ಅದ್ಭುತ, ಅಮೋಘ; ಬಸ್ಸಿನಡಿಯಿಂದಲೇ ಕಾರು ಸಂಚಾರ

By Nagaraja

ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಹುಡುಕುತ್ತಿರುವ ಆಟೋಮೋಟಿವ್ ಸಂಸ್ಥೆಗಳಿಗೆ ಹೊಸ ತಂತ್ರಜ್ಞಾನದ ದರ್ಶನವಾಗಿದೆ. ಚೀನಾದಲ್ಲಿ ನಡೆಯುತ್ತಿರುವ ಬೀಜಿಂಗ್ ಇಂಟರ್ ನ್ಯಾಷನಲ್ ಹೈ-ಟೆಕ್ ಎಕ್ಸ್ ಪೋದಲ್ಲಿ (CHITEC), ಟ್ರಾನ್ಸಿಸ್ಟ್ ಎಕ್ಸ್ ಪ್ಲೋರ್ ಬಸ್ ಸಂಸ್ಥೆಯು ಅತಿ ನೂತನ ಕಾನ್ಸೆಪ್ಟ್ ಬಸ್ಸೊಂದನ್ನು ಪ್ರದರ್ಶಿಸಿದೆ.

ಬೀಜಿಂಗ್ ತಳಹದಿಯ ಟ್ರಾನ್ಸಿಸ್ಟ್ ಸಂಸ್ಥೆಯು ಪ್ರದರ್ಶಿಸಿರುವ ಕಾನ್ಸೆಪ್ಟ್ ಬಸ್, ರಸ್ತೆಯಲ್ಲಿ ನಿರ್ಮಿಸಲಾಗಿರುವ ಟ್ರ್ಯಾಕ್ ಗಳ ಮೇಲೆ ಸಂಚರಿಸಲಿದ್ದು, ಇದರ ಕೆಳಗಡೆಯಿಂದಲೇ ಕಾರುಗಳು ಸುಗಮವಾಗಿ ಸಂಚರಿಸಲಿದೆ. ಈ ವಿನೂತನ ವ್ಯವಸ್ಥೆಯಿಂದ ವಾಯು ಮಾಲಿನ್ಯ ಕಡಿಮೆ ಮಾಡುವುದರೊಂದಿಗೆ ವಾಹನ ದಟ್ಟಣೆಗೆ ಸೂಕ್ತ ಪರಿಹಾರವಾಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

'ಲ್ಯಾಂಡ್ ಏರ್ ಬಸ್' ಎಂಬ ಹೆಸರಿನಿಂದ ಅರಿಯಲ್ಪಡುವ ಟ್ರಾನ್ಸಿಸ್ಟ್ ಎಕ್ಸ್ ಪ್ಲೋರ್ ಬಸ್ಸುಗಳು ರಸ್ತೆ ಇತ್ತ ಕಡೆಗಳಲ್ಲೂ ಚಲಿಸುವ ಲೇನ್ ಗಳಿರಲಿದ್ದು, ಮೇಲ್ಬಾಗದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಪ್ರಯಾಣಿಕರು ಮೇಲ್ಬಾಗದಲ್ಲಿ ಕುಳಿತುಕೊಳ್ಳುವುದರಿಂದ ಕೆಳಗಡೆಯ ಭಾಗವು ಖಾಲಿ ಜಾಗದಂತೆ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿರಲಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಅಂದರೆ ಬಸ್ ಇದ್ದರೇನು ಇಲ್ಲದಿದ್ದರೇನು ? ಇಂತಹ ಬಸ್ಸುಗಳ ಅಡಿಯಲ್ಲಿ ಎರಡು ಮೀಟರ್ ಗಳಷ್ಟು ಎತ್ತರದ ಕಾರುಗಳು ಆರಾಮವಾಗಿ ಸಂಚರಿಸಬಹುದಾಗಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

1400 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ವಿಶೇಷ ಬಸ್ಸುಗಳು ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಚೀನಾ ಸಾರಿಗೆ ವ್ಯವಸ್ಥೆಯಲ್ಲಿ ನೂತನ ಲ್ಯಾಂಡ್ ಏರ್ ಬಸ್ ಕಾನ್ಸೆಪ್ಟ್ ಹೊಸ ಮೈಲುಗಲ್ಲನ್ನು ಬರೆಯಲಿದೆ. ಇದಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿದ ಟ್ರ್ಯಾಕ್ ಗಳ ಅಗತ್ಯವಿರುತ್ತದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಮೆಟ್ರೋ ರೈಲಿನ ರೀತಿಯಲ್ಲಿ ಕಾರ್ಯಾಚರಿಸಲಿರುವ ನೂತನ ಲ್ಯಾಂಡ್ ಏರ್ ಬಸ್ ವ್ಯವಸ್ಥೆಯು 40ರಷ್ಟು ಸಾಂಪ್ರದಾಯಿಕ ಬಸ್ಸುಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಈ ಮುಖಾಂತರ 800 ಟನ್ ಗಳಷ್ಟು ಇಂಧನ ಉಳಿತಾಯದೊಂದಿಗೆ ವರ್ಷಂಪ್ರತಿ 2,480 ಟನ್ ಕಾರ್ಬನ್ ಎಮಿಷನ್ ತಡೆಗಟ್ಟಬಹುದಾಗಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಕಡಿಮೆ ಕಾಲಾವಧಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ ಪ್ರಸ್ತಕ್ತ ಸಾಲಿನಲ್ಲೇ ಪ್ರಾಯೋಗಿಕ ಟ್ರ್ಯಾಕ್ ಗಳನ್ನು ರಚಿಸುವ ಇರಾದೆ ವ್ಯಕ್ತಪಡಿಸಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಚೀನಾ ವಾಹನ ತಯಾರಕರ ಒಕ್ಕೂಟದ ಪ್ರಕಾರ 2015ನೇ ಸಾಲಿನಲ್ಲಿ ಚೀನಾ ಪ್ರಯಾಣಿಕ ಕಾರುಗಳ ಮಾರಾಟವು 20 ದಶಲಕ್ಷವನ್ನು ದಾಟಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 7.3ರಷ್ಟು ಏರುಗತಿ ಸಾಧಿಸುತ್ತಿದೆ.

ಚೀನಾದಲ್ಲಿ ನನಸಾಗಲಿದೆ ಬಸ್ಸಿನಡಿಯಿಂದಲೇ ಕಾರು ಸಂಚಾರ

ಇಲ್ಲಿ ಗಮನಾರ್ಹ ಸಂಗತಿಯೆಂದರೆ ಚೀನಾದ ಕೆಲವು ಪ್ರಮುಖ ನಗರಗಳು ಲ್ಯಾಂಡ್ ಏರ್ ಬಸ್ ಯೋಜನೆ ಜಾರಿಗೊಳಿಸುವತ್ತ ಉತ್ಸುಕತೆ ತೋರಿದೆ. ಜಾಂಗ್ ಝೂ ನಗರದಲ್ಲಿ ಜುಲೈನಿಂದ ಆಗಸ್ಟ್ ತಿಂಗಳಲ್ಲಿ ನಡುವೆ ಪ್ರಾಯೋಗಿಕ ಸಂಚಾರ ನೆರವೇರಲಿದೆ.

Most Read Articles

Kannada
English summary
land airbus could be future transportation
Story first published: Thursday, May 26, 2016, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X