'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

Written By:

ಎರಡು ತಿಂಗಳ ಬಿಡುವಿನ ಬಳಿಕ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಅಮೋಘ ದ್ವಿಶಕತ ಬಾರಿಸಿದ್ದ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅದ್ಭುತ ಪುನರಾಗಮನವನ್ನು ಮಾಡಿದ್ದರು.

ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಎರಡು ಬಾರಿ ದ್ವಿಶತಕ ಬಾರಿಸಿದ ಸಾಧನೆಗೆ ರೋಹಿತ್ ಭಾಜನರಾಗಿದ್ದರು. 2015 ಏಕದಿನ ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿರುವಂತೆಯೇ ಫಾರ್ಮ್ ಮರಳಿ ಪಡೆಯುವುದು ರೋಹಿತ್ ಪಾಲಿಗೆ ಮಹತ್ವದೆನಿಸಿತ್ತು.

ಈ ನಡುವೆ ಎಲ್ಲೆಡೆಯಿಂದ ರೋಹಿತ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರಂತೆ ನಮ್ಮ ಇಂದಿನ ಈ ಲೇಖನದಲ್ಲಿ ರೋಹಿತ್ ಕಾರಿನ ಬಗ್ಗೆ ಚರ್ಚಿಸುವ ಪ್ರಯತ್ನ ಮಾಡಿರುತ್ತೇವೆ. ಅಷ್ಟಕ್ಕೂ ರೋಹಿತ್ ಬಳಿಯಿರುವ ಕಾರು ಯಾವುದು ಗೊತ್ತೇ?

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ನಮಗೆ ದೊರಕಿರುವ ಮಾಹಿತಿ ಪ್ರಕಾರ ಭಾರತ ಕ್ರಿಕೆಟ್ ತಂಡದ ಆಟಗಾರ 'ಹಿಟ್ ಮ್ಯಾನ್' ಎಂದೇ ಪ್ರಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅವರು ಬಿಎಂಡಬ್ಲ್ಯು 5 ಸಿರೀಸ್‌ನ ಗರಿಷ್ಠ ನಿರ್ವಹಣೆಯ ಎಂ5 ಹಾಗೂ ಸ್ಕೋಡಾ ಲೌರಾ ಕಾರನ್ನು ಹೊಂದಿರುತ್ತಾರೆ.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಈ ಪೈಕಿ ಬಿಎಂಡಬ್ಲ್ಯು 5 ಸಿರೀಸ್ ಎಂ5 ಗರಿಷ್ಠ ನಿರ್ವಹಣೆಯ ಎಕ್ಸ್‌ಕ್ಯೂಟಿವ್ ಕಾರಿನ ಬೆಲೆ ಒಂದು ವರೆ ಕೋಟಿ ರುಪಾಯಿಗಳಷ್ಟು ದುಬಾರಿಯಾಗಿದೆ. ಅಲ್ಲದೆ ಸೊಗಸಾದ ವಿನ್ಯಾಸವನ್ನು ಕಾಪಾಡಿಕೊಂಡಿದೆ.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಬಿಎಂಡಬ್ಲ್ಯು 5 ಸಿರೀಸ್ ಕಾರಿನ ಇತಿಹಾಸವನ್ನು ಗಮನಿಸಿದಾಗ ಈ ಆಕರ್ಷಕ ಎಕ್ಸ್‌ಕ್ಲೂಟಿವ್ ಮಿಡ್ ಸೈಜ್ ಕಾರನ್ನು 1972ರ ಇಸವಿಯಿಂದಲೇ ಸಂಸ್ಥೆಯು ಉತ್ಪಾದಿಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಆರನೇ ಪೀಳಿಗೆಯ ಬಿಎಂಡಬ್ಲ್ಯು 5 ಸಿರೀಸ್ ಕಾರು ಮಾರಾಟದಲ್ಲಿದೆ.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ನಾಲ್ಕು ವೆರಿಯಂಟ್ ಹಾಗೂ ಎರಡು ಎಂಜಿನ್ ಆಯ್ಕೆಗಳಲ್ಲಿ 5 ಸಿರೀಸ್ ಮಾದರಿಯನ್ನು ಬಿಎಂಡಬ್ಲ್ಯು ಮಾರಾಟ ಮಾಡುತ್ತಿದೆ. ಆದರೆ ಏಕಮಾತ್ರ ಇಂಧನ ಆಯ್ಕೆ ಇರಲಿದೆ. ಇದು 1995 ಸಿಸಿ ಮತ್ತು 2993 ಸಿಸಿ ಡೀಸೆಲ್ ಆಟೋಮ್ಯಾಟಿಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಬಿಎಂಡಬ್ಲ್ಯು 5 ಸಿರೀಸ್ ದೆಹಲಿ ಎಕ್ಸ್ ಶೋ ರೂಂ ಬೆಲೆ 49.90 ಲಕ್ಷ ರು.ಗಳಿಂದ ಆರಂಭವಾಗಿ 59.20 ಲಕ್ಷ ರು.ಗಳ ವರೆಗಿದೆ. ಇದು ಐದು ಸೀಟುಗಳ ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಬೆಂಝ್‌ನಲ್ಲಿ ಗರಿಷ್ಠ ನಿರ್ವಹಣೆಯ ಎಎಂಜಿ ಕಾರುಗಳ ತರಹನೇ ಇದು ಅತ್ಯಂತ ಶಕ್ತಿಶಾಲಿ 5 ಸಿರೀಸ್ ಕಾರಾಗಿದೆ.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಬಿಎಂಡಬ್ಲ್ಯುನ ಮೋಟಾರು ಸ್ಪೋರ್ಟ್ಸ್ ವಿಭಾಗವು ಎಂ5 ಗರಿಷ್ಠ ನಿರ್ವಹಣೆಯ ಕಾರನ್ನು ತಯಾರಿಸುತ್ತಿದೆ. ಇದರ ನಿರ್ಮಾಣ 1986ನೇ ಇಸವಿಯಿಂದಲೇ ಆರಂಭವಾಗಿತ್ತು.

'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರ ಸೂಪರ್ ಹಿಟ್ ಕಾರು

ಅದೇ ಹೊತ್ತಿಗೆ 20 ಲಕ್ಷ ರು.ಗಳಷ್ಟು ಬೆಲೆ ಬಾಳುವ ಸ್ಕೋಡಾ ಲೌರಾ ಕಾರನ್ನು ರೋಹಿತ್ ಶರ್ಮಾ ಹೊಂದಿರುತ್ತಾರೆ. ಇವೆಲ್ಲವೂ ಇತರ ಸೆಲೆಬ್ರಿಟಿಗಳಂತೆ ಮೈದಾನದ ಹೊರಗೂ ರೋಹಿತ್ ಅವರ ಪ್ರತಿಷ್ಠೆಯನ್ನು ಎತ್ತಿ ಹಿಡಿಯುತ್ತದೆ.

English summary
Indian Cricketer Rohit Sharma owns a BMW 5 series sedan and a Skoda Laura sedan.
Story first published: Monday, November 17, 2014, 16:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark