ತಿಗಣೆ ಕಾಟ ಅಂತ ಕಾರಿಗೆ ಮದ್ಯ ಸಿಂಪಡಿಸಿದ ಭೂಪ; ಮುಂದೆನಾಯ್ತು?

By Nagaraja

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ. ತಿಗಣೆ ಕಾಟವನ್ನು ಸಹಿಸಲಾರದ ವ್ಯಕ್ತಿಯೋರ್ವರು ಕಾರಿನ ಒಳಗಡೆಯೆಲ್ಲ ಮದ್ಯವನ್ನು ಸಿಂಪಡಿಸಿದ್ದಾರೆ. ಪರಿಣಾಮ ಇಡೀ ಕಾರೇ ಭಸ್ಮವಾಗಿಬಿಟ್ಟಿದೆ.

ಏನಿದು ಘಟನೆ ? ಅಷ್ಟಕ್ಕೂ ತಿಗಣೆ ಕಾಟಕ್ಕೆ ಆಲ್ಕೋಹಾಲ್ ಮದ್ದೇ? ಇಂತಹದೊಂದು ತ್ರಿಶಂಕು ಪರಿಸ್ಥಿತಿಯಿಂದ ಪಾರಾಗುವುದಾದರೂ ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಫೋಟೊ ಸ್ಲೈಡ್ ನಲ್ಲಿ ಮಾಹಿತಿಯನ್ನು ಪಡೆಯಿರಿ...

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಅಮೆರಿಕದ ನ್ಯೂಯಾರ್ಕ್ ಸಮೀಪದ ಲಾಂಗ್ ಐಲ್ಯಾಂಡ್ ನ ಈಸ್ಟ್ ಪೋರ್ಟ್ ಶಾಪಿಂಗ್ ಸೆಂಟರ್ ಪಕ್ಕದಲ್ಲಿ ನಿಲುಗಡೆಗೊಳಿಸಿದ್ದ ಕಾರಿಗೆ ಆಕಸ್ಮತ್ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದಾಗಿ ಸಮೀಪದ ಎರಡು ಕಾರಿಗಳಿಗೂ ಬೆಂಕಿ ವ್ಯಾಪಿಸಿದ್ದರಿಂದ ಒಟ್ಟು ಮೂರು ಕಾರುಗಳು ಬೆಂಕಿಗಾಹುತಿಯಾಗಿದೆ.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಬಾಡಿಗೆಗೆ ಕಾರು ತಗೊಂಡಿದ್ದ 44ರ ಹರೆಯದ ಸ್ಕಾಟ್ ಕೆಮಿರಿ ಎಂಬವರೇ ಇಂತಹದೊಂದು ಪ್ರಯೋಗ ಮಾಡಿದ್ದಾರೆ. ತಿಗಣೆ ಕಾಟದಿಂದ ಪಾರಾಗಲು ಅವರು ಕಾರಿನ ಸೀಟು ಮುಂತಾದೆಡೆಗಳಿಗೆ ಆಲ್ಕೋಹಾಲ್ ಸಿಂಪಡಿಸಿದ್ದರು.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಆದರೆ ಈ ವಿಚಾರವನ್ನು ಮರೆದಿದ್ದ ಸ್ಕಾಟ್ ಸಿಗರೇಟ್ ಸೇದುವ ತರಾತುರಿಯಲ್ಲಿ ಲೈಟರ್ ಹಚ್ಚಿಕೊಂಡಿದ್ದೇ ತಡ ಇಡೀ ಕಾರಿಗೆ ಬೆಂಕಿ ಆವರಿಸಿಕೊಂಡಿತ್ತು.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಅದೃಷ್ಟವಶಾತ್ ಸ್ಕಾಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ತಿಗಣೆ ಕಾಟದಿಂದಾಗಿ ಇಡೀ ಕಾರು ಸುಟ್ಟು ಕರಕಲಾಗಿದೆ.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಪೊಲೀಸ್ ವಿಚಾರಣೆ ವೇಳೆ ಘಟನೆ ಬಗ್ಗೆ ವಿವರಿಸಿರುವ ಸ್ಕಾಟ್, ತಿಗಣೆ ಕಾಟದಿಂದ ಪಾರಾಗಲು ಸ್ನೇಹಿತನ ಸಲಹೆಯಂತೆ ಕಾರಿಗೆ ಆಲ್ಕೋಹಾಲ್ ಹಚ್ಚಿರುವುದಾಗಿ ತಿಳಿಸಿದ್ದಾರೆ.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಸದ್ಯ ಚಾಲಕನ ವ್ಯಥೆಯನ್ನು ಅರಿತುಕೊಂಡಿರುವ ಪೊಲೀಸರು ಸಹ ಮೃದು ಧೋರಣೆ ತಾಳಿದ್ದು ಯಾವುದೇ ಕ್ರಿಮಿನಲ್ ದೂರು ದಾಖಲಿಸಿಕೊಂಡಿಲ್ಲ.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಅಷ್ಟಕ್ಕೂ ತಿಗಣೆ ನಿವಾರಣೆಗೆ ಆಲ್ಕೋಹಾಲ್ ಅತ್ಯುತ್ತಮ ಮದ್ದು. ಆತ ಮಾಡಿರುವುದರಲ್ಲಿ ಯಾವ ತಪ್ಪು ಇಲ್ಲ. ಆದರೆ ಮದ್ಯ ಬೆಂಕಿಯನ್ನು ಬೇಗನೇ ಆವರಿಸಿಕೊಳ್ಳುತ್ತದೆ ಎಂಬುದನ್ನು ಅರಿತುಕೊಳ್ಳಲು ತಡ ಮಾಡಿದ್ದಾರೆ ಅಷ್ಟೇ.

ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ಇಲ್ಲಿದೆ ಪರಿಹಾರ

ಹಾಗಿದ್ದರೆ ನಿಮ್ಮ ಕಾರಲ್ಲೂ ತಿಗಣೆ ಕಾಟವಿದೆಯೇ? ನೀವೇನು ಮಾಡಬೇಕು? ಇಲ್ಲಿ ಹೇಳಿಕೊಡಲಾಗುವ ಕೆಲವೊಂದು ಕ್ರಿಮಿನಾಶಕಗಳ ಪ್ರಯೋಗ ಮಾಡಿ ನೋಡಬಹುದು.

01. ವ್ಯಾಕ್ಯೂಮ್ ಕ್ಲೀನರ್

01. ವ್ಯಾಕ್ಯೂಮ್ ಕ್ಲೀನರ್

ವ್ಯಾಕ್ಯೂಮ್ ಕ್ಲೀನರ್ ಸಹಾಯದೊಂದಿಗೆ ತಿಗಣೆಯನ್ನು ದೂರಮಾಡಬಹುದಾಗಿದೆ. ಸಾಮಾನ್ಯವಾಗಿ ಸೀಟು ಒಳಗಡೆಯ ಹೋದಿಕೆ, ಕಾರ್ಪೆಟ್ ಮೇಲೆ ತಿಗಣೆಗಳಿರುವ ಸಾಧ್ಯತೆಗಳಿದ್ದು, ಇವುಗಳತ್ತ ಸೂಕ್ಷ್ಮವಾಗಿ ವ್ಯಾಕ್ಯೂಮ್ ಪ್ರಯೋಗ ಮಾಡಬಹುದಾಗಿದೆ.

02. ಸೂರ್ಯ ಕಿರಣ

02. ಸೂರ್ಯ ಕಿರಣ

ನಿಮ್ಮ ಕಾರಿನ ಸೀಟು ಹೋದಿಕೆಯಲ್ಲಿ ತಿಗಣೆಯಿದೆ ಎಂಬುದು ಖಚಿತವಾದ್ದಲ್ಲಿ ತಡ ಮಾಡದೇ ಬಿಸಿಲಿನಲ್ಲಿಡಿ. ಸೂರ್ಯನ ಉರಿ ಬಿಸಿಲಿನ ಸಹಾಯದಿಂದ ನೈಸರ್ಗಿಕವಾಗಿ ತಿಗಣೆಗಳನ್ನು ದೂರ ಮಾಡಬಹುದಾಗಿದೆ.

03. ಕೆಮಿಕಲ್ ಸ್ಪ್ರೇ

03. ಕೆಮಿಕಲ್ ಸ್ಪ್ರೇ

ಅಂಗಡಿಗಳಲ್ಲಿ ತಿಗಣೆ ನಿವಾರಣೆಗೆ ವಿಶೇಷ ರೀತಿಯ ಕೀಟನಾಶಕಗಳು ದೊರೆಯುತ್ತದೆ. ಇವುಗಳ ಪ್ರಯೋಗದ ಮೂಲಕವೂ ನೀವಿದರ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಯಾವುದೇ ಕಾರಣಕ್ಕೂ ಪಯಣಕ್ಕೂ ಮೊದಲು ಇದನ್ನು ಸಿಂಪಡಿಸುವುದು ಬೇಡ. ಅಲ್ಲದೆ ಮಕ್ಕಳಿಂದ ಸದಾ ದೂರವಿಡಿ.

04. ಸ್ಟೀಮ್ ಕ್ಲೀನಿಂಗ್

04. ಸ್ಟೀಮ್ ಕ್ಲೀನಿಂಗ್

ಕಾರಿನೊಳಗೆ ಯಾವುದೇ ಮೂಲೆ ಮೂಲೆಯಲ್ಲೂ ಅವಿತುಕೊಂಡರೂ ಸಹ ಸ್ಟೀಮ್ ಕ್ಲೀನಿಂಗ್ ಮುಖಾಂತರ ತಿಗಣೆಗಳನ್ನು ಸರ್ವನಾಶ ಮಾಡಬಹುದಾಗಿದೆ. ಇದಕ್ಕಾಗಿ ತರಬೇತುದಾರರ ಸಹಾಯವನ್ನು ನೀವು ಪಡೆಯಬಹುದಾಗಿದೆ.

05. ಬೇಬಿ ಪೌಡರ್

05. ಬೇಬಿ ಪೌಡರ್

ಇದು ಅತ್ಯಂತ ಸರಳ ಹಾಗೂ ಸುಲಭ ವಿಧಾನವಾಗಿದ್ದು, ತಿಗಣೆ ಕಾಟದ ಪ್ರಾರಂಭಿಕ ಘಟ್ಟದಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿಕೊಳ್ಳಲಿದೆ. ಆದರೆ ಸಂಪೂರ್ಣ ಕಾರನ್ನು ಆವರಿಸಿಕೊಂಡಿದ್ದರೆ ರಾಸಾಯನಿಕ ಮದ್ದುಗಳ ಸಹಾಯ ಪಡೆಯಬೇಕಾಗುತ್ತದೆ.

06. ಆಲ್ಕೋಹಾಲ್

06. ಆಲ್ಕೋಹಾಲ್

ಮೇಲೆ ತಿಳಿಸಿದಂತೆ ಆಲ್ಕೋಹಾಲ್ ತಿಗಣೆ ಕಾಟಕ್ಕೆ ಸರಿಯಾದ ಮದ್ದು ಆಗಿದೆ. ಆದರೆ ಇಂತಹ ಎಡವಟ್ಟು ಮಾಡದೆಯೇ ಕಾರನ್ನು ಸ್ವಚ್ಛವಾಗಿಡುವ ಮೂಲಕ ಆದಷ್ಟು ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ನಿರಂತರ ಅಂತರಾಳದಲ್ಲಿ ಕಾರು ವಾಶಿಂಗ್ ಮಾಡಲು ಮರೆಯದಿರಿ.

Most Read Articles

Kannada
English summary
How to get rid of bed bugs in your car
Story first published: Monday, April 20, 2015, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X