ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

Written By:

ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನೆರೆಯ ಚೀನಾ ದೇಶ ಕೂಡಾ ಅತೀವ ಸಂಚಾರ ದಟ್ಟಣೆಯಿಂದ ಹೊರತಾಗಿಲ್ಲ. ಸಿಸಿಟಿವಿ ನ್ಯೂಸ್ ಬಿಡುಗಡೆ ಮಾಡಿರುವ ತಾಜಾ ಚಿತ್ರಗಳು ಇದನ್ನು ಮತ್ತಷ್ಟು ಪುಷ್ಠಿಕರಿಸುತ್ತಿದೆ.

ವಾಹನ ಕ್ಷೇತ್ರದಲ್ಲಿ ಚೀನಾ ಎಷ್ಟು ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿದೆಯೋ ಅಷ್ಟೇ ವೇಗದಲ್ಲಿ ಅಲ್ಲಿನ ವಾಹನ ದಟ್ಟಣೆ ಕೂಡಾ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಈ ಎಕ್ಸ್ ಕ್ಲೂಸಿವ್ ಚಿತ್ರಗಳನ್ನು ಮಿಸ್ ಮಾಡದೇ ನೋಡಿ

ಚಿತ್ರ ಕೃಪೆ: ಸಿಸಿಟಿವಿ ನ್ಯೂಸ್

ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

ಅಂದ ಹಾಗೆ ಚೀನಾ ರಾಷ್ಟ್ರೀಯ ದಿನದ ಸಂಭ್ರಮಾಚರಣೆಯ ಅಂಗವಾಗಿ ಕಳೆದ ಒಂದು ವಾರದಿಂದ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಕಂಡುಬಂದಿದೆ.

ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

ಚೀನಾ ರಾಷ್ಟ್ರೀಯ ದಿನದ ಕೊನೆಯ ದಿನದ ವಾಹನ ದಟ್ಟಣೆಯ ಚಿತ್ರಗಳನ್ನು ಸಿಸಿಟಿ ನ್ಯೂಸ್ ವಾಹನ ಪ್ರೇಮಿಗಳ ಜೊತೆ ಹಂಚಿಕೊಂಡಿದೆ.

ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

ಬೀಜಿಂಗ್-ಹಾಂಕಾಂಗ್-ಮಕಾವ್ ಹೆದ್ದಾರಿಯ ಮಧ್ಯೆ ಟಾಲ್ ಗೇಟ್ ನಲ್ಲಿ ಭಾರಿ ವಾಹನ ದಟ್ಟಣೆ ಕಂಡುಬಂದಿತ್ತು ಎಂದು ಹೈವೇ ಮಾನಿಟರಿಂಗ್ ಆ್ಯಂಡ್ ರೆಸ್ಪಾನ್ಸ್ ಸೆಂಟರ್ ತಿಳಿಸಿದೆ.

ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

ಮಾಧ್ಯಮಗಳ ವರದಿಯ ಪ್ರಕಾರ ಏಳು ದನಗಳ ಪರ್ಯಂತದ 'ಗೋಲ್ಡನ್ ವೀಕ್' ರಜಾ ದಿನಗಳಲ್ಲಿ 750 ಮಿಲಿಯನ್ ಜನರು ಪ್ರಯಾಣಿಸಿದ್ದರು. ಇದು ಚೀನಾ ಒಟ್ಟು ಜನಸಂಖ್ಯೆಯ ಅರ್ಧದಷ್ಟಾಗಿದೆ.

ಬೀಜಿಂಗ್‌ನಲ್ಲಿ ಸಂಚಾರ ದಟ್ಟಣೆ; ವೈಮಾನಿಕ ಚಿತ್ರಗಳು

ಪ್ರಸ್ತುತ ಸಂಚಾರ ದಟ್ಟಣೆಯನ್ನು ಸಾಧ್ಯವಾದಷ್ಟು ನಿಯಂತ್ರಿಸುವ ಸಲುವಾಗಿ ಹೊಂದಿಕೊಳ್ಳುವ ರಜಾ ವ್ಯವಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಇದರಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಹೆಚ್ಚುವರಿ ಸ್ಥಳೀಯ ರಜೆಯನ್ನು ಘೋಷಿಸಲಾಗುತ್ತಿದೆ.

English summary
Heavy traffic congestion in Beijing
Story first published: Thursday, October 8, 2015, 11:23 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark