ನಟರಾದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಪ್ರಯಾಣಿಸುತ್ತಿದ್ದ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿ ವ್ಯಾಗನ್ ಕಾರು ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ಅಪಘಾತಕೀಡಾಗಿದ್ದು, ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಈ ಅಪಘಾತ ನಡೆದ ಸಂದರ್ಭದಲ್ಲಿ ನಟರಿಬ್ಬರ ಜೊತೆ ಆದಿಕೇಶವಲು ಮೊಮ್ಮಗ ವಿಷ್ಣು ಅವರು ಸಹ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿರುವುದು ಇಷ್ಟೆಲ್ಲಾ ತೊಂದರೆಗೆ ಮುಖ್ಯ ಕಾರಣ ಎಂಬ ವಿಚಾರವನ್ನು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಾಲ್ ಬಾಗ್ ರಸ್ತೆ ಕಡೆಯಿಂದ ವೇಗವಾಗಿ ಬಂದ ಮರ್ಸಿಡಿಸ್ ಮರ್ಸಿಡಿಸ್ ಬೆಂಝ್ ಎಎಂಜಿ ಜಿ ವ್ಯಾಗನ್ ಕಾರು ಸೌತ್ ಎಂಡ್ ಸರ್ಕಲ್ ಬಳಿ ಬಿಬಿಎಂಪಿ ನಾಮಫಲಕಕ್ಕೆ ಜೋರಾಗಿ ಅಪ್ಪಳಿಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಈ ಅಪಘಾತದಲ್ಲಿ ಒಂದು ಓಮ್ನಿ ಕಾರು ಪಲ್ಟಿಯಾಗಿದೆ. ಅದರಲ್ಲಿದ್ದವರು ಗಂಭೀರವಾಗಿ ಗಾಯಗೊಂಡವರು ಸಾಗರ್ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಜಿ ವ್ಯಾಗನ್ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಯನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಅಪಘಾತದ ತನಿಖೆ ನೆಡೆಸುತ್ತಿರುವ ರೀತಿ ಹೆಚ್ಚಿನ ಮಂದಿಗೆ ಅನುಮಾನ ತರಿಸಿದ್ದು, ಗಾಂಜಾದ ನಿಜ ಸಂಗತಿಯನ್ನು ಮರೆಮಾಚುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಕಾರಿನ ಬಗ್ಗೆ ಹೇಳುವುದಾದರೆ, ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯ ಆಫ್ ರೋಡರ್ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಕಾರು ಇದು ಎಕ್ಸ್‌ಟೀರಿಯರ್ ಜೊತೆಗೆ ಇಂಟಿರಿಯರ್ ಅಚ್ಚರಿಗಳನ್ನು ಪಡೆದುಕೊಂಡಿದೆ.
ಕಾರಿನ ಒಳಗಡೆ ಹೆಚ್ಚು ಗುಣಮಟ್ಟ ಹೊಂದಿರುವ ಚರ್ಮದ ಹೋದಿಕೆ, ಎರಡು ವಿಭಿನ್ನ ಒಳಮೈಗಳ ಆಯ್ಕೆ, ಗ್ರಾಹಕರಿಗೆ ಟು ಟೋನ್ ಪೋರ್ಸೆಲೈನ್ ಬ್ಲಾಕ್ ಕಾಂಬಿನೇಷನ್ ಅಥವಾ ಸಿಂಗಲ್ ಟೋನ್ ಬ್ಲ್ಯಾಕ್ ಇಂಟಿರಿಯರ್ ಆಯ್ಕೆ ಮಾಡುವ ಅವಕಾಶವಿರಲಿದೆ.
ಪ್ರಸ್ತುತ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಕಾರು ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಲಯವಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿದೆ ಹಾಗು 2 ಕೋಟಿ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark