600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

Written By:

ಇಷ್ಟೊಂದು ವೇಗದಲ್ಲಿ ಸಾಗುವ ರೈಲೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಅಬ್ಬಬ್ಬಾ ಜಪಾನ್ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯ ಮೇಲೆ ವಿಶ್ವ ದಾಖಲೆಯನ್ನು ಬರೆಯುತ್ತಲೇ ಸಾಗುತ್ತಿದೆ.

ಕಳೆದ ವಾರವಷ್ಟೇ ಗಂಟೆಗೆ ದಾಖಲೆಯ 590 ಕೀ.ಮೀ. ವೇಗದಲ್ಲಿ ಸಂಚರಿಸಿದ್ದ ಮ್ಯಾಗ್ಲೆವ್ ರೈಲು ಇದೀಗ ಗಂಟೆಗೆ ಭರ್ಜರಿ 600 ಕೀ.ಮೀ. ವೇಗವನ್ನು ಕ್ರಮಿಸುವ ಮೂಲಕ ಇಡೀ ವಿಶ್ವದಲ್ಲೇ ಅಚ್ಚರಿಯನ್ನುಂಟು ಮಾಡಿದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

2003ರಲ್ಲಿ ಗಂಟೆಗೆ 581 ಕೀ.ಮೀ. ವೇಗದಲ್ಲಿ ಸಂಚರಿಸಿದ್ದ ಮ್ಯಾಗ್ಲೆವ್ ರೈಲು 12 ವರ್ಷಗಳ ಬಳಿಕ ಕಳೆದ ವಾರವಷ್ಟೇ ಗಂಟೆಗೆ 590 ಕೀ.ಮೀ. ಸಾಧಿಸುವ ಮೂಲಕ ನೂತನ ದಾಖಲೆ ಬರೆದಿತ್ತು.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಆದರೆ ಇಲ್ಲಿಗೂ ತಮ್ಮ ಪ್ರಯತ್ನವನ್ನು ನಿಲ್ಲಿಸದ ಸೆಂಟ್ರೆಲ್ ಜಪಾನ್ ರೈಲ್ವೆ ಅಧಿಕಾರಿಗಳು ಒಂದು ವಾರದೊಳಗೆ ಮೌಂಟ್ ಫ್ಯೂಜಿ ಟೆಸ್ಟ್ ಪಯಣದಲ್ಲಿ ಗಂಟೆಗೆ 603 ಕೀ.ಮೀ. (373mph)ವೇಗವನ್ನು ತಲುಪುವ ಮೂಲಕ ನೂತನ ದಾಖಲೆಗೆ ಮುತ್ತಿಕ್ಕಿದ್ದಾರೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಜಪಾನ್ ಸಾರಿಗೆ ವ್ಯವಸ್ಥೆಯ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಮ್ಯಾಗ್ಲೆವ್ ರೈಲು ಆಯಸ್ಕಾಂತೀಯ ತೇಲುವಿಕೆ ರೈಲು ಹಳಿ ಮೇಲ್ಗಡೆಯಲ್ಲಿ ಸಂಚರಿಸುತ್ತದೆ.

ಏನಿದು ಮ್ಯಾಗ್ಲೆವ್ ರೈಲು ?

ಏನಿದು ಮ್ಯಾಗ್ಲೆವ್ ರೈಲು ?

ಮ್ಯಾಗ್ಲೆವ್ ಅಥವಾ ಮ್ಯಾಗ್ನೆಟಿಕ್ ಲೀವಿಟೇಷನ್, ವಾಹನಗಳನ್ನು ಅದರಲ್ಲೂ ಹೆಚ್ಚಾಗಿ ಟ್ರೈನ್ ಗಳನ್ನು ತೂಗುಹಾಕಿಕೊಂಡು ಗತಿದೋರಿ ಮುಂತಳ್ಳುವ ಸಾರಿಗೆ ವ್ಯವಸ್ಥೆಯಾಗಿದೆ.

ಏನಿದು ಮ್ಯಾಗ್ಲೆವ್ ರೈಲು ?

ಏನಿದು ಮ್ಯಾಗ್ಲೆವ್ ರೈಲು ?

ಈ ವ್ಯವಸ್ಥೆಯು ವಾಹನಗಳನ್ನು ಎತ್ತಲು ಮತ್ತು ಮುಂದಕ್ಕೆ ಚಲಾಯಿಸಲು ಬೃಹತ್ ಸಂಖ್ಯೆಯ ಆಯಸ್ಕಾಂತಗಳಿಂದ ಉಂಟಾದ ಆಯಸ್ಕಾಂತೀಯ ತೇಲುವಿಕೆ ಯನ್ನು ಬಳಸುತ್ತವೆ.

ಏನಿದು ಮ್ಯಾಗ್ಲೆವ್ ರೈಲು ?

ಏನಿದು ಮ್ಯಾಗ್ಲೆವ್ ರೈಲು ?

ಈ ವ್ಯವಸ್ಥೆಯು ಚಕ್ರಾಧಾರಿತ ಸಮೂಹ ಸಾರಿಗೆ ವ್ಯವಸ್ಥೆಗಳಿಗಿಂತಲೂ ಹೆಚ್ಚಿನ ವೇಗ, ಕಡಿಮೆ ಸದ್ದು ಹಾಗೂ ಸುಗಮತೆಯನ್ನು ನೀಡಲು ಸಮರ್ಥವಾಗಿದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಇಲ್ಲಿ ಗಮನಾರ್ಹ ಅಂಶವೆಂದರೆ ಮ್ಯಾಗ್ಲೆವ್ ರೈಲುಗಳು ಜಪಾನ್‌ನದ್ದೇ ಆವಿಷ್ಕಾರವಾಗಿರುವ ಬುಲೆಟ್ ರೈಲಿಗಿಂತಲೂ ಹೆಚ್ಚಿನ ವೇಗವನ್ನು ಪಡೆದಿರುತ್ತದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

2027ನೇ ಇಸವಿಯಲ್ಲಿ ಸಂಪೂರ್ಣಗೊಳ್ಳಲಿರುವ ಈ ಮಹತ್ತರ ಯೋಜನೆಯು ಟೊಕಿಯೊದ ಶಿನಗಾವ ಸ್ಟೇಷನ್‌ನಿಂದ ಸೆಂಟ್ರಲ್ ಸಿಟಿ ನಗೋಯಾ ನಡುವಣ 286 ಕೀ.ಮೀ. ದೂರವನ್ನು 40 ನಿಮಿಷಗಳಲ್ಲೇ ಬಂಧಿಸಲಿದೆ. ಪ್ರಸ್ತುತ ಈ ನಗರವನ್ನು ತಲುಪಲು ಶಿಂಕಾನ್ಸನ್ ಬುಲೆಟ್ ರೈಲಿಗೆ 80 ನಿಮಿಷಗಳೇ ಬೇಕಾಗುತ್ತದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಅಷ್ಟೇ ಯಾಕೆ 2045ರ ವೇಳೆಯಾಗುವಾಗ ಮ್ಯಾಗ್ಲೆವ್ ರೈಲು ಟೊಕಿಯೊ ಹಾಗೂ ಒಸಾಕಾ ನಗರವನ್ನು ಕೇವಲ ಒಂದು ತಾಸು ಹಾಗೂ ಏಳು ನಿಮಿಷಗಳಲ್ಲೇ ಬಂಧಿಸುವ ಮಹತ್ತರ ಯೋಜನೆಯನ್ನು ಹೊಂದಿದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಶೇಕಡಾ 80ರಷ್ಟು ರೈಲು ಹಳಿ ಕಾಮಗಾರಿಯು ಸೂರಂಗ ಮಾರ್ಗವಾಗಿ ನಡೆಯಲಿರುವುದರಿಂದ ಯೋಜನೆಗೆ ಭಾರಿ ಖರ್ಚು ($100bn) ಅಂದಾಜಿಸಲಾಗಿದೆ.

ಗಂಟೆಗೆ 600 ಕೀ.ಮೀ. ವೇಗ; ಜಪಾನ್ ಮ್ಯಾಗ್ಲೆವ್ ವಿಶ್ವದಾಖಲೆ

ಹಾಗೆಯೇ ತನ್ನ ಶಿಂಕನ್ಸಾನ್ ಹಾಗೂ ಮ್ಯಾಗ್ಲೆವ್ ರೈಲು ಯೋಜನೆಗಳನ್ನು ವಿದೇಶಗಳಿಗೂ ಮಾರಾಟ ಮಾಡುವ ಯೋಜನೆಯನ್ನು ಜಪಾನ್ ಹೊಂದಿದೆ. ಅಲ್ಲದೆ ಅಮೆರಿಕದಲ್ಲಿ ವಾಷಿಂಗ್ಟನ್-ನ್ಯೂಯಾರ್ಕ್ ನಡುವೆ ಈ ಮಹತ್ತರ ಯೋಜನೆ ಜಾರಿಯಾಗಲಿದೆ. ಅಷ್ಟಕ್ಕೂ ಭಾರತದಲ್ಲೂ ಈ ಮಹತ್ತರ ಯೋಜನೆ ಯಾವಾಗ ಬರಬಹುದು? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿರಿ.

English summary
Japan's maglev train sets world speed record with 600km/h test run
Story first published: Tuesday, April 21, 2015, 11:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark