ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

Written By:

ಪೋಷಕರು ತಮ್ಮ ಮಕ್ಕಳಿಗೆ ಕಾರು ಚಾಲನೆಗೆ ಅವಕಾಶ ನೀಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕು. ಇಲ್ಲವಾದ್ರೆ ಅದು ಮತ್ತೊಂದು ಅನಾಹುತಕ್ಕೆ ಎಡೆಮಾಡಿ ಕೊಡುವುದಲ್ಲಿ ಯಾವುದೇ ಅನುಮಾನವಿಲ್ಲ. ಯಾಕೇಂದ್ರೆ ಬೆಂಗಳೂರಿನ ನಡೆದ ಅಪಘಾತ ಪ್ರಕರಣವೊಂದರಲ್ಲಿ ವಿರ್ದ್ಯಾರ್ಥಿ ಓರ್ವ ದುರಂತವಾಗಿ ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಬೆಂಗಳೂರಿನ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಫ್ಲೈ ಓವರ್‌ನಲ್ಲಿ ನಿನ್ನೇಯಷ್ಟೇ ಈ ಭೀಕರ ಸರಣಿ ಅಪಘಾತ ನಡೆದಿದ್ದು, ವೇಗದ ಕಾರು ಚಾಲನೆ ಸಂದರ್ಭದಲ್ಲಿ ಹಾಲಿನ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಇನೋವಾದಲ್ಲಿದ್ದ ವಿದ್ಯಾರ್ಥಿಗೆ ತೀವ್ರವಾದ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಘಟನೆಗೂ ಮುನ್ನ ಇನ್ನೋವಾ, ಸ್ಕೋಡಾ, ಎಸ್ ಕ್ರಾಸ್ ಕಾರಿನ ಮಧ್ಯೆ ರೇಸ್ ನಡೆಸಿದ್ದ ವಿದ್ಯಾರ್ಥಿಗಳು, ಹೊಸರು ರೋಡ್ ಬಳಿ ಬರುತ್ತಿದ್ದಂತೆ ಹಾಲಿನ ಟ್ಯಾಂಕರ್‌ ಹಿಂದಿಕ್ಕಲು ಮುಂದಾಗಿದ್ದರು. ಆದ್ರೆ ಈ ವೇಳೆ ನಿಯಂತ್ರಣ ತಪ್ಪಿದ ಇನೋವಾ ಕಾರು, ರಸ್ತೆ ವಿಭಜಕ್ಕೆ ಗುದ್ದಿ ನಂತರ ಹಾಲಿನ ಟ್ಯಾಂಕರ್ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ತೀವ್ರವಾಗಿ ಗಾಯಗೊಂಡಿದ್ದ 17 ವರ್ಷದ ಅರ್ಫಾನ್ ಸಲೀಂ ಸ್ಥಳದಲ್ಲೇ ಉಸಿರು ಚೆಲ್ಲಿದರೆ ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಘಟನೆ ನಂತರ ಪರಾರಿಯಾಗಿದ್ದರು. ಆದ್ರೆ ಕೆಲವೇ ಗಂಟೆಗಳಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ ಪೊಲೀಸರು, ಬಾಲಾಪರಾಧಿಗಳನ್ನು ಬಂಧಿಸಿ ರಿಮ್ಯಾಂಡ್ ಹೋಂ ವಶದಲ್ಲಿರಿಸಿದ್ದಾರೆ.

Recommended Video - Watch Now!
2017 Datsun redi-GO 1.0 Litre Review: Specs
ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಅಪಘಾತದ ಸಂದರ್ಭದಲ್ಲಿ ಇನೋವಾ ಕಾರು 150 ಕಿಲೊ ಮೀಟರ್ ವೇಗದಲ್ಲಿತ್ತು ಎನ್ನಲಾಗಿದ್ದು, ಕಾರ್ ರೇಸ್ ಮಾಡುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಅನಿರುದ್ಧನ ಕಾರು ಸಹ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಇನ್ನು ಘಟನೆ ನಂತರ ಬಾಲಾಪಾಧಿಗಳ ಪೋಷಕರನ್ನು ಕೂಡಾ ನ್ಯಾಯಾಂಗ ಬಂಧನ ಮಾಡಲಾಗಿದ್ದು, ಅಪ್ರಾಪ್ತರಿಗೆ ಕಾರು ಚಾಲನೆ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಐಟಿ ಉದ್ಯೋಗಿಯಾಗಿರುವ ಗೋವಿಂದ ರಾಜ್ ಮತ್ತು ಕೃಷ್ಣಮೂರ್ತಿ ಜೈಲು ಕಂಬಿ ಏಣಿಸುವಂತಾಗಿದೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಸದ್ಯದ ವರದಿಗಳ ಪ್ರಕಾರ ಜಾಮೀನು ಮೇಲೆ ಗೋವಿಂದ ರಾಜ್ ಮತ್ತು ಕೃಷ್ಣಮೂರ್ತಿ ಬಿಡುಗೊಂಡಿದ್ದಾರೆ ಎನ್ನಲಾಗಿದ್ದು, ಭೀಕರ ಕಾರು ಅಪಘಾತಕ್ಕೆ ಕಾರಣವಾದ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ವಿದ್ಯಾರ್ಥಿಗಳಿಂದ ಕಾರ್ ರೇಸ್- ಭೀಕರ ಅಪಘಾತದಲ್ಲಿ ಓರ್ವ ದುರ್ಮರಣ

ಆದ್ರೆ ಅದೇನೇ ಇರಲಿ ಪೋಷಕರು ತಮ್ಮ ಮಕ್ಕಳಿಗೆ ಒಣ ಪ್ರತಿಷ್ಠೆಗಾಗಿ ಕಾರು ನೀಡುವ ಮುನ್ನ ಎಚ್ಚರ ವಹಿಸುವುದು ಒಳಿತು. ಇಲ್ಲವಾದ್ರೆ ಅವರ ಜೀವಕ್ಕೆ ಅಷ್ಟೇ ಅಲ್ಲದೇ ಇತರರ ಜೀವಕ್ಕೂ ಕುತ್ತು ತರುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

English summary
Read in Kannada about Joyride turns fatal for Bengaluru teenager.
Story first published: Monday, September 18, 2017, 18:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark