜಸ್ ಹಗುರ ಯುದ್ಧ ವಿಮಾನವನ್ನು ನಿರ್ಮಿಸುತ್ತಿದೆ. ಇದಕ್ಕೆ ಬಲಾಬಲವಾಗಿ ಪಾಕಿಸ್ತಾನದ ಜೆಎಫ್-17 ಥಂಡರ್ ಫೈಟರ್ ಜೆಟ್ ಎದ್ದು ಕಾಣಿಸಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಜೆಎಫ್-17 ಥಂಡರ್ ಫೈಟರ್ ಜೆಟನ್ನು ಚೀನಾದ ವೈಮಾನಿಕ ಉದ್ಯಮ ಕಾರ್ಪೊರೇಷನ್ (AVIC) ಜೊತೆಗಾರಿಕೆಯಲ್ಲಿ ಪಾಕಿಸ್ತಾನ ಏರೋನಾಟಿಕಲ್ಸ್ ಕಾಂಪ್ಲೆಕ್ಸ್ (ಪಿಎಸಿ) ನಿರ್ಮಿಸಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಕಳೆಗುಂದಿರುವ ಮಿಗ್-21 ಫೈಟರ್ ವಿಮಾನಗಳ ಸ್ಥಾನವನ್ನು ತುಂಬಿಕೊಂಡಿರುವ ಎಚ್‌ಎಎಲ್ ತೇಜಸ್, ಸಿಂಗಲ್ ಸೀಟರ್ ಹಾಗೂ ಸಿಂಗಲ್ ಜೆಟ್ ಎಂಜಿನ್ ನಿಯಂತ್ರಿತ ಬಹು ಕ್ರಿಯಾತ್ಮಕ ಯುದ್ಧ ವಿಮಾನವಾಗಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಇದು ರಿಲಾಕ್ಸ್ಡ್ ಸ್ಟಾಟಿಕ್ ಸ್ಟೆಬಿಲಿಟಿ, ಫ್ಲೈ ಬೈ ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಂ, ಬಹು ಕ್ರಿಯಾತ್ಮಕ ರಾಡಾರ್, ಇಂಟೇಗ್ರೇಟಡ್ ಡಿಜಿಟಲ್ ಏವಿಯಾನಿಕ್ಸ್ ಸಿಸ್ಟಂ, ಕಾಂಪೊಸಿಟ್ ಮೆಟಿರಿಯಲ್ ರಚನೆ, ಫ್ಲಾಟ್ ರೇಟಡ್ ಎಂಜಿನ್ ಗಳಂತಹ ಸಮಗ್ರ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಎರನಡೇ ಸೂಪರ್ ಸೋನಿಕ್ ಯುದ್ಧ ವಿಮಾನ ಇದಾಗಿದ್ದು, 3,000 ಕೀ.ಮೀ. ವ್ಯಾಪ್ತಿಯ ವರೆಗೆ ಗಂಟೆಗೆ 2000 ಕೀ.ಮೀ.ಗಳಷ್ಟು ವೇಗದಲ್ಲಿ ದಾಳಿಯಿಡುವ ಸಾಮರ್ಥ್ಯ ಹೊಂದಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಅಷ್ಟೇ ಯಾಕೆ ಇತ್ತೀಚೆಗಷ್ಟೇ ಸಾಗಿದ ಬಹರೈನ್ ಅಂತರಾಷ್ಟ್ರೀಯ ಏರ್ ಶೋದಲ್ಲೂ ಭಾರತದ ತೇಜಸ್ ಹಗುರ ಯುದ್ಧ ವಿಮಾನವು ತನ್ನ ಸಾಮರ್ಥ್ಯವನ್ನು ತೋರಿಸಿಕೊಂಡಿದೆ. ಅಲ್ಲದೆ ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ವಿದೇಶಗಳಿಗೆ ರಫ್ತು ಮಾಡುವ ಯೋಜನೆಯನ್ನು ಹೊಂದಿದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಪಿಎಸಿ ಜೆಎಫ್-17 ಥಂಡರ್ ಕೂಡಾ ಒಂದು ಹಗುರ ಭಾರದ ಸಿಂಗಲ್ ಎಂಜಿನ್ ಬಹು ಕ್ರಿಯಾತ್ಮಕ ಯುದ್ಧ ವಿಮಾನವಾಗಿದೆ. ಇದನ್ನು ಪಾಕಿಸ್ತಾನ್ ಹಾಗೂ ಚೀನಾ ಜಂಟಿಯಾಗಿ ಅಭಿವೃದ್ಧಿಗೊಳಿಸಿದ್ದು, ವೈಮಾನಿಕ ಬೇಹುಗಾರಿಕೆಗೆ, ನೆಲ ದಾಳಿ ಮತ್ತು ವಿಮಾನ ಪ್ರತಿಬಂಧಗಳಿಗೆ ಬಳಕೆ ಮಾಡಲಾಗುವುದು.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಏರ್ ಟು ಏರ್ ಹಾಗೂ ಏರ್ ಟು ಸರ್ಫೆಸ್ ದಾಳಿ ಸಾಮರ್ಥ್ಯವನ್ನು ಹೊಂದಿರುವ ಜೆಎಫ್-17, 3,000 ಕೀ.ಮೀ. ವ್ಯಾಪ್ತಿಯಲ್ಲಿ ಗಂಟೆಗೆ 2205 ಕೀ.ಮೀ. ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತದೆ.

ತೇಜಸ್ vs ಜೆಎಫ್-17 ಥಂಡರ್ ಯುದ್ಧ ವಿಮಾನ

ಒಟ್ಟಿನಲ್ಲಿ ಈ ಎರಡು ಯುದ್ಧ ವಿಮಾನಗಳನ್ನು ತುಲನೆ ಮಾಡಿ ನೋಡಿದಾಗ ಉಭಯ ಸೇನೆಗಳು ಬಲಾಬಲದ ಸಾಮರ್ಥ್ಯವನ್ನು ಹೊಂದಿದೆ.

ಇವನ್ನೂ ಓದಿ...

01. ವಿಶ್ವದ ದೊಡ್ಡಣ್ಣ ಅಮೆರಿಕ; ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ?

02. ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!

Most Read Articles

Kannada
Read more on ವಿಮಾನ plane
English summary
HAL Tejas Vs Pakistan's JF-17 Thunder fighter jets
Story first published: Tuesday, February 23, 2016, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X