ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಭಾರತದ ಪ್ರಮುಖ ನಗರಗಳಲ್ಲಿ ದಿನ ಕಳೆದಂತೆ ವಾಹನ ಖರೀದಿದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ದಟ್ಟನೆ ಮಿತಿ ಮೀರಿ ಬೆಳೆಯುತ್ತಿದೆ. ಕೆಲವೊಮ್ಮೆ ಒಂದು ಕಿ.ಮೀ ಪ್ರಯಾಣಿಸಲು ಗಂಟೆಗಟ್ಟಲೇ ಸಮಯವಾಗುತ್ತಿದೆ. ಪ್ರಯಾಣಿಕರು ತಮ್ಮ ನಿತ್ಯವಸರ ಕೆಲಸಗಳನ್ನು ಮುಗಿಸಿಕೊಳ್ಳಲು ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುವಂತಾಗಿದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಈ ಸಮಸ್ಯೆಯನ್ನು ಪರಿಹರಿಸಲು ಭಾರತ ಸರ್ಕಾರವು ತನ್ನ ಅರ್ಬನ್ ಮೊಬಿಲಿಟಿ ಸ್ಕೀಮ್ ಅಡಿಯಲ್ಲಿ ದೇಶದಲ್ಲಿ ಹಾರುವ ಕಾರುಗಳ ಸೇವೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಯುಎಸ್ ಮತ್ತು ಕೆನಡಾದಲ್ಲಿ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಎಲೆಕ್ಟ್ರಿಕ್ ವಾಹನಗಳನ್ನು (ಇವಿಟಿಒಎಲ್) ಭಾರತಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಪ್ರಸ್ತುತ ಯುಎಸ್ ಮತ್ತು ಕೆನಡಾದ ವಾಯುಪಡೆಗಳು ಈ ಹಾರುವ ಕಾರುಗಳನ್ನು ಪರೀಕ್ಷಿಸುತ್ತಿವೆ ಎಂದು ವಿಮಾನಯಾನ ಸಚಿವರು ತಿಳಿಸಿದ್ದಾರೆ. ಪ್ರಯೋಗಗಳು ಪೂರ್ಣಗೊಂಡ ನಂತರ, ಅವರಿಗೆ ವಿಮಾನಯಾನ ಪರವಾನಗಿ ಮತ್ತು ಹಾರಾಟಕ್ಕೆ ಪ್ರಮಾಣೀಕರಣವನ್ನು ನೀಡಲಾಗುತ್ತದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಈ ಪ್ರಕ್ರಿಯೆಯ ಪೂರ್ಣಗೊಂಡ ನಂತರ, ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹಾರುವ ಕಾರು ತಯಾರಕರನ್ನು ಪ್ರೋತ್ಸಾಹಿಸಲಾಗುತ್ತದೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈಗಾಗಲೇ ಹಾರುವ ಕಾರುಗಳನ್ನು ತಯಾರಿಸುವ ಯುಎಸ್ ಮತ್ತು ಕೆನಡಾದ ಹಲವು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಮುಂದಿನ ದಿನಗಳಲ್ಲಿ ದೇಶದ ಪ್ರತಿ ಪ್ರಮುಖ ನಗರಗಳಲ್ಲಿ ಫ್ಲೈಯಿಂಗ್ ಕಾರ್ ನೆಟ್‌ವರ್ಕ್ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು. ನಾಗರಿಕ ವಿಮಾನಯಾನದ ಈ ತಂತ್ರಜ್ಞಾನವನ್ನು ಪರೀಕ್ಷಿಸುವ ಕೆಲಸವನ್ನು ವಾಯುಪಡೆ ಮಾಡಲಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಯಶಸ್ವಿ ಪ್ರಯೋಗಗಳ ನಂತರವೇ ಈ ಹಾರುವ ಕಾರುಗಳನ್ನು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಓಡಿಸಲು ಅನುಮತಿಸಲಾಗುವುದು.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಈ ಯೋಜನೆಗೆ ಬಲವಾದ ಪರಿಸರ ವ್ಯವಸ್ಥೆಯ ಅಗತ್ಯತೆಯ ಬಗ್ಗೆಯೂ ಸಿಂಧಿಯಾ ಮಾತನಾಡಿದರು. ಟೇಕ್-ಆಫ್ ಮತ್ತು ಲ್ಯಾಂಡಿಂಗ್ ವಾಹನಗಳಿಗೆ ಭಾರಿ ಹೂಡಿಕೆಯ ಅಗತ್ಯವಿದೆ ಎಂದ ಅವರು, ಇದಕ್ಕಾಗಿ ಸರ್ಕಾರ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ವೆಚ್ಚ ಮಾಡಬೇಕಾಗಿದೆ. ಇದು ದೂರದ ಪ್ರದೇಶಗಳ ನಡುವೆ ಮತ್ತು ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಹಾರುವ ಕಾರುಗಳನ್ನು ಹಲವು ವರ್ಷಗಳಿಂದ ಸಂಶೋಧಿಸಿ ಅಭಿವೃದ್ಧಿಪಡಿಸಲಾಗಿದೆ. ಅನೇಕ ಕಂಪನಿಗಳು ತಮ್ಮ ಹಾರುವ ಕಾರು ಮಾದರಿಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಿವೆ ಮತ್ತು ನೈಜ ಪರಿಸರದಲ್ಲಿ ಪರೀಕ್ಷೆಯನ್ನು ಪ್ರಾರಂಭಿಸಿವೆ. ಇತ್ತೀಚೆಗೆ, ನೆದರ್ಲ್ಯಾಂಡ್ಸ್ ಕಂಪನಿ PAL-V ಹಾರುವ ಕಾರಿನ ಉತ್ಪಾದನಾ ಮಾದರಿಯನ್ನು ಸಿದ್ಧಪಡಿಸಿದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಇದೀಗ ಉಡಾವಣೆಯ ಅಂತಿಮ ಹಂತದಲ್ಲಿದೆ. ಅದೇ ಸಮಯದಲ್ಲಿ, USA ಕಂಪನಿ ಅರ್ಬನ್ ಏರ್ ಮೊಬಿಲಿಟಿ (UAM) ಸಹ ಹಾರುವ ಕಾರನ್ನು ತಯಾರಿಸಲು ಘೋಷಿಸಿದೆ. ವಿಮಾನ ತಯಾರಕರಾದ ಬೋಯಿಂಗ್ ಮತ್ತು ಏರ್‌ಬಸ್ ಕೂಡ ಶೀಘ್ರದಲ್ಲೇ ಜಪಾನ್‌ನಲ್ಲಿ ಹಾರುವ ಕಾರುಗಳನ್ನು ಬಿಡುಗಡೆ ಮಾಡಲಿವೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಈ ವಿಚಾರದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಚೆನ್ನೈ ಮೂಲದ ಭಾರತೀಯ ಸ್ಟಾರ್ಟ್‌ಅಪ್ ಕಂಪನಿಯು ಹೈಬ್ರಿಡ್ ಫ್ಲೈಯಿಂಗ್ ಕಾರ್‌ಗಳಲ್ಲಿ ಕೆಲಸ ಮಾಡುತ್ತಿದೆ, ಇದನ್ನು ನಾಗರಿಕ ಸಾರಿಗೆ ಮತ್ತು ತುರ್ತು ಸೇವೆಗಳಿಗೆ ಬಳಸಬಹುದು. ಈ ಹಾರುವ ಕಾರನ್ನು ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ 'ವಿನತಾ ಏರೋಮೊಬಿಲಿಟಿ' ಅಭಿವೃದ್ಧಿಪಡಿಸಿದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಹೆಲಿಟೆಕ್ ಪ್ರದರ್ಶನದಲ್ಲಿ ಕಂಪನಿಯು ಈ ಹಾರುವ ಕಾರನ್ನು ಪ್ರದರ್ಶಿಸಿತ್ತು. ಸದ್ಯ ಕಂಪನಿಯು ಈ ಹಾರುವ ಕಾರನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿದೆ. ಈ ಫ್ಲೈಯಿಂಗ್ ಕಾರನ್ನು ಓಡಿಸುವ ಅನುಭವ ಮಾಮೂಲಿ ಕಾರನ್ನು ಓಡಿಸಿದಂತೆಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸಹಾಯದಿಂದ ಇದನ್ನು ನಿಯಂತ್ರಿಸಲಾಗುವುದು, ಇದರಿಂದ ಕಾರ್ಯನಿರ್ವಹಿಸಲು ತುಂಬಾ ಸುಲಭವಾಗುತ್ತದೆ. ಕಾರು ಹೊರಗಿನಿಂದ ಸೊಗಸಾದ ವಿನ್ಯಾಸ ಮತ್ತು ಒಳಗೆ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲ್ಪಡುತ್ತದೆ. ಇದು GPS ಟ್ರ್ಯಾಕರ್‌ನೊಂದಿಗೆ 360 ಡಿಗ್ರಿ ವೀಕ್ಷಣೆಗಾಗಿ ವಿಹಂಗಮ ವಿಂಡೋವನ್ನು ಹೊಂದಿದೆ.

 ಭಾರತಕ್ಕೆ ಹಾರುವ ಕಾರುಗಳನ್ನು ತರಲು ಸಜ್ಜಾದ ಕೇಂದ್ರ ಸರ್ಕಾರ: ಯುಎಸ್, ಕೆನಡಾದೊಂದಗೆ ಮಾತುಕತೆ

ಈ ಹಾರುವ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಹಾರಬಲ್ಲದು ಎಂದು ಕಂಪನಿ ಹೇಳಿದೆ. ಇಂಧನ ತುಂಬಿದ ನಂತರ, ಅದನ್ನು 60 ನಿಮಿಷಗಳ ಕಾಲ ಹಾರಿಸಬಹುದು. ಇದು 3,000 ಅಡಿ ಎತ್ತರದವರೆಗೂ ಹಾರುವ ಸಾಮರ್ಥ್ಯ ಹೊಂದಿರಲಿದೆ. ಪ್ರಸ್ತುತ, ಈ ಹಾರುವ ಕಾರನ್ನು ಇಬ್ಬರ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ, ಆದರೆ ಹೊಸ ಮಾದರಿಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ಕಂಪನಿ ತಿಳಿಸಿದೆ.

Most Read Articles

Kannada
English summary
India soon to have flying cars in urban mobility says aviation minister
Story first published: Tuesday, May 24, 2022, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X