60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

By Nagaraja

ತಮ್ಮ ಮೆಚ್ಚಿನ ಕಾರುಗಳಿಗೆ ಫ್ಯಾನ್ಸಿ ನಂಬರ್ ಗಿಟ್ಟಿಸಿಕೊಳ್ಳುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅದರಲ್ಲೂ ಶ್ರೀಮಂತ ವ್ಯಕ್ತಿಗಳು ಇದಕ್ಕಾಗಿ ಲಕ್ಷಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಇಂತಹ ಅನೇಕ ಸುದ್ದಿಗಳನ್ನು ದಿನನಿತ್ಯ ಕೇಳಿಸುವುದಾದರೂ ವಿಶೇಷವಾದ ಪ್ರಕರಣವೊಂದರಲ್ಲಿ ದುಬೈನಲ್ಲಿ ಫ್ಯಾನ್ಸಿ ನಂಬರ್ ಗಾಗಿ ಭಾರತೀಯ ಉದ್ಯಮಿಯೋರ್ವ ತಮ್ಮ ಜೇಬಿನಿಂದ ಕೋಟಿಗಟ್ಟಲೆ ರುಪಾಯಿಗಳನ್ನು ಸುರಿದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಒಂದೊಳ್ಳೆಯ ಕಾರ್ಯಕ್ಕಾಗಿ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಲ್ಲಿ ಯಾರಿಗೂ ಅಭ್ಯಂತರಲಿಲ್ಲ. ಆದರೆ ತಮ್ಮ ಕನಸಿನ ರೋಲ್ಸ್ ರಾಯ್ಸ್ ಕಾರಿನ ನಂಬರ್ ಪ್ಲೇಟ್ ಖರೀದಿಗಾಗಿ ಯುನೈಟ್ ಅರಬ್ ಎಮಿರೇಟ್ಸ್ ನಲ್ಲಿರುವ ಭಾರತೀಯ ಉದ್ಯಮಿ 60 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದಾರೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಹಾಗೊಂದು ವೇಳೆ ನೀವೇನಾದರೂ ಆಗಿದ್ದಲ್ಲಿ ನಂಬರ್ ಪ್ಲೇಟ್ ಖರೀದಿಗಾಗಿ ಎಷ್ಟು ಮೊತ್ತ ಖರ್ಚು ಮಾಡುವೀರಾ? 10 ಸಾವಿರ? 20 ಸಾವಿರ? ಹೋಗ್ಲಿ ಬಿಡಿ ಒಂದು ಲಕ್ಷ? 10 ಲಕ್ಷ ? ಹೀಗೆ ಲೆಕ್ಕ ಮಾಡಿದರೆ 60 ಕೋಟಿ ರುಪಾಯಿ ಪಾವತಿಸಲು ಹೇಗೆ ಮನಸ್ಸಾಯಿತು ಎಂಬುದು ಅಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ದುಬೈನಲ್ಲಿ ವಾಸಿಸುತ್ತಿರುವ ಭಾರತೀಯ ಉದ್ಯಮಿ ಬಲ್ವಿಂಧರ್ ಶಾಹ್ನಿ ಎಂಬವರೇ 33 ಮಿಲಿಯನ್ ದಿರಾಮ್ಸ್ ಅಂದರೆ ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದಾಗ ಭರ್ತಿ 59.9 ಕೋಟಿ ರುಪಾಯಿಗಳನ್ನು ಪಾವತಿಸಿದ್ದಾರೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಅಕ್ಟೋಬರ್ 08ರಂದು ನಡೆದ ದುಬೈ ಲೈಸನ್ಸ್ ಪ್ಲೇಟ್ ಹರಾಜಿನಲ್ಲಿ ರೋಲ್ಸ್ ರಾಯ್ಸ್ ಕಾರಿಗಾಗಿ ಶಾಹ್ನಿ, ಹಿಂದು ಮುಂದು ನೋಡದೆ ಭಾರಿ ಮೊತ್ತ ಪಾವತಿಸಲು ಮುಂದಾಗಿದ್ದಾರೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಶಹಾನಿ ಪ್ರಾಪರ್ಟಿ ಮ್ಯಾನೇಜೆಮೆಂಟ್ ಸಂಸ್ಥೆಯ ಮಾಲಿಕರೂ ಆಗಿರುವ ಶಾಹ್ನಿ, ಯಾವ ನಂಬರ್ ಪ್ಲೇಟ್ ಗಾಗಿ ಇಷ್ಟೊಂದು ದೊಡ್ಡ ಪಾವತಿಸಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲ ನಿಮ್ಮ ಹಾಗೆ ನಮ್ಮ ಬಳಿಯು ಉಂಟಾಗಿತ್ತು.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

'ಡಿ5' ಎಂಬ ನಂಬರ್ ಪ್ಲೇಟ್ ಖರೀದಿಗಾಗಿ ಶಾಹ್ನಿ 60 ಕೋಟಿ ಪಾವತಿಸಿದ್ದಾರೆ. ಅಂದ ಹಾಗೆ ಈ ನಂಬರ್ ಪ್ಲೇಟ್ ನಲ್ಲಿ ಅಂತದ್ದೇನಿದೆ ಎಂಬುದನ್ನು ದೇವರೇ ಬಲ್ಲ!

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಇದೇ ಸಂದರ್ಭದಲ್ಲಿ ಒಂದು ದಶಲಕ್ಷ ದಿರಾಮ್ ಪಾವತಿಸಿ ಮಗದೊಂದು ಲೈಸನ್ಸ್ ಪ್ಲೇಟ್ ಈ ದುಬೈ ಮೂಲದ ಉದ್ಯಮಿ ಖರೀದಿಸಿರುವುದು ಮೌಡ್ಯತನದ ಪರಮಾವಧಿ ಎನಿಸಿಕೊಳ್ಳುತ್ತಿದೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಸ್ಥಳೀಯ ಮಾಧ್ಯಮಗಳ ಪ್ರಕಾರ ಶಾಹ್ನಿ ಅವರು ಕಳೆದ ವರ್ಷ '09' ನಂಬರ್ ಗಾಗಿ ಬರೋಬ್ಬರಿ ಏಳು ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಿದ್ದರು.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ವರದಿಯೊಂದರ ಪ್ರಕಾರ, ಏಕ ಸಂಖ್ಯೆಯ ಅಂಕಿಯನ್ನು ಹೊಂದಿರುವ ನಂಬರ್ ಪ್ಲೇಟ್ ಗಳು ದುಬೈನಲ್ಲಿ ಶ್ರೀಮಂತಿಕೆ ಹಾಗೂ ಸಿರಿವಂತಿಕೆಯನ್ನು ಸೂಚಿಸುತ್ತದೆ. ಈ ಹಿನ್ನಲೆಯಲ್ಲಿ ಶ್ರೀಮಂತರು ದಾಖಲೆ ಮೊತ್ತದಲ್ಲಿ ಫ್ಯಾನ್ಸಿ ನಂಬರ್ ಖರೀದಿಸಲು ಮುಂದಾಗುತ್ತಾರೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಅಕ್ಟೋಬರ್ 08 ಶನಿವಾರದಂದು ನಡೆದ ಹರಾಜಿನಲ್ಲಿ ಒಟ್ಟು 80ಕ್ಕೂ ಹೆಚ್ಚು ನಂಬರ್ ಪ್ಲೇಟ್ ಗಳನ್ನು ಹರಾಜು ಮಾಡಲಾಗಿದೆ. ಡಿ5 ನಂಬರ್ ಪ್ಲೇಟ್ ನ ಬಿಡ್ಡಿಂಗ್ ಮೊತ್ತ 20 ಮಿಲಿಯನ್ ದಿರಾಮ್ಸ್ ಗಳಿಂದ ಪ್ರಾರಂಭವಾಗಿತ್ತು. ಈಗ ಈ ಎಲ್ಲ ಮೊತ್ತವು ದುಬೈ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರವನ್ನು ಸೇರಿಕೊಂಡಿದೆ.

60 ಕೋಟಿ ಪಾವತಿಸಿ ದುಬೈ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ ಭಾರತೀಯ ಉದ್ಯಮಿ

ಇನ್ನು ದಾಖಲೆಯತ್ತ ಗಮನ ಹಾಯಿಸಿದಾಗ 2008ರಲ್ಲಿ '1' ನಂಬರ್ ಪ್ಲೇಟ್ ಗಾಗಿ ಉದ್ಯಮಿ ಸಯೀದ್ ಅಲ್ ಖೌರಿ 52.2 ಮಿಲಿಯನ್ ದಿರಾಮ್ಸ್ (95 ಕೋಟಿ ರುಪಾಯಿ) ಪಾವತಿಸಿರುವುದು ಯುಎಇನಲ್ಲಿ ಇದುವರೆಗಿನ ದಾಖಲೆಯಾಗಿದೆ.

ಇವನ್ನೂ ಓದಿ:

ಇವನ್ನೂ ಓದಿ:

01. '1' ನಂಬರ್ ಪ್ಲೇಟ್ ಗಾಗಿ 33.11 ಕೋಟಿ ತೆತ್ತ ಅತಿ ಬುದ್ಧಿವಂತ!

02. ವಿವಿಧ ಬಣ್ಣಗಳ ನಂಬರ್ ಪ್ಲೇಟ್ ಗಳು ಏನನ್ನು ಸೂಚಿಸುತ್ತದೆ?

03. ಚೋಟು ಸ್ವಾಮಿಯ ಫ್ಯಾನ್ಸಿ ನಂಬರ್ ಕ್ರೇಜ್

Most Read Articles

Kannada
English summary
Indian businessman pays a whopping INR 60 Crores for special Dubai number plate
Story first published: Wednesday, October 12, 2016, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X