ಪಾರ್ಟಿ ಮುಗಿಸಿ ವಾಪಸ್ ಬರುವಾಗ ಜಾಕ್ವೆಲಿನ್ ಕಾರು ಅಪಘಾತ..
ಮೊನ್ನೆಯಷ್ಟೆ ಲಡಾಕ್‍ನಲ್ಲಿ ಸಲ್ಮಾನ್ ಜೊತೆಗೆ ಶೂಟಿಂಗ್ ಮುಗಿಸಿಕೊಂಡು ರಾಯಲ್ ಎನ್‍ಫೀಲ್ಡ್ ನಲ್ಲಿ ಕಾಣಿಸಿಕೊಂಡ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇಂದು ಮುಂಜಾನೆ ಮುಂಬೈನಲ್ಲಿನ ಕಾರ್ಟರ್ ರೋಡ್ ಬಳಿ ನಡೆದ ರಸ್ತೆ ಅಪಘಾತದಿಂದ ಪಾರಾಗಿದ್ದಾರೆ.
ಮೊನ್ನೆಯಷ್ಟೆ ಲಡಾಕ್‍ನಲ್ಲಿ ಸಲ್ಮಾನ್ ಜೊತೆಗೆ ರೇಸ್ 3 ಶೂಟಿಂಗ್ ಮುಗಿಸಿಕೊಂಡು ರಾಯಲ್ ಎನ್‍ಫೀಲ್ಡ್ ನಲ್ಲಿ ಕಾಣಿಸಿಕೊಂಡ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇಂದು ಮುಂಜಾನೆ ಮುಂಬೈನಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಂಜಾನೆ 2.45ರ ಸುಮಾರಿಗೆ ಕಾರ್ಟರ್ ರೋಡ್‌ನಲ್ಲಿ ಈ ಘಟನೆ ನಡೆದಿದ್ದು, ನಟ ಸಲ್ಮಾನ್ ಖಾನ್‍ನ ಅಪಾರ್ಟ್‌ಮೆಂಟ್‍ನಿಂದ ಪಾರ್ಟಿ ಮುಗಿಸಿದ ಜಾಕ್ವೆಲಿನ್ ಫೆರ್ನಾಂಡಿಸ್ ಮನೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ.
ಮಾಹಿತಿಗಳ ಪ್ರಕಾರ ಮುಂಬರಲಿರುವ ಬಾಲಿವುಡ್‍ನ ಬಹುನೀರಿಕ್ಷಿತ ರೇಸ್ 3 ಚಿತ್ರಕ್ಕಾಗಿ ಸಲ್ಮಾನ್ ಖಾನ್ ಜೊತೆ ತೆರಳಿದ್ದ ನಟಿ ಜಾಕ್ವಲಿನ್ ತದನಂತರ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ನಡೆಸಿದ್ದರು. ರಾತ್ರಿ 10.30 ಕ್ಕೆ ಪಾರ್ಟಿ ಪ್ರಾರಂಭವಾಗಿದ್ದು, ಪಾರ್ಟಿ ಮುಗಿಯುವ ಹೊತ್ತಿಗೆ ಬೆಳಗಿನ ಜಾವ 2.20 ಆಗಿತ್ತು. ಈ ವೇಳೆ ಮನೆ ವಾಪಸ್ ಆಗುತ್ತಿದ್ದಾಗ ಜಾಕ್ವಲಿನ್ ಇದ್ದ ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡಿಸ್‍ರವರ ಕಾರಿನ ಮುಂಭಾಗದ ಹೆಡ್‍ಲೈಟ್‍ಗಳು ಡ್ಯಾಮೇಜ್ ಆಗಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯಾದ ಗಾಯಗಳು ಆಗಲಿಲ್ಲ ಎನ್ನಲಾಗಿದೆ. ಈ ಘಟನೆಯು ಮುಂಜಾನೆ 2.45ಕ್ಕೆ ನಡೆದಿದೆ.

ನಾನು ಕ್ಷೇಮವಾಗಿದ್ದೇನೆ, ನನಗೆ ಯಾವುದೆ ಗಾಯಗಳು ಆಗಿಲ್ಲ ಆದರೆ ಆಟೋ ಚಾಲಕನು ಮಧ್ಯ ಸೇವಿಸಿ ಆಟೋ ಚಲಾಯಿಸುತ್ತಿದ್ದ ಕಾರಣ ಈ ಅಪಘಾತವಾಗಿದೆ. ಶೀಘ್ರದಲ್ಲೇ ಆತನ ಮೇಲೆ ದೂರು ದಾಖಲಿಸಲಿದ್ದೇನೆ ಎಂದು ಘಟನೆಯ ನಂತರ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೇಳಿಕೊಂಡಿದ್ದಾರೆ.

ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಕೆಲ ದಿನಗಳ ಹಿಂದಷ್ಟೆ ಹೊಸ ಜೀಪ್ ಕಂಪಾಸ್ ಕಾರ್ ಅನ್ನು ಖರೀದಿಸಿದ್ದು, ಅಪಘಾತ ಆಗಿರುವ ಕಾರು ಯಾವುದು ಎಂಬ ಮಾಹಿತಿಯು ಲಭ್ಯವಾಗಿಲ್ಲ. ಹಾಗೆಯೇ ನಟಿ ಆಟೋ ಚಾಲಕನ ಮೇಲೆ ಕೇಸ್ ದಾಖಲಿಸಿರುವ ಬಗ್ಗೆಯೂ ಯಾವುದೇ ಮಾಹಿತಿ ದೊರೆತಿಲ್ಲ.

ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಮುಂಬರಲಿರುವ ರೇಸ್ 3 ಚಿತ್ರದಲ್ಲಿ ಲೀಡ್ ರೋಲ್ ಮಾಡುತ್ತಿದ್ದು, ಜೊತೆಗೆ ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್, ಬಾಬಿ ಡಿಯೊಲ್, ಅನಿಲ್ ಕಪೂರ್, ಡೈಸಿ ಶಾ ಮತ್ತು ಸಖೀಬ್ ಸಲೀಮ್ ಲೀಡ್ ರೋಲ್‍ನಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್‍ನ ಟಾಪ್ ನಟರು ನಟಿಸುತ್ತಿರುವ ರೇಸ್ 3 ಚಲನಚಿತ್ರವು ಇದೇ ವರ್ಷದ ರಂಜಾನ್ ಹಬ್ಬಕ್ಕೆ ಬಿಡುಗಡೆಗೊಳ್ಳಲಿದ್ದು, ಈ ಸಂದರ್ಭದಲ್ಲಿ ನಟಿಗೆ ಜಾಕ್ವೆಲಿನ್ ಫೆರ್ನಾಂಡಿಸ್ ಕಾರು ಅಪಘಾತವಾಗಿರುವುದು ಬಾಲಿವುಡ್ ಸಿನಿರಸಿಕರಿಗೆ ಬೇಸರ ತರಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ವಿಡಿಯೋ- ಟೊಯೊಟಾ ಇನೋವಾ ಗುದ್ದಿದ ರಭಸಕ್ಕೆ 30 ಅಡಿ ದೂರ ಹೋಗಿ ಬಿದ್ದ ಯುವಕ...
ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ
ಕಾರು ಚಾಲಕನ ನಿರ್ಲಕ್ಷದಿಂದ ನಡೆಯಿತು ಭೀಕರ ಅಪಘಾತ
ಟೈರ್ ಬಸ್ಟ್- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್
ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ...


Click it and Unblock the Notifications








