ಕರೋನಾ ವೈರಸ್ ಎಫೆಕ್ಟ್: ಹೊಸ ಕಾರು ಖರೀದಿಗೆ ಬ್ರೇಕ್ ಹಾಕಿದ ರಾಷ್ಟ್ರಪತಿ
ಕರೋನಾ ಬಿಕ್ಕಟ್ಟು ಜನ ಸಾಮಾನ್ಯರಿಂದ ಹಿಡಿದು ರಾಷ್ಟ್ರಪತಿಗಳವರೆಗೆ ಎಲ್ಲರ ಮೇಲೂ ಪರಿಣಾಮ ಬೀರಿದೆ. ಭಾರತದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 82,000ದ ಗಡಿ ದಾಟಿದೆ. ಇದರಿಂದಾಗಿ ದೇಶದ ಆರ್ಥಿಕ ವ್ಯವಸ್ಥೆಯು ಸಹ ಹದಗೆಟ್ಟಿದೆ. ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಕೋವಿಡ್ -19, ಕಾರು ಬುಕ್ಕಿಂಗ್ ಹಾಗೂ ಖರೀದಿಗಳ ಮೇಲೂ ಪರಿಣಾಮವನ್ನುಂಟು ಮಾಡಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ಹೊಸ ಕಾರು ಖರೀದಿಸದೇ ಇರಲು ನಿರ್ಧರಿಸಿದ್ದಾರೆ. ರಾಷ್ಟ್ರಪತಿಯವರ ಖರ್ಚನ್ನು ಕಡಿತಗೊಳಿಸುವ ಉದ್ದೇಶಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಲಿಮೋಸಿನ್ ಕಾರ್ ಅನ್ನು ಖರೀದಿಸುವ ಬದಲು, ಹಳೆಯ ಕಾರನ್ನು ಬಳಸಲಾಗುವುದು ಎಂದು ರಾಷ್ಟ್ರಪತಿಯವರ ಟ್ವಿಟರ್ ಖಾತೆಯ ಮೂಲಕ ತಿಳಿಸಲಾಗಿದೆ.

ಈ ಕಾರನ್ನು ರಾಷ್ಟ್ರಪತಿಯವರು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ತಮ್ಮ ಅಧಿಕೃತ ಕೆಲಸಗಳಿಗಾಗಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಪುಲ್‌ಮನ್ ಕಾರ್ ಅನ್ನು ಬಳಸುತ್ತಾರೆ. ಇದು ಭಾರತದಲ್ಲಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಸದ್ಯಕ್ಕೆ ರಾಷ್ಟ್ರಪತಿಗಳು ಬುಲೆಟ್ ಪ್ರೂಫ್ ಲಿಮೋಸಿನ್ ಕಾರ್ ಅನ್ನು ಬಳಸುತ್ತಿದ್ದಾರೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈ ವರ್ಷ ಹೊಸ ಫೀಚರ್ ಹಾಗೂ ಅಪ್‌ಡೇಟ್‌ಗಳನ್ನು ಹೊಂದಿರುವ ಕಾರ್ ಅನ್ನು ಖರೀದಿಸಿ, 2021ರ ಗಣರಾಜ್ಯೋತ್ಸವದ ವೇಳೆಗೆ ಹೊಸ ಕಾರಿನಲ್ಲಿ ಕಾಣಿಸಿಕೊಳ್ಳುವರೆಂದು ಹೇಳಲಾಗಿತ್ತು. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಪುಲ್‌ಮನ್ ಕಾರ್ ಅನ್ನು 2018ರಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಈ ಕಾರಿನ ಬೆಲೆ ಸುಮಾರು ರೂ.15 ಕೋಟಿಗಳಾಗಿದೆ.

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಕಾರಿನಲ್ಲಿರುವ ಸುರಕ್ಷತಾ ಫೀಚರ್‌ಗಳ ಬಗ್ಗೆ ಹೇಳುವುದಾದರೆ, ಈ ಕಾರು ವಿಆರ್ 10 ಲೆವೆಲ್‌ನ ಬ್ಯಾಲಿಸ್ಟಿಕ್ ರಕ್ಷಣೆಯನ್ನು ನೀಡುತ್ತದೆ. ಈ ಕಾರು ಹ್ಯಾಂಡ್ ಗ್ರೆನೇಡ್‌ಗಳಿಂದ ಮೆಷಿನ್‌ಗನ್‌ಗಳವರೆಗಿನ ದಾಳಿಯನ್ನು ತಡೆದುಕೊಳ್ಳುತ್ತದೆ. ಈ ಕಾರು 21.3 ಅಡಿ ಉದ್ದವಿದೆ. ಈ ಕಾರು ಅಂಡರ್‌ಬಾಡಿ ಆರ್ಮರ್ ಪ್ಲೇಟಿಂಗ್, ಬುಲೆಟ್ ಪ್ರೂಫ್ ಅಲಾಯ್, ಆಕ್ಸಿಜನ್ ಅನ್ನು ಹೊಂದಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಾಷ್ಟ್ರಪತಿಯವರಿಗಾಗಿ ಈ ಕಾರ್ ಅನ್ನು ಹಲವು ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600ನಲ್ಲಿ ಹಲವಾರು ಐಷಾರಾಮಿ ಅಂಶಗಳಿವೆ. ಈ ಕಾರಿನಲ್ಲಿರುವ ಸೀಟುಗಳು ವಿಮಾನದ ಸೀಟುಗಳಂತಿವೆ.

ಈ ಕಾರಿನಲ್ಲಿ 6 ಲೀಟರಿನ ಟ್ವಿನ್ ಟರ್ಬೊ ವಿ12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 530 ಬಿಹೆಚ್‌ಪಿ ಪವರ್ ಹಾಗೂ 830 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ರಾಷ್ಟ್ರಪತಿಯವರು ಖರೀದಿಸಲು ಬಯಸಿದ್ದ ಹೊಸ ಕಾರಿನಲ್ಲಿರುವ ಎಂಜಿನ್ ಇದೇ ಆಗಿದ್ದು, ಆ ಎಂಜಿನ್ ಹೆಚ್ಚು ಪವರ್ ಹಾಗೂ ಟಾರ್ಕ್ ಉತ್ಪಾದಿಸಬಹುದು. ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಹೊಂದಿರಲಿದೆ.


Click it and Unblock the Notifications








