ಇನ್ನು ಮುಂದೆ ನಿಮ್ಮ ಐಫೋನ್‌ನಿಂದಲೇ ಕಾರು ಪಾರ್ಕಿಂಗ್ ಮಾಡಿ!

By Nagaraja

ಇನ್ನು ಮುಂದೆ ನಿಮ್ಮ ಐಫೋನ್ ನೆರವಿನಿಂದಲೇ ಕಾರು ಪಾರ್ಕಿಂಗ್ ಮಾಡಬಹದು. ಹೌದು, ಈ ಅತ್ಯಾಕರ್ಷಕ ತಂತ್ರಜ್ಞಾನವನ್ನು ಲಾಸ್ ವೇಗಾಸ್‌ನಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ (ಸಿಇಎಸ್‌) ಆಟೋಮೋಟಿವ್ ಸಂಸ್ಥೆ ವಲೆವೊ (Valeo) ಪ್ರದರ್ಶಿಸಿದೆ.

ಭವಿಷ್ಯದ ತಂತ್ರಜ್ಞಾನ ವ್ಯವಸ್ಥೆಯ ಅಂಗವಾಗಿ ರೇಂಜ್ ರೋವರ್ ಇವೋಕ್ ಕಾರಿನಲ್ಲಿ ಇದರ ಪ್ರಯೋಗ ನಡೆಸಲಾಗಿದೆ. ಇದರ ಸಂಪೂರ್ಣ ನಿಯಂತ್ರಣ ಐಫೋನ್ ಅಪ್ಲಿಕೇಷನ್ ಹೊಂದಿರಲಿದೆ.

IPhone To Assist Parking

ಈ ಅಪ್ಲಿಕೇಷನ್ ನೆರವಿನಿಂದ ಕಾರು ಚಲಿಸಲು, ಪಾರ್ಕಿಂಗ್ ಪ್ರದೇಶ ಹುಡುಕುವ ಜತೆಗೆ ಸ್ವಯಂಚಾಲಿತವಾಗಿ ಕಾರು ಪಾರ್ಕಿಂಗ್ ಮಾಡಲು ನೆರವಾಗಲಿದೆ. ಅಷ್ಟೇ ಯಾಕೆ ಎರಡು ಕಾರುಗಳ ನಡುವೆ ವ್ಯವಸ್ಥಿತವಾಗಿ ಹಿಂದಕ್ಕೆ ಚಲಿಸಿ ಪಾರ್ಕಿಂಗ್ ಮಾಡುವಷ್ಟು ಸಕ್ಷಮವಾಗಿರಲಿದೆ. ಇದಕ್ಕಾಗಿ 12 ಅಲ್ಟ್ರಾಸೋನಿಕ್ ಸೆನ್ಸಾರ್, ಲೇಸರ್ ಸ್ಕ್ಯಾನರ್ ಮತ್ತು ನಾಲ್ಕು ಕ್ಯಾಮೆರಾಗಳನ್ನು ಕಾರಿನಲ್ಲಿ ಲಗತ್ತಿಸಲಾಗಿದೆ. ವಲೆವೊ ಪ್ರಕಾರ ಸಮಾನಾಂತರ ಪಾರ್ಕಿಂಗ್‌ನಲ್ಲೂ ಈ ಅಪ್ಲಿಕೇಷನ್ ಸಹಕಾರಿಯಾಗಲಿದೆ.

ಕಾರಿನ ಎಂಜಿನ್ ನಿಯಂತ್ರಣ ಘಟಕಕ್ಕೆ ಸಮಾನವಾದ ಸಿಪಿಯುವೊಂದನ್ನು ಜೋಡಣೆ ಮಾಡಲಾಗುವುದು. ಇದು ಸೆನ್ಸಾರ್ ಮುಖಾಂತರ ವಾಹನ ದಟ್ಟಣೆಯಲ್ಲೂ ಪಾರ್ಕಿಂಗ್ ವೇಳೆ ಸರಿಯಾದ ಮಾರ್ಗ ಹುಡುಕುವುದು, ಸ್ಟೀರಿಂಗ್ ನೆರವು, ಬ್ರೇಕಿಂಗ್ ಹಾಗೂ ವೇಗವರ್ಧನೆ ಬಗ್ಗೆ ಮಾಹಿತಿ ಒದಗಿಸಲಿದೆ.

ಇವೆಲ್ಲ ಹೇಗೆ ಸಾಧ್ಯ? ಈ ಸಿಂಪಲ್ ವೀಡಿಯೋವನ್ನೊಮ್ಮ ಆನಂದಿಸಿರಿ...
<center><iframe width="100%" height="450" src="//www.youtube.com/embed/EZTlk4H8_IU" frameborder="0" allowfullscreen></iframe></center>

Most Read Articles

Kannada
English summary
iPhone-controlled 'self-parking' system was reportedly demonstrated by Valeo at CES 2014 in Las Vegas.
Story first published: Monday, January 13, 2014, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X