ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಐಷಾರಾಮಿ ಕಾರುಗಳನ್ನು ಖರೀದಿಸಿ ಸುದ್ದಿಯಾಗುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಸೇರ್ಪಡೆಗೊಂಡಿದ್ದಾರೆ. ಇವರು ಐಷಾರಾಮಿ BMW 5 Series ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಇತ್ತೀಚೆಗೆ ಸಿಂಪಲ್ ಸ್ಟಾರ್ ರಕ್ಷಿತ ಶೆಟ್ಟಿಯವರು ಐಷಾರಾಮಿ ಆಡಿ ಕಾರನ್ನು ಖರೀದಿಸಿದ್ದರು. ಇನ್ನು ಜೊತೆ ಜೊತೆಯಲಿ ಸಿರೀಯಲ್ ಖ್ಯಾತಿಯ ನಟಿ ಮೇಘ ಶೆಟ್ಟಿ BMW ಮತ್ತು ಎಂಜಿ ಹೆಕ್ಟರ್ ಎಂಬ ಎರಡು ದುಬಾರಿ ಕಾರುಗಳನ್ನು ಖರೀದಿಸಿದ್ದರು, ಬಳಿಕ ನಟ ಶೈನ್ ಶೆಟ್ಟಿ ಕೂಡ ಐಷಾರಾಮಿ BMW X1 ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಸ್ಕ್ರೀನ್ ರೈಟರ್, ಗೀತ ಸಾಹಿತಿಯಾಗಿ ಮತ್ತು ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಸಂತೋಷ್ ಆನಂದ್‌ರಾಮ್ BMW 5 Series ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಕನ್ನಡ ನಿರ್ದೇಶಕ ಸಂತೋಷ್ ಅವರು ಬಿಳಿ ಬಣ್ಣದ BMW 5 Series 520D ವೆರಿಯೆಂಟ್ ಮಾದರಿಯನ್ನು ಖರೀದಿಸಿದ್ದಾರೆ. ಬೆಂಗಳೂರಿನ BMW Deutsche Motoren ಡೀಲರ್ ಬಳಿಯಿಂದ ಇವರು ಖರೀದಿಸಿದ್ದಾರೆ. ಸಂತೋಷ್ ಅವರು ತಮ್ಮ ಕುಟುಂಬದವರೊಂದಿಗೆ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

BMW 5 Series ಕಾರನ್ನು ಸಂತೋಷ್ ಅವರು ತಮ್ಮ ಕುಟುಂಬದವರೊಂದಿಗೆ ವಿತರಣಣೆ ಪಡೆಯುತ್ತಿರುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ವೆಲ್‌ಕಮ್ ಹೋಮ್ BMW 520D. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ನನ್ನ ಧನ್ಯವಾದಗಳು' ಎಂದುನಿರ್ದೇಶಕ ಸಂತೋಷ್ ಆನಂದ್‌ರಾಮ್ ಬರೆದುಕೊಂಡಿದ್ದಾರೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಹಲವು ವರ್ಷಗಳಿಂದ ಸಂತೋಷ್ ಆನಂದ್‌ರಾಮ್ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕರಾಗಿ ಸಕ್ರಿಯರಾಗಿದ್ದಾರೆ. ರ್ದೇಶಕ ಸಂತೋಷ್ ಅವರು ನಟ ಯಶ್ ನಟನೆಯ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾ ಮೂಲಕ ನಿರ್ದೇಶಕರಾಗಿ ಖ್ಯಾತಿಗಳಿಸಿದರು.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಈ ಚಿತ್ರಗಳ ಕೆಳಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಇನ್ನು ಇವರು ಅಗ್ರಜ, ಗಜಕೇಸರಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಯವರತ್ನ ಸಿನಿಮಾಗೆ ಆಕ್ಷನ್ ಕಟ್ ಹೇಳಿದರು.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಬಳಿಕ ಸಂತೋಷ್ ಆನಂದ್ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆ ಯವರತ್ನ ಸಿನಿಮಾ ಮಾಡಿದರು. ಸಂತೋಷ್ ಆನಂದ್ ರಾಮ್ ಅವರು ಖರೀದಿಸಿದ BMW 5 Series ಕಾರಿನ ಬಗ್ಗೆ ಹೇಳುವುದಾದರೆ, ಇದು 530ಐ ಎಂ ಸ್ಪೋರ್ಟ್, 520ಡಿ ಮತ್ತು 530ಡಿ ಎಂ ಸ್ಪೋರ್ಟ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

BMW 5 Series ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಹೊಸ ಗ್ರಿಲ್ ಮತ್ತು ಹೊಸ ಸ್ಲೀಕ್ ಹೆಡ್ ಲೈಟ್ ಅನ್ನು ಅಳವಡಿಸಿದ್ದಾರೆ. ಈ ಹೊಸ ಕಾರು ಹಿಂದಿನ ಮಾದರಿಗಿಂತ ಆಕರ್ಷಕವಾಗಿದೆ. ಈ ಕಾರಿನ ಬಂಪರ್ ಗಳೊಂದಿಗೆ ಆಗ್ರೆಸಿವ್ ವಿನ್ಯಾಸಗೊಳಿಸಿದ ಏರ್ ಡ್ಯಮ್ ಗಳನ್ನು ಹೊಂದಿದೆ,

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಇನ್ನು ಈ ಕಾರಿನಲ್ಲಿ ಮರುವಿನ್ಯಾಸಗೊಳಿಸಿದ ಡ್ಯುಯಲ್ ಟೋನ್ ಅಲಾಯ್ ವ್ಜೀಲ್ ಗಳನ್ನು ಅಳವಡಿಸಲಾಗಿದೆ. ಈ ಐಷಾರಾಮಿ ಕಾರಿನ ಮುಂಭಾಗ ಹೊಸ ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ತೆಳ್ಳನೆಯ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಈ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೇಲ್ ಲ್ಯಾಂಪ್ ಮತ್ತು ಕ್ವಾಡ್-ಎಕ್ಸಾಸ್ಟ್ ಗಳೊಂದಿಗೆ ಸ್ಪೋರ್ಟಿಯರ್ ಬಂಪರ್ ಅನ್ನು ಹೊಂದಿದೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಹೊಸ BMW 5 Series ಕಾರಿನ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಪ್ಯಾನೆಲ್, ಆಂಬಿಯೆಂಟ್ ಲೈಟಿಂಗ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ಸನ್‌ರೂಫ್, ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇಯೊಂದಿಗೆ ಬಿಎಂಡಬ್ಲ್ಯು ಐ-ಡ್ರೈವ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಈ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇದರಲ್ಲಿ ಸುರಕ್ಷತೆಗಾಗಿ 8 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ, ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಐಷಾರಾಮಿ ಕಾರು, 2.0-ಲೀಟರ್, ಇನ್ ಲೈನ್-ನಾಲ್ಕು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 248 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ BMW 5 Series ಕಾರನ್ನು ಖರೀದಿಸಿದ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್

ಇದರೊಂದಿಗೆ 2.0-ಲೀಟರ್ ಇನ್ ಲೈನ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 187.7 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್, ಡಿಸೇಲ್ ಎಂಜಿನ್ ಆಯ್ಕೆಯನ್ನು ನೀಡಲಾಗುತ್ತದೆ. ಈ BMW 5 Series ಕಾರು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್, ಜಾಗ್ವಾರ್ ಎಕ್ಸ್‌ಎಫ್ ಮತ್ತು ವೋಲ್ವೋ ಎಸ್90 ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Kannada director santhosh ananddram bought new bmw 5 series car details
Story first published: Tuesday, August 31, 2021, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X