58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

Written By:

ಫ್ರಾನ್ಸ್‌ನಲ್ಲಿ ನೂತನ ಗಿನ್ನೆಸ್ ದಾಖಲೆಯೊಂದನ್ನು ಬರೆಯಲಾಗಿದೆ. ಸಾಮಾನ್ಯಕ್ಕೂ ವಿರುದ್ಧವಾಗಿ 58 ಮಂದಿ ಸ್ಪರ್ಧಾಳುಗಳು ಈ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ವಿಷಯ ಏನೆಂದರೆ ಏಕಕಾಲಕ್ಕೆ 58ರಷ್ಟು ಸ್ಪರ್ಧಾಳುಗಳು ಫ್ಲೈ ಬೋರ್ಡ್ ವಾಟರ್ ಜೆಟ್ ಪ್ಯಾಕ್ ನಲ್ಲಿ (ಚಿಮ್ಮುಚೀಲ) ತಮ್ಮ ಸಾಹಸ ಪ್ರದರ್ಶಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಫ್ರಾನ್ಸ್‌ನ cavalaire-su-mer ಸಮುದ್ರ ಕಿನಾರೆಯಲ್ಲಿ ದಾಖಲೆ ಸ್ಥಾಪನೆಯಾಗಿದ್ದು, ವಿಶ್ವದ ಅತಿ ದೊಡ್ಡ ಜೆಟ್ ಪ್ಯಾಕ್ ಫ್ಲೈಟ್ ರಚನೆ ಎಂಬ ಗೌರವಕ್ಕೆ ಪಾತ್ರವಾಗಿದೆ.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಬ್ರೆಟ್ಲಿಂಗ್ ಫ್ಲೈ ಬೋರ್ಡ್ ಫ್ಯಾಮಿಲಿಯ ಸದಸ್ಯರಾಗಿರುವ 58 ಸ್ಪರ್ಧಿಗಳು ಏಕಕಾಲದಲ್ಲಿ ನೀರಿನ ಚಿಮ್ಮುಚೀಲದಲ್ಲಿ ಸಾಹಸ ಪ್ರದರ್ಶನಗೈದಿದ್ದರು.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಪ್ರತ್ಯಕ್ಷದರ್ಶಿಯ ಪ್ರಕಾರ, ವಾಟರ್ ಜೆಟ್ ಪ್ಯಾಕ್ ಸಾಹಸ ಸ್ಟಂಟ್ ನೋಡುವುದೇ ಅತೀವ ಆನಂದದ ಜೊತೆಗೆ ರೋಚಕತೆಗೆ ಕಾರಣವಾಗಿತ್ತು.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ನೀರಿನಿಂದ ಆಗಸಕ್ಕೆ ಚಿಮ್ಮುವ ಸ್ಪರ್ಧಾಳುಗಳು ಮತ್ತೆ ನೀರೊಳಗೆ ಧುಮುಕಿ ಸರ್ಕಸ್ ರೀತಿಯಲ್ಲಿ ಸಾಹಸ ಪ್ರದರ್ಶನದ ರಸದೌತಣದ ಅನುಭವ ನೀಡಿದ್ದರು.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಈ ಸಂದರ್ಭದಲ್ಲಿ 2015ರ ಉತ್ತರ ಅಮೆರಿಕ ಫ್ಲೈ ಬೋರ್ಡ್ ಚಾಂಪಿಯನ್ ಡೆಮೋನ್ ರಿಪ್ಪಿ (Damone Rippy) ತನ್ನ ನೆಚ್ಚಿನ 'ಐ ಆಫ್ ದಿ ಸ್ಟ್ರೋಮ್' ಡಬಲ್ ಬ್ಯಾಕ್ ಪ್ಲಿಪ್ ಸಾಹಸ ಪ್ರದರ್ಶನ ನೀಡುವ ಮೂಲಕ ಗಮನಸೆಳೆದರು.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಈ ವಿಶ್ವದಾಖಲೆಯ ಪ್ರದರ್ಶನವನ್ನು ಕಳೆದ ಜೂನ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈಗ ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್‌ನಿಂದ ಅಧಿಕೃತ ದಾಖಲೆಯ ಮಾನ್ಯತೆಗೆ ಪಾತ್ರವಾಗಿದೆ.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ನಿಮ್ಮ ಮಾಹಿತಿಗಾಗಿ, ಫ್ಲೈ ಬೋರ್ಡ್ ಎಂಬುದು ವಾಟರ್ ಜೆಟ್ ಪ್ಯಾಕ್ ಅಥವಾ ಚಿಮ್ಮುಚೀಲದಿಂದ ಪ್ರದರ್ಶಿಸಿರುವ ವಿಶಿಷ್ಟ ರೀತಿಯ ಸಾಹಸ ಜಲಕ್ರೀಡೆಯಾಗಿದೆ.

58 ಮಂದಿಯಿಂದ ನೂತನ ಫ್ಲೈ ಬೋರ್ಡ್ ಜೆಟ್ ಪ್ಯಾಕ್ ದಾಖಲೆ

ಕಳೆದ ಕೆಲವು ವರ್ಷಗಳಿಂದ ನೀರು ಹಾಗೂ ವಾಯುವಿನಲ್ಲಿ ಪ್ರದರ್ಶಿಸುವ ಫ್ಲೈ ಬೋರ್ಡ್ ಸ್ಟಂಟ್ ಶೋಗಳು ಹೆಚ್ಚು ಜನಪ್ರಿಯತೆಗೆ ಸಾಕ್ಷಿಯಾಗುತ್ತಿದೆ.

ರೋಚಕ ವೀಡಿಯೋ ವೀಕ್ಷಿಸಿ

English summary
Guinness World Records: Largest water jet pack flight formation
Story first published: Tuesday, August 11, 2015, 11:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark