ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

Written By:

ವೇಗವಾಗಿ ಚಲಿಸುತ್ತಿದ್ದ ಕೆಟಿಎಂ ಡ್ಯೂಕ್ 390 ಬೈಕ್ ನಿಯಂತ್ರಣ ಕಳೆದುಕೊಂಡು ಸೇತುವೆ ಇಂದ ಕೆಳಗೆ ಬಿದ್ದಿದ್ದು, ಇದರ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

To Follow DriveSpark On Facebook, Click The Like Button
ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಪುಣೆ ನಗರದಲ್ಲಿರುವ ಕರ್ವೆ ರಸ್ತೆಯಲ್ಲಿ ಮೇ15 ರ ಮುಂಜಾನೆ ಸರಿ ಸುಮಾರು ಒಂದು ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರು ವೀರ್ ಸಾವರ್ಕರ್ ಎನ್ನಲಾಗಿದೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಹೆಚ್ಚು ಕಡಿಮೆ 40 ಮೀಟರ್ ಎತ್ತರದಿಂದ ಬೈಕ್ ಹಾರಿದ್ದು, ಬೈಕ್ ಸವಾರ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸ್ಥಳದಲ್ಲಿಯೇ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಮಾಹಿತಿ ಪ್ರಕಾರ ಮೃತ ವ್ಯಕ್ತಿಯು ಸಾರರ್ಕರ್ ಆಟೋಮೊಬೈಲ್ಸ್‌ನ ಮಾಲೀಕರು ಎನ್ನಲಾಗಿದ್ದು, ತಮ್ಮ ಸ್ನೇಹಿತನೊಂದಿಗೆ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಘಟನೆಗೆ ಸಂಬಂಧಿಸಿದಂತೆ ಬೈಕ್ ಸವಾರ ಹೆಚ್ಚು ವೇಗವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಎಷ್ಟು ಕಿ.ಮೀ ವೇಗವಾಗಿ ತೆರಳುತ್ತಿದ್ದರು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಕೇವಲ 2.5 ಅಡಿ ಉದ್ದದ ಫ್ಲೈಓವರ್ ಸಿಮೆಂಟ್ ಗೋಡೆ ಹಾರಿದ್ದನ್ನು ಗಮನಿಸಿದ ಸ್ನೇಹಿತರು ತಕ್ಷಣ ಸ್ಥಳಕ್ಕೆ ಧಾವಿಸಿ ತೀವ್ರವಾಗಿ ಗಾಯಗೊಂಡಿದ್ದ ವೀರ್ ಸಾವರ್ಕರ್ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ವೀರ್ ಸಾವರ್ಕರ್, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ವಿಷಾದಕರ ಸಂಗತಿಯಾಗಿದೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಈ ಅಪಘಾತದ ಸಮಯದಲ್ಲಿ ಹೆಲ್ಮೆಟ್ ಧರಿಸಿದ್ದ ವೀರ್ ಸಾವರ್ಕರ್ ಅವರ ದೇಹಕ್ಕೆ ಹೆಚ್ಚಿನ ಮಟ್ಟದ ಗಾಯಗಳಾಗಿದ್ದು, ಆಂತರಿಕ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ.

ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ : ಸವಾರ ಸ್ಥಳದಲ್ಲಿಯೇ ಸಾವು

ಸ್ಥಳೀಯ ಮಾಧ್ಯಮಗಳು ಪುಣೆಯಲ್ಲಿರುವ ರಸ್ತೆಗಳ ಕೆಟ್ಟ ಸ್ಥಿತಿಯೇ ಈ ಅವಘಡಕ್ಕೆ ಕಾರಣ ಎಂದು ಬಿತ್ತರಿಸುತ್ತಿದ್ದು, ಪೊಲೀಸರು ಮಾತ್ರ ವೇಗವೇ ಇದಕ್ಕೆಲ್ಲಾ ಕಾರಣ ಎನ್ನುತ್ತಿವೆ.

Read more on ಕೆಟಿಎಂ ktm
English summary
Read in kannada about A KTM Duke 390 crashed off a bridge in the city of Pune killing the rider.
Story first published: Tuesday, May 16, 2017, 19:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark