ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿ ಸಂಭವಿಸಿರುವ ಐಷಾರಾಮಿ ಲಂಬೋರ್ಗಿನಿ ಕಾರಿನ ಅನಾಹುತವು ವಾಹನೋದ್ಯಮದಲ್ಲಿ ಭಾರಿ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗ ಕೋಟಿ ದುಬಾರಿಯ ಲಂಬೋರ್ಗಿನಿ ಕಾರಿಗೆ ಬೆಂಕಿ ತಗುಲಿದಾದರೂ ಹೇಗೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಾಗುತ್ತದೆ. ಘಟನೆ ಹಿನ್ನೆಲೆಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ದಕ್ಷಿಣ ದೆಹಲಿಯ ಬದರ್‌ಪುರದಲ್ಲಿ 2.5 ಕೋಟಿ ರುಪಾಯಿಗಳಷ್ಟು ದುಬಾರಿಯ ಲಂಬೋರ್ಗಿನಿ ಗಲರ್ಡೊ ಸೂಪರ್ ಕಾರಿಗೆ ಸಡನ್ ಆಗಿ ಬೆಂಕಿ ಹಚ್ಚಿಕೊಂಡಿತ್ತು.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ಕಾರಿನ ಹಿಂಭಾಗದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸುತ್ತಾರೆ.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ಆದರೆ ಅದೃಷ್ಟವಶಾತ್ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ಐಷಾರಾಮಿ ಲಂಬೋರ್ಗಿನಿ ಕಾರಿನ ಹಿಂಭಾಗದಲ್ಲಿ ಶಕ್ತಿಶಾಲಿ 5.2 ಲೀಟರ್ ಎಂಜಿನ್ ಆಳವಡಿಸಲಾಗಿದೆ.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ಪ್ರಾಥಮಿಕ ವರದಿಗಳ ಪ್ರಕಾರ ಇಂಧನ ಟ್ಯಾಂಕ್ ನಲ್ಲಿ ಲೀಕೇಜ್ ಕಂಡುಬಂದಿದೆ ಎಂಬುದು ತಿಳಿದು ಬಂದಿದೆ. ಆದರೆ ಸಂಸ್ಥೆಯ ಮೂಲಗಳು ಇದನ್ನು ನಿರಾಕರಿಸುತ್ತಿದೆ. ಇದರೊಂದಿಗೆ ಕಾರಿಗೆ ಬೆಂಕಿ ಹಚ್ಚಿಕೊಂಡಿರುವುದರ ಹಿಂದೆ ನಿಗೂಢತೆ ಮನೆ ಮಾಡಿದೆ.

ಲಂಬೋರ್ಗಿನಿ ಕಾರಿನ ಬೆಂಕಿಯ ಹಿಂದೆ ಮನೆ ಮಾಡಿದ ನಿಗೂಢತೆ

ನಿಮ್ಮ ಮಾಹಿತಿಗಾಗಿ ಸರಿ ಸುಮಾರು 10 ವರ್ಷಗಳಷ್ಟು ಕಾಲ ಮಾರಾಟದಲ್ಲಿದ್ದ ಗಲರ್ಡೊ ಕಾರಿನ ಉತ್ಪಾದನೆಯನ್ನು 2013ರಲ್ಲಿ ಇಟಲಿಯ ಐಕಾನಿಕ್ ಸಂಸ್ಥೆಯು ಹಿಂಪಡೆದಿತ್ತು. ಇದರ ಸ್ಥಾನವನ್ನು ಮತ್ತಷ್ಟು ಆಕರ್ಷಕ ಹ್ಯುರಕನ್ ಕಾರು ತುಂಬಿಕೊಂಡಿತ್ತು.

Most Read Articles

Kannada
English summary
Lamborghini caught fire in Delhi
Story first published: Wednesday, August 26, 2015, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X