ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಬದಲಾಗಿ ಬರುತ್ತಿರುವ ಕೇಂದ್ರ ಸರಕಾರದ ಕುರುಡುತನದಿಂದಾಗಿ ಪದೇ ಪದೇ ರೈಲ್ವೆ ದುರಂತಗಳು ಘಟಿಸುತ್ತಲೇ ಇದೆ.

By Nagaraja

ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ರೈಲ್ವೆ ಜಾಲವನ್ನು ಹೊಂದಿರುವ ಹೊರತಾಗಿರುವ ರೈಲ್ವೆ ಹಳಿ ತಪ್ಪಿದ ಪರಿಣಾಮ ನಡೆಯುತ್ತಿರುವ ದುರಂತ ಪದೇ ಪದೇ ಘಟಿಸುತ್ತಲೇ ಇದೆ. ಇತ್ತೀಚೆಗಷ್ಟೇ ನಡೆದ ಇಂಧೋರ್ ಎಕ್ಸ್ ಪ್ರೆಸ್ ಹಳಿ ತಪ್ಪಿದ ಪರಿಣಾಮ ಸಂಭವಿಸಿರುವ ದುರಂತದಲ್ಲಿ 145ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಎಲ್ಲ ದುರಂತಗಳಿಗೆ ಕಾರಣಗಳೇನು ? ಈ ಸಂಬಂಧ ಮಾಜಿ ರೈಲ್ವೆ ಸಚಿವ ದಿನೇಶ್ ತ್ರಿವೇದಿ ವಿವರಣೆಯನ್ನು ನೀಡುತ್ತಾರೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಇದೊಂದು ಅಪಘಾತವಲ್ಲ. ಬದಲಾಗಿ ಮಹಾ ದುರಂತವಾಗಿದೆ. ಯಾಕೆಂದರೆ ಈ ಸಂಭವನೀಯ ಭೀಕರ ಅಪಘಾತವನ್ನು ತಪ್ಪಿಸಬಹುದಾಗಿತ್ತು. ಇಷ್ಟೊಂದು ದೊಡ್ಡ ವಿಪತ್ತಿನ ಬಳಿಕ ರೈಲ್ವೆ ಇಲಾಖೆ ಮಾಡುವ ಕೆಲಸವಾದರೂ ಏನು?

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಎಂದಿನಂತೆ ತನಿಖಾ ತಂಡವನ್ನು ರಚಿಸಲಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡುವ ತನಿಖಾ ತಂಡ ಹಲವಾರು ತಿಂಗಳುಗಳ ಬಳಿಕ ತನಿಖಾ ಆಯೋಗಕ್ಕೆ ವರದಿಯನ್ನು ಸಲ್ಲಿಸಲಿದೆ. ಅಷ್ಟವಾಗುವಾಗ ಸಾರ್ವಜನಿಕರನ್ನು ಘಟನೆಯನ್ನು ಮರೆತು ಬಿಡುತ್ತಾರೆ. ಇದು ಬಹಳ ಕಾಲಗಳಿಂದ ನಿರಂತವಾಗಿ ನಡೆಯುತ್ತಲೇ ಇದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಆದರೆ ಇಂತಹ ಭೀಕರ ಘಟನೆಗಳನ್ನು ನಿಜಕ್ಕೂ ಮರೆಯಲು ಸಾಧ್ಯವೇ? ತಮ್ಮ ತಂದೆ-ತಾಯಿ, ಸೋದರ-ಸೋದರಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಮರೆಯಲು ಸಾಧ್ಯವೇ? ಮಗನನ್ನು ಕಳೆದುಕೊಂಡ ತಾಯಿಗೆ ಮರೆಯಲು ಸಾಧ್ಯವೇ? ತಂದೆಯನ್ನು ಕಳಕೊಂಡ ಪುತ್ರನಿಗೆ ಮರೆಯಲು ಸಾಧ್ಯವೇ? ಪತಿಯನ್ನು ಕಳೆದುಕೊಂಡ ಪತ್ನಿಗೆ ಮರೆಯಲು ಸಾಧ್ಯವೇ? ಖಂಡಿತ ಇಲ್ಲ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಇಲ್ಲಿ ಕಂಡುಬಂದಿರುವ ಸತ್ಯಾಂಶವೆಂದರೆ ಇಂತಹ ರೈಲು ಅಪಘಾತಗಳಲ್ಲಿ ಬಡಪಾಯಿಗಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ವಿಐಪಿ ಹೊರತಾದ ರೈಲುಗಳಲ್ಲೇ ಇಂತಹ ಅಪಘಾತಗಳು ಹೆಚ್ಚೆಚ್ಚು ಸಂಭವಿಸುತ್ತದೆ. ಅಷ್ಟಕ್ಕೂ ರಾಜಧಾನಿ, ಶತಾಬ್ದಿ ಸುರಕ್ಷಿತ ಎಂಬರ್ಥವಲ್ಲ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಎಲ್ಲ ರೈಲುಗಳಿಗೆ ಬಳಕೆ ಮಾಡುವ ಟ್ರ್ಯಾಕ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಯು ಸಮಾನವಾಗಿದೆ. ಆದರೆ ಇದರಲ್ಲಿ ಬಳಕೆ ಮಾಡುವ ಲೋಕೋಮೋಟಿವ್, ಎಲ್ ಎಚ್ ಬಿ ಕೋಚ್ ಹಾಗೂ ನಿಗಾವಹಿಸುವ ಟ್ರ್ಯಾಕ್ ಗಳಲ್ಲಿ ಖಂಡಿತ ವ್ಯತ್ಯಾಸಗಳಿರುತ್ತದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಅಪಘಾತ ಬಳಿಕ ನಡೆಯುವ ತನಿಖೆಯಲ್ಲಿ ಅನೇಕ ಅಂಶಗಳ ಬದಲಾವಣೆಗಳ ಬಗ್ಗೆ ಶಿಫಾರಸು ಮಾಡಿದರೂ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇಲ್ಲಿ ತಜ್ಞರು ತನಿಖಾ ವರದಿಗಳನ್ನು ತಯಾರು ಮಾಡುವುದಾದರೂ ಏತಕ್ಕೆ ಎಂಬ ಗೊಂದಲವುಂಟಾಗುತ್ತದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಅಷ್ಟಕ್ಕೂ ಇಲ್ಲಿ ತಪ್ಪಿತ್ತಸ್ಥರು ಯಾರು? ಭಾರತಕ್ಕೆ ರೈಲ್ವೆ ವ್ಯವಸ್ಥೆ ಮೊದಲ ಬಾರಿಗೆ ಜಾರಿಗೆ ತಂದ ಬ್ರಿಟಿಷರ ತಪ್ಪೇ? ಖಂಡಿತವಾಗಿಯೂ ಅಲ್ಲ. ಕಾರ್ಯ ದಕ್ಷತೆಯ ರೈಲ್ವೆ ಜಾಲವನ್ನು ಹೊರತಂದಿರುವುದೇ ನಮ್ಮ ದೊಡ್ಡ ಸ್ವತ್ತು ಆಗಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಹಾಗಿದ್ದರೆ ತಪ್ಪು ಯಾರದು? ರೈಲ್ವೆ ಟ್ರ್ಯಾಕ್ ಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯುವ ಬಡಪಾಯಿ ನೌಕರರೇ ? ಖಂಡಿತ ಅಲ್ಲ. ಹಾಗಿದ್ದರೆ ಈ ಎಲ್ಲ ವ್ಯವಸ್ಥೆಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರೈಲ್ವೇ ಸಚಿವರೇ?

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ನಿಸ್ಸಂಶಯವಾಗಿಯೂ ಅಮಾವಾಸ್ಯೆ-ಹುಣ್ಣಿಮೆಗೊಮ್ಮೆ ಬದಲಾಗುತ್ತಿರುವ ಕೇಂದ್ರ ಸರಕಾರವೇ ಇಂತಹ ಅವಘಡಗಳಿಗೆ ಹೊಣೆಗಾರರಾಗಿರುತ್ತಾರೆ. ತಮ್ಮ ರಾಜಕೀಯ ಲಾಭವನ್ನು ಮಾತ್ರ ಗುರಿಯಾಗಿರಿಸಿಕೊಂಡಿರುವ ಇಂತಹ ಸರಕಾರದ ಆಡಳಿತದಿಂದಾಗಿ ರೈಲ್ವೆ ಇಂದು ದುಸ್ಥಿತಿಗೆ ಬಂದು ತಲುಪಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ದೇಶದ ಗಡಿ ಕಾಯುವ ಸೇನೆಯ ಬಳಿಕ ಭಾರತೀಯ ರೈಲ್ವೆ ಇಂದಿಗೂ ವಿಶ್ವದ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ. ಆದರೆ ವ್ಯವಸ್ಥಿತವಲ್ಲದ ಸತತವಾದ ಸರಕಾರಗಳ ಬದಲಾವಣೆಯಿಂದ ಭಾರತೀಯ ರೈಲ್ವೆ ಶೋಚನೀಯ ಸ್ಥಿತಿಗೆ ತಲುಪಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಭಾರತೀಯ ರೈಲ್ವೆಯ ಸಾಮರ್ಥ್ಯವನ್ನು ಅರಿಯುವಲ್ಲಿ ಸರಕಾರಗಳು ವಿಫಲವಾಗಿದೆ. ಇಲ್ಲೂ ಪ್ರತಿಭಾವಂತರಿಗೇನು ಕೊರತೆಯಿಲ್ಲ ಎಂಬುದನ್ನು ಮನಗಾಣಬೇಕು. 1964ನೇ ಇಸವಿಯಲ್ಲಿ ಹುಟ್ಟಿಕೊಂಡಿರುವ ಜಪಾನ್ ಶಿಕಾಂನ್ಸೆನ್ ರೈಲ್ವೆ ಜಾಲ ಭಾರತಕ್ಕೆ ಮಾದರಿಯಾಗಬೇಕು.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಜಪಾನ್ ಶಿಕಾಂನ್ಸೆನ್ ರೈಲ್ವೆ ಇದುವರೆಗೆ ಒಂದು ಒಂದೇ ಮರಣ ಕಾಣದೆ ಅಜೇಯ ಓಟವನ್ನು ಮುಂದುವರಿಸಿದೆ. ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದರೆ ಭಾರತೀಯ ರೈಲ್ವೆ ಇದನ್ನು ಮೀರಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಭಾರತೀಯ ರೈಲ್ವೆ ದಿವಾಳಿಯಾಗಿರುವುದು ಇಲ್ಲಿ ಕಂಡುಬಂದಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದ್ದಲ್ಲಿ ನೌಕರರಿಗೆ ಸಂಬಳ ನೀಡಲು ತೊಡಕಾಗಬಹುದು. ಯಾಕೆಂದರೆ ಭಾರತೀಯ ರೈಲ್ವೆ 25,000ಕ್ಕೂ ಹೆಚ್ಚು ಕೋಟಿ ರುಪಾಯಿಗಳ ನಿವ್ವಳ ನಷ್ಟದಲ್ಲಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ದೈನಂದಿನ ನಿರ್ವಹಣಾ ವೆಚ್ಚವನ್ನು ನೋಡಿಕೊಳ್ಳಲು ಭಾರತೀಯ ರೈಲ್ವೆ ಬಳಿ ಹಣಕಾಸಿನ ಕೊರತೆಯಿದೆ. ಹಾಗಿರುವಾಗ ಹಳೆಯದಾದ ಟ್ರ್ಯಾಕ್, ರೊಲಿಂಗ್ ಸ್ಟಾಕ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಯನ್ನು ಬದಲಾಯಿಸುವುದು ಇನ್ನು ದೂರದ ಮಾತು.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಹಳೆಯ ವ್ಯವಸ್ಥೆಗಳನ್ನು ಬದಲಾಯಿಸಿಕೊಳ್ಳಲು ಭಾರತೀಯ ರೈಲ್ವೆಯ ಸವಕಳಿ ಮೀಸಲು ನಿಧಿ ಹಾಗೂ ಅಭಿವೃದ್ಧಿ ನಿಧಿಗೆ ವರ್ಷಂಪ್ರತಿ 20ರಿಂದ 25 ಸಾವಿರ ಕೋಟಿ ರುಪಾಯಿಗಳ ಒಳ ಹರಿವು ಬೇಕಾಗಿದೆ. ಆದರೆ 2016ರ ಕೇಂದ್ರ ಬಜೆಟ್ ನಲ್ಲಿ ಮೀಸಲಿಟ್ಟ ಹಣ ಬರಿ 3,200 ಕೋಟಿ ರುಪಾಯಿಗಳಾಗಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಇಲ್ಲಿ ಎಲ್ಲವೂ ತಿಳಿದುಕೊಂಡೇ ಸುರಕ್ಷತೆಯ ವಿಚಾರದಲ್ಲಿ ಬದಲಾಗಿ ಬರುತ್ತಿರುವ ಸರಕಾರಗಳು ರಾಜಿಗೆ ತಯಾರಾಗಿದ್ದು, ತನಗೇನು ಅರಿವಿಲ್ಲದಂತೆ ಕುರುಡುತನ ಪ್ರದರ್ಶಿಸುತ್ತಿದೆ. ಪರಿಣಾಮ ಮಹಾ ವಿಪತ್ತು ಪದೇ ಪದೇ ಘಟಿಸುತ್ತಲೇ ಇದೆ. ಇದನ್ನು ಸರಿಪಡಿಸುವ ಬದಲಾಗಿ ಬುಲೆಟ್ ರೈಲು, ವೈಫೈ ಇತ್ಯಾದಿ ಆಧುನಿಕ ಸೌಲಭ್ಯಗಳತ್ತ ಹೆಚ್ಚು ಆಕರ್ಷಿತವಾಗಿರುವುದು ದುರದೃಷ್ಟಕರ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ರೈಲ್ವೆ ಹಳಿ ತಪ್ಪುವುದಕ್ಕೆ ಕಾರಣಗಳು ಹಲವು. ಪ್ರಾಥಮಿಕವಾಗಿಯೂ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಅಪಘಾತಕ್ಕೆ ಕಾರಣವಾಗುತ್ತದೆ. ದೋಷಯುಕ್ತ ಚಕ್ರಗಳು, ಅಸಾಮಾನ್ಯ ಟ್ರ್ಯಾಕ್, ಅನುಕ್ರಮವಲ್ಲದ ನಿಯಂತ್ರಣ ವ್ಯವಸ್ಥೆ, ಪರಸ್ಪರ ಢಿಕ್ಕಿ ಹಾಗೂ ತಾಂತ್ರಿಕ ತೊಂದರೆಯಿಂದಲೂ ರೈಲು ಹಳಿ ತಪ್ಪಬಹುದಾಗಿದೆ.

ಹಳಿ ತಪ್ಪಿದ ಭಾರತೀಯ ರೈಲ್ವೆ; ಸರಿಪಡಿಸಲು ಮೇಜರ್ ಸರ್ಜರಿ ಅಗತ್ಯ!

ಒಟ್ಟಿನಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು ಆಂತರಿಕವಾಗಿ ಭಾರತೀಯ ರೈಲ್ವೆಯಲ್ಲಿ ಮೇಜರ್ ಸರ್ಜರಿಯೇ ಆಗಬೇಕಿದೆ. ಇದಕ್ಕಾಗಿ ಭಾರಿ ಹೂಡಿಕೆಯ ಅಗತ್ಯವಿದ್ದು, ತಾಜಾ ತಂತ್ರಜ್ಞಾನಗಳೊಂದಿಗೆ ಹಳೆಯ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಆಧುನಿಕರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರು ಕಾರ್ಯಮಗ್ನವಾಗಲಿ ಎಂಬುದು ನಮ್ಮ ಆಶಯವಾಗಿದೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ವೃದ್ಧಿಸಲು ಸಹಕಾರಿಯಾಗಲಿದೆ.

Most Read Articles

Kannada
Read more on ಭಾರತ india
English summary
Indian Railway needs major surgery
Story first published: Thursday, November 24, 2016, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X