Just In
Don't Miss!
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಐಐಟಿ ಪದವೀಧರರ ಸೆಲ್ಫ್ ಕಂಟ್ರೋಲ್ ಸ್ಕೂಟರ್ ಅನಾವರಣ: ಡ್ರೈವ್ ಮಾಡಬೇಕಿಲ್ಲ, ಕರೆದರೆ ತಾನಾಗೆ ಬರುತ್ತದೆ!
ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ದ್ವಿಚಕ್ರ ವಾಹನಗಳು ನಿತ್ಯ ಜೀವನದ ಭಾಗವಾಗಿರುವುದಲ್ಲದೇ ಸಾರಿಗೆಯ ಪ್ರಮುಖ ಮೂಲವಾಗಿದೆ. ಇದೇ ಕಾರಣಕ್ಕೆ ದೇಶದಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ವಿಕ್ರಯಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಾಹನ ತಯಾರಕರು ಕೂಡ ಮಾರುಕಟ್ಟೆಯಲ್ಲಿ ಹಲವು ವೈಶಿಷ್ಟ್ಯಗಳನ್ನೊಳಗೊಂಡ ಹೊಸ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಲೇ ಬಂದಿದ್ದಾರೆ.

ಇದೀಗ ಇಬ್ಬರು ಐಐಟಿ ಪದವೀಧರರು ಲಿಗರ್ ಮೊಬಿಲಿಟಿ ಎಂಬ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಸುಮಾರು ಎರಡು ವರ್ಷಗಳ ಸಂಶೋಧನೆಯ ನಂತರ ದೇಶದ ಮೊದಲ ಸ್ವಯಂ-ಸಮತೋಲನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದ್ದಾರೆ.

ಸ್ಟ್ಯಾಂಡ್ ಇಲ್ಲದೆ ನಿಲ್ಲಬಲ್ಲದು
ಈ ಸ್ಕೂಟರ್ ತನ್ನನ್ನು ತಾನೇ ನಿಯಂತ್ರಿಸಬಲ್ಲದು, ಆದ್ದರಿಂದ ನಿಲುಗಡೆ ಮಾಡುವಾಗ ಇದಕ್ಕೆ ಸ್ಟ್ಯಾಂಡ್ ಅಗತ್ಯವಿಲ್ಲ. ಈ ಸ್ಕೂಟರ್ ಇನ್ನೂ ಅದರ ಅಭಿವೃದ್ಧಿ ಹಂತದಲ್ಲಿದ್ದು, ಕಂಪನಿಯು ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ಘೋಷಿಸಿಲ್ಲ. ಈ ಸ್ಕೂಟರ್ ಅನ್ನು ತಯಾರಿಸುವ ಕಂಪನಿಯಾದ ಲಿಗರ್, ಸ್ವಯಂ ನಿಯಂತ್ರಣವು ಸುರಕ್ಷಿತ ಮತ್ತು ಯಾವುದೇ ಚಿಂತೆಯಿಲ್ಲದೆ ಸ್ಕೂಟರ್ ಸವಾರಿ ಮಾಡಬಹುದು ಎಂದು ಹೇಳಿಕೊಂಡಿದೆ.

ಈ ಐಐಟಿ ವಿದ್ಯಾರ್ಥಿಗಳು ಸ್ಕೂಟರ್‌ಗೆ ಅಂತಿಮ ವಿನ್ಯಾಸವನ್ನು ನೀಡುವ ಮೊದಲು ಹಲವಾರು ಪ್ರಾಯೋಗಿಕ ಮೂಲಮಾದರಿಗಳನ್ನು ಮಾಡಿದರು. ಈ ಸ್ಕೂಟರ್ ಮಾದರಿಯಾಗಿದ್ದು, ಮತ್ತಷ್ಟು ಸುಧಾರಿಸಲು ಅಭಿವೃದ್ಧಿ ಹಂತದಲ್ಲಿದೆ. ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್‌ನ ವಿಡಿಯೋವನ್ನು ಸಹ ಕಂಪನಿ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ಕೂಟರ್‌ನ ವೈಶಿಷ್ಟ್ಯಗಳನ್ನು ಹೇಳಲಾಗಿದೆ.

ಸ್ಕೂಟರ್‌ನ ಸ್ವಯಂ-ಸಮತೋಲನ ತಂತ್ರಜ್ಞಾನವು ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಈ ಸ್ಕೂಟರ್ ಸವಾರರಿಲ್ಲದೆ ಸಹ ತನ್ನನ್ನು ತಾನೇ ನಿಯಂತ್ರಿಸುತ್ತದೆ. ಸ್ಕೂಟರ್ ನಿಂದ ಇಳಿದು ಸ್ಟ್ಯಾಂಡ್ ಹಾಕದಿದ್ದರೂ ಈ ಸ್ಕೂಟರ್ ಬೀಳುವುದಿಲ್ಲ. ಅಷ್ಟೇ ಅಲ್ಲ ಸ್ಕೂಟರ್ ಅನ್ನು ಬಲವಾಗಿ ತಳ್ಳಿದರೂ ಸ್ಕೂಟರ್ ಬ್ಯಾಲೆನ್ಸ್ ತಪ್ಪುವುದಿಲ್ಲ.

ಅಪಘಾತದ ಸಮಯದಲ್ಲಿ ಈ ತಂತ್ರಜ್ಞಾನವು ಅತ್ಯಂತ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು, ರಸ್ತೆ ಅಪಘಾತದ ಸಮಯದಲ್ಲಿ ದ್ವಿಚಕ್ರ ವಾಹನ ಚಾಲಕರು ರಸ್ತೆಯ ಮೇಲೆ ಬೀಳದಂತೆ ರಕ್ಷಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಸ್ವಯಂ ನಿಯಂತ್ರಣ ತಂತ್ರಜ್ಞಾನದ ಹೊರತಾಗಿ, ಈ ಸ್ಕೂಟರ್ ನಿಮ್ಮ ಧ್ವನಿಯ ಮೇಲೂ ಕೆಲಸ ಮಾಡುತ್ತದೆ. ಸ್ಕೂಟರ್‌ಗೆ ಸುಧಾರಿತ ಧ್ವನಿ ಕಮಾಂಡ್ ವೈಶಿಷ್ಟ್ಯವನ್ನು ನೀಡಲಾಗಿದೆ. ಧ್ವನಿ ಆಜ್ಞೆಯನ್ನು ನೀಡುವ ಮೂಲಕ ನೀವು ಪಾರ್ಕಿಂಗ್ ಸ್ಥಳದಿಂದ ಸ್ಕೂಟರ್ ಅನ್ನು ಕರೆಸಿಕೊಳ್ಳಬಹುದು.

ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್‌ನಲ್ಲಿ ಕೆಲಸ ಮಾಡುತ್ತಿರುವ ಐಐಟಿ ತಂಡವು ಅದರ ಬೆಲೆಯನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಗೆ ನೀಡಲು ಪ್ರಯತ್ನಿಸುತ್ತಿದೆ. ಸಾಮಾನ್ಯ ಜನರಿಗೆ ತಲುಪದ ಸ್ವಯಂ-ಸಮತೋಲನ ಸ್ಕೂಟರ್ ಅನ್ನು ತಯಾರಿಸಲು ನಾವು ಬಯಸುವುದಿಲ್ಲ ಎಂದು ತಂಡವು ಹೇಳಿಕೊಂಡಿದೆ. ಈ ಸ್ಕೂಟರ್ ಅನ್ನು ಸಾಮಾನ್ಯ ಸ್ಕೂಟರ್‌ನ ಬೆಲೆಗಿಂತ ಕೇವಲ ಶೇ10ರಷ್ಟು ಹೆಚ್ಚಿನ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ.

ಸ್ಕೂಟರ್ ಅದರ ಅಭಿವೃದ್ಧಿ ಹಂತದಲ್ಲಿರುವುದರಿಂದ, ಉತ್ಪಾದನೆಯನ್ನು ಪ್ರಾರಂಭಿಸುವ ಮೊದಲು ಕಂಪನಿಯು ಸ್ಕೂಟರ್‌ನ ಕೆಲವು ಅಂಶಗಳನ್ನು ಸುಧಾರಿಸಲು ಕೆಲಸ ಮಾಡುತ್ತಿದೆ. ಈ ಸಮಯದಲ್ಲಿ, ಲಿಗರ್ ಮೊಬಿಲಿಟಿಯೊಂದೇ ಸ್ವಯಂ ಸಮತೋಲನ ಸ್ಕೂಟರ್‌ನಲ್ಲಿ ಕೆಲಸ ಮಾಡುತ್ತಿಲ್ಲ. ಈಗಾಗಲೇ ಹೋಂಡಾದಂತಹ ದೊಡ್ಡ ಕಂಪನಿಯು ಸಹ ತಮ್ಮ ಸ್ವಯಂ ಸಮತೋಲನ ಬೈಕುಗಳನ್ನು ಪರಿಚಯಿಸಿದೆ.

ಈ ಸ್ಕೂಟರ್‌ನಲ್ಲಿ ಇನ್ನೂ ಹಲವು ವೈಶಿಷ್ಟ್ಗಳು ಇದ್ದು, ಇದು ಮುಂದಿನ ದಿನಗಳಲ್ಲಿ ಸಾಕಷ್ಟು ಕ್ಯಾತಿ ಗಳಿಸುವ ನಿರೀಕ್ಷೆಯಿದೆ. ಭಾರತೀಯ ಕಂಪನಿಗಳಲ್ಲಿ ಇಲ್ಲಿಯವರೆಗೂ ಯಾವ ದ್ವಿಚಕ್ರ ವಾಹನ ಕಂಪನಿಯು ಕೂಡ ಇಂತಹ ಸೆಲ್ಫ ಕಂಟ್ರೋಲ್ ವಾಹನವನ್ನು ಪರಿಚಯಿಸಿಲ್ಲ.

ಇದು ದೇಶೀಯ ವಾಹನ ಎಂಬ ಹೆಮ್ಮೆಗೆ ಪಾತ್ರವಾಗಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಂಡು ಮಾರುಕಟ್ಟಯಲ್ಲಿ ಲಭ್ಯವಾಗಲಿದೆ. ಈಗಾಗಲೇ ವಾಹನ ತಯಾರಕರು ಬಹುತೇಕ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಮುಗಿಸಿದ್ದು, ಆದಷ್ಟು ಬೇಗ ಸಾರ್ವಜನಿಕರನ್ನು ಗತಲುಪಲಿದೆ ಎಂದು ತಯಾರಕರು ಭರವಸೆ ನೀಡಿದ್ದಾರೆ.

ಒಂದು ವೇಳೆ ಇದು ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಗೆ ಲಭ್ಯವಾದರೆ ಪ್ರಸ್ತುತವಿರುವ ಇತರ ಸ್ಕೂಟರ್‌ಗಳಿಗೆ ಗಟ್ಟಿಯಾದ ಪೈಪೋಟಿ ನೀಡಲಿದೆ. ಇತರೆ ಸ್ಕೂಟರ್‌ಗಳು ಸಹ ತಮ್ಮ ವಾಹನಗಳಲ್ಲಿ ಮತ್ತಷ್ಟು ವೈಶಿಷ್ಟಗಳ ಜೋಡಣೆಯೊಂದಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.