YouTube

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳಿವು!

ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆಯು ಕೂಡ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಮಾರಾಟವಾಗುತ್ತಿವೆ. ಕೈಗೆಟುಕುವ ಬೆಲೆಯ ಕಾರುಗಳಿಂದ ಬಹುಕೋಟಿ ಮೌಲ್ಯದ ಐಷಾರಾಮಿ ಸೂಪರ್ ಕಾರುಗಳು ಕೂಡ ಮಾರಾಟವಾಗುತ್ತಿವೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಭಾರತದಲ್ಲಿ ನಮ್ಮ ದೇಶೀಯ ಕಾರುಗಳನ್ನು ಹೊರತುಪಡಿಸಿ, ಸಾಕಷ್ಟು ವಿದೇಶಿ ಮೂಲದ ಕಾರುಗಳನ್ನು ನೋಡಬಹುದು. ಭಾರತದಲ್ಲಿರುವ ಕೆಲವೊಂದು ಶ್ರೀಮಂತರು ಮತ್ತು ಸೆಲಬ್ರಿಟಿಗಳ ಬಳಿ ನಾವು ಹೆಚ್ಚಾಗಿ ಈ ರೀತಿಯ ಕಾರುಗಳನ್ನು ನೋಡಬಹುದಾಗಿದೆ. ಭಾರತದಲ್ಲಿರುವ ಕೆಲವೊಂದು ಶ್ರೀಮಂತರು ಮತ್ತು ಸೆಲಬ್ರಿಟಿಗಳ ಬಳಿ ನಾವು ಹೆಚ್ಚಾಗಿ ಈ ರೀತಿಯ ಕಾರುಗಳನ್ನು ನೋಡಬಹುದಾಗಿದೆ. ಇದರ ಜೊತೆಗೆ ಶ್ರೀಮಂತರು ಮತ್ತು ಸೆಲಬ್ರಿಟಿಗಳು ದುಬಾರಿ ಬೆಲೆಯ ಐಷಾರಾಮಿಗಳನ್ನು ಗಿಫ್ಟ್ ಕೊಡುವ ಟ್ರೆಂಡ್ ಇದೆ. ಭಾರತದಲ್ಲಿ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು ನೀಡಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಅಮಿತಾಬ್ ಬಚ್ಚನ್- ರೋಲ್ಸ್ ರಾಯ್ಸ್ ಫ್ಯಾಂಟಮ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಏಕಲವ್ಯ ಸಿನಿಮಾವನ್ನು ಪೂರ್ಣಗೊಳಿಸಿದಾಗ ಫ್ಯಾಂಟಮ್ ಕಾರನ್ನು ಅವರು ಮೆಚ್ಚುಗೆಯ ಸಂಕೇತವಾಗಿ ಉಡುಗೊರೆಯಾಗಿ ನೀಡಿದ್ದರು.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಫ್ಯಾಂಟಮ್ ಕಾರು ಮಾದರಿಯು ರೋಲ್ಸ್ ರಾಯ್ಸ್ ನಿರ್ಮಾಣದ ಪ್ರಮುಖ ಕಾರು ಮಾದರಿಯಾಗಿದ್ದು, ಉಡುಗೊರೆ ಕಾರನ್ನು ಅಮಿತಾಬ್ ಬಚ್ಚನ್ ಅವರು ಮಾರಾಟ ಮಾಡಿದ್ದಾರೆ. ಸದ್ಯ ಈ ಕಾರು ಕರ್ನಾಟಕದಲ್ಲಿ ಉದ್ಯಮಿಯೊಬ್ಬರ ಕಾರ್ ಕಲೆಕ್ಷನ್‌ನಲ್ಲಿದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಟ್ವಿಂಕಲ್ ಖನ್ನಾ- ಬೆಂಟ್ಲಿ ಫ್ಲೈಯಿಂಗ್ ಸ್ಪರ್

ಅಕ್ಷಯ್ ಕುಮಾರ್ ತಮ್ಮ 10ನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಅನ್ನು ಉಡುಗೊರೆಯಾಗಿ ನೀಡಿದರು.ಫ್ಲೈಯಿಂಗ್ ಸ್ಪರ್ ಸ್ಪೋರ್ಟಿನೆಸ್ ಮತ್ತು ಐಷಾರಾಮಿ ಮಿಶ್ರಣವಾಗಿದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಪ್ರೀಮಿಯಂ ಪೀಚರ್ಸ್ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಈ ಕಾರಿನಲ್ಲಿ 6-ಲೀಟರ್ W12 ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಅಕ್ಷಯ್ ಕುಮಾರ್ ಫ್ಲೈಯಿಂಗ್ ಸ್ಪರ್ ಖರೀದಿಸಿದಾಗ ಅದರ ಬೆಲೆ ಎಕ್ಸ್ ಶೋ ರೂಂ ಪ್ರಕಾರ ಸುಮಾರು ರೂ.3 ಕೋಟಿಯಾಗಿತ್ತು.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಮಾನ್ಯತಾ ದತ್- ರೋಲ್ಸ್ ರಾಯ್ಸ್ ಘೋಸ್ಟ್

ಸಂಜಯ್ ದತ್ ತಮ್ಮ ಟ್ವಿನ್ ಮಕ್ಕಳ ಜನ್ಮವನ್ನು ಆಚರಿಸಲು ತಮ್ಮ ಪತ್ನಿ ಮಾನ್ಯತಾ ದತ್ತಾಗೆ ರೋಲ್ಸ್ ರಾಯ್ಸ್ ಘೋಸ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ರೋಲ್ಸ್ ರಾಯ್ಸ್ ಲೈನ್-ಅಪ್‌ನಲ್ಲಿ ಘೋಸ್ಟ್ ಅತ್ಯಂತ ಕೈಗೆಟುಕುವ ವಾಹನವಾಗಿದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಸಂಜಯ್ ದತ್ ಘೋಸ್ಟ್ ಖರೀದಿಸಿದಾಗ ಅದರ ಬೆಲೆ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ. 2.5 ಕೋಟಿಯಾಗಿತ್ತು. ಇನ್ನು ನಿಮಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. ಘೋಸ್ಟ್ ಒಂದು ಅಲಂಕಾರಿಕ ನಂಬರ್ ಪ್ಲೇಟ್ ಅನ್ನು ಸಹ ಹೊಂದಿದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಅರ್ಪಿತಾ ಖಾನ್- ರೋಲ್ಸ್ ರಾಯ್ಸ್ ಫ್ಯಾಂಟಮ್

ಸಲ್ಮಾನ್ ಖಾನ್ ಅವರು ತಮ್ಮ ದತ್ತು ತಂಗಿ ಅರ್ಪಿತಾ ಖಾನ್ ಅವರ ಮದುವೆಗೆ ಪ್ರಮುಖ ರೋಲ್ಸ್ ರಾಯ್ಸ್ ಅನ್ನು ಉಡುಗೊರೆಯಾಗಿ ನೀಡಿದರು. ಫ್ಯಾಂಟಮ್ ಅನ್ನು ಬಿಳಿ ಬಣ್ಣದ ಸೊಗಸಾದ ಬಣ್ಣವನ್ನು ಹೊಂದಿದೆ, ಮದುವೆಯ ಮೂರು ದಿನಗಳ ನಂತರ ಅರ್ಪಿತಾ ಮತ್ತು ಅವರ ಪತಿಗೆ ನೀಡಲಾಯಿತು.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ರೋಲ್ಸ್ ರಾಯ್ಸ್ ಫ್ಯಾಂಟಮ್ ಜನಪ್ರಿಯ ಐಷಾರಾಮಿ ಮತ್ತು ಅತ್ಯಾಧುನಿಕ ಪೀಚರ್ಸ್ ಹೊಂದಿರುವ ಕಾರು ಆಗಿದೆ, ಇನ್ನು ಅರ್ಪಿತಾ ಹೆರಿಗೆಯಾದಾಗ ಸಲ್ಮಾನ್ ಖಾನ್ ಬಿಎಂಡಬ್ಲ್ಯು 7-ಸೀರಿಸ್ ಕಾರನ್ನು ನೀಡಲಾಗಿತ್ತು. ಈ ಬಿಎಂಡಬ್ಲ್ಯು 7-ಸೀರಿಸ್ ಐಷಾರಾಮಿ ಸೆಡಾನ್ ಆಗಿದೆ,

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಶೀತಲ್ ದುಗ್ಗರ್ - ಲ್ಯಾಂಬೊರ್ಗಿನಿ ಹುರಾಕನ್

ಶೀತಲ್ ದುಗ್ಗರ್ ಅವರು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನ ಮಾಲೀಕರಾದ ಮೊದಲ ಮಹಿಳೆ. ಉದ್ಯಮಿಯಾಗಿರುವ ಪತಿ ಅವರಿಗೆ ಸ್ಪೋರ್ಟ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ಬೆಲೆಯು ರೂ.3.6 ಕೋಟಿಯಾಗಿದೆ,

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಈ ಸೂಪರ್ ಕಾರಿನಲ್ಲಿ ನ್ಯಾಚುರಲ್ ವಿ10 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಮತ್ತು 560 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಕಾರು 325 ಟಾಪ್ ಸ್ಪೀಡ್ ಅನು ಹೊಂದಿದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ರಾಮ್ ಚರಣ್- ಆಸ್ಟನ್ ಮಾರ್ಟಿನ್ ವಿ8 ವಾಂಟೇಜ್

ಟಾಲಿವುಡ್ ನಟ ರಾಮ್ ಚರಣ್ ಅವರು ತಮ್ಮ ಮದುವೆಯಲ್ಲಿ ಆಸ್ಟನ್ ಮಾರ್ಟಿನ್ V8 ವಾಂಟೇಜ್ ಅನ್ನು ಉಡುಗೊರೆಯಾಗಿ ಪಡೆದರು.ಸ್ಪೋರ್ಟ್ಸ್ ಕಾರು ಅವರ ಅತ್ತೆಯಂದಿರಿಂದ ಉಡುಗೊರೆಯಾಗಿತ್ತು. ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ರಾಮ್ ಚರಣ್ ಕೂಡ ಒಬ್ಬರು.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಸುಮನ್ ಮೆಹ್ತಾ - ಲ್ಯಾಂಬೊರ್ಗಿನಿ ಹುರಾಕನ್

ಬಿಜೆಪಿ ಶಾಸಕ ಸುಮನ್ ಮೆಹ್ತಾ ಅವರ ಪತಿ ಈ ಸ್ಪೋರ್ಟ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಮನ್ ಮೆಹ್ತಾ ಹೊಚ್ಚ ಹೊಸ ಲ್ಯಾಂಬೊರ್ಗಿನಿ ಕಾರು ಆಟೋ-ರಿಕ್ಷಾದೊಂದಿಗೆ ಅಪಘಾತಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ವಿವಾದಗಳು ಆಗಿತ್ತು. ಈ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ ಸುಮನ್ ಮೆಹ್ತಾ ಸಾಕಷ್ಟು ಜನಪ್ರಿಯತೆ ಗಳಿಸಿದರು.

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ನೀತಾ ಅಂಬಾನಿ - ಮೇಬ್ಯಾಕ್ 62

ಮುಖೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅಂಬಾನಿಗೆ 50ನೇ ಹುಟ್ಟುಹಬ್ಬದಂದು ಮೇಬ್ಯಾಕ್ 62 ಅನ್ನು ಉಡುಗೊರೆಯಾಗಿ ನೀಡಿದರು. ಮೇಬ್ಯಾಕ್ 62 ಪ್ರಮುಖ ಮಾದರಿಯಾಗಿತ್ತು ಮತ್ತು ರೋಲ್ಸ್ ರಾಯ್ಸ್‌ಗೆ ನೇರವಾಗಿ ಸ್ಪರ್ಧಿಸುವಂತೆ ಮಾಡಲಾಗಿತ್ತು. ಇದರ ಬೆಲೆಯು ಸುಮಾರು ರೂ.5 ಕೋಟಿಯಾಗಿದೆ

ಭಾರತದ ಅತ್ಯಂತ ದುಬಾರಿ ಬೆಲೆಯ ಐಷಾರಾಮಿ ಕಾರು ಉಡುಗೊರೆಗಳು

ಶಿಲ್ಪಾ ಶೆಟ್ಟಿ - ಲ್ಯಾಂಬೊರ್ಗಿನಿ ಗಲ್ಲಾರ್ಡೊ

ರಾಜ್ ಕುಂದ್ರಾ ಅವರು ತಮ್ಮ ಪತ್ನಿ ಶಿಲ್ಪಾ ಶೆಟ್ಟಿಗೆ ಲಂಬೋರ್ಗಿನಿ ಗಲ್ಲಾರ್ಡೊ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ಪೋರ್ಟ್ಸ್ ಕಾರನ್ನು ನೀಲಿ ಬಣ್ಣದ ಉತ್ತಮ ಪೇಂಟ್ ಶೇಡ್‌ನ ಅನ್ನು ಹೊಂದಿದೆ. ಈ ಕಾರಿನ ಬೆಲೆಯು ಇವರು ಖರೀದಿಸುವಾಗ ಎಕ್ಸ್ ಶೋ ರೂಂ. ಪ್ರಕಾರ ಸುಮಾರು ರೂ.3.4 ಕೋಟಿಗಿತ್ತು,

Most Read Articles

Kannada
English summary
Here is list of indias most expensive car gifts details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X