ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

By Nagaraja

ಆಧುನಿಕ ಕಾಲಘಟ್ಟದಲ್ಲಿ ವಿಮಾನಯಾನವನ್ನು ಅತಿ ಹೆಚ್ಚು ಆಶ್ರಯಿಸುತ್ತಿರುವ ಇದೇ ಸಂದರ್ಭದಲ್ಲೇ ವಿಮಾನಗಳ ಭದ್ರತೆಗೆ ಸಂಬಂಧಪಟ್ಟಂತೆ ಆತಂಕಗಳು ಹೆಚ್ಚಿವೆ. ವಿಮಾನಗಳ ಮೇಲೆ ನಡೆಯುತ್ತಿರುವ ಹಲವು ವಿಧದ ದಾಳಿಗಳ ಬಗ್ಗೆ ನಾವು ಚರ್ಚಿಸಿರುತ್ತೇವೆ. ಲೇಸರ್ ಕಿರಣ ದಾಳಿ ಇದಕ್ಕೊಂದು ನೂತನ ಸೇರ್ಪಡೆಯಾಗಿದೆ.

ಲೇಸರ್ ಕಿರಣಗಳ ದಾಳಿಗೆ ವಿಮಾನಗಳ ಪೈಲಟ್ ಗಳು ನೇರ ಗುರಿಯಾಗುತ್ತಿದ್ದು, ಇದರಿಂದಾಗಿ ಭಾರಿ ಅವಘಡಗಳೇ ಸಂಭವಿಸುವ ಭೀತಿಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಸಂಬಂಧ ಓದುಗರು ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆಯಲ್ಲಿ ಕಾಕ್ ಪಿಟ್ ನತ್ತ ಬೀರುವ ಲೇಸರ್ ಕಿರಣಗಳು ಭಾರಿ ಅವಘಡಗಳಿಗೆ ಕಾರಣವಾಗುತ್ತಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ತೀವ್ರತರಹದ ಪ್ರಕಾಶಮಾನವಾದ ಲೇಸರ್ ಕಿರಣಗಳು ಪೈಲಟ್ ಗಳ ತಾತ್ಕಾಲಿಕ ಕುರುಡುತನಕ್ಕೆ ಕಾರಣವಾಗುತ್ತದೆ. ಇದರಿಂದ ವಿಮಾನಗಳ ನಿಯಂತ್ರಣ ತಪ್ಪುತ್ತದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಗಳಂತಹ ತುರ್ತು ವೇಳೆಯಲ್ಲಿ ಪೈಲಟ್ ಗಳು ಅತಿ ಹೆಚ್ಚು ಕಾರ್ಯ ಮಗ್ನವಾಗಿರುತ್ತದೆ. ಆದರೆ ಆಕಾಶದತ್ತ ಬೀಸುವ ಇಂತಹ ಲೇಸರ್ ಕಿರಣಗಳಿಂದಾಗಿ ಅವಘಡಗಳು ಸೃಷ್ಟಿಯಾಗುತ್ತದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಲೇಸರ್ ಕಿರಣಗಳು ಎಷ್ಟೊಂದು ಪ್ರಭಾವಶಾಲಿ ಎಂದರೆ ಇದು ಪೈಲಟ್ ಗಳ ಶಾಶ್ವತ ಕುರುಡುತನಕ್ಕೆ ಕಾರಣವಾಗುತ್ತಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಕೇವಲ ಪೈಲಟ್ ಗಳು ಮಾತ್ರವಲ್ಲದೆ ಪ್ರಯಾಣಿಕರ ಮೇಲೂ ಲೇಸರ್ ವಿಕಿರಣಗಳ ಪ್ರಭಾವ ತಗಲಿರುವ ಘಟನೆಗಳು ವರದಿಯಾಗಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ವಿಶ್ಲೇಷಕರ ಪ್ರಕಾರ ಲೇಸರ್ ಆಯುಧಗಳನ್ನು ಮಿಲಿಟರಿ ಅಗತ್ಯಗಳಿಗೆ ಬಳಕೆ ಮಾಡಲಾಗುತ್ತಿದ್ದು, ಅಭಿವೃದ್ಧಿ ಹಂತದಲ್ಲಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಇವುಗಳು ಹೆಚ್ಚು ದುಬಾರಿ ಹಾಗೂ ವಿಮಾನಗಳ ರಚನಾತ್ಮಕಕ್ಕೆ ಹಾನಿಯನ್ನುಂಟು ಮಾಡುತ್ತದೆ. ಅಲ್ಲದೆ ಮಿಲಿಟರಿಯೇತರ ಲೇಸರ್ ಗಳನ್ನು ಪ್ರಯೋಗಿಸುವುದರಿಂದ ಇಂತಹ ಅವಘಡ ಪ್ರಸಂಗಗಳು ಘಟಿಸುತ್ತಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಭೂಮಿಯಲ್ಲಿ ನಿಂತು ಲೇಸರ್ ಕಿರಣಗಳನ್ನು ಪ್ರಯೋಗಿಸುವ ವ್ಯಕ್ತಿಗಳು ಈ ಬಗ್ಗೆ ಎಚ್ಚರ ವಹಿಸಿದರೆ ಅಪಘಾತವನ್ನು ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಅಜ್ಞಾತ ವ್ಯಕ್ತಿಗಳು ವಿಮಾನಗಳ ಮೇಲೆ ಲೇಸರ್ ಕಿರಣಗಳನ್ನು ಪ್ರಯೋಗಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ವಾತಾವರಣದ ದೂರಸಂವೇದಿಗಳಂತಹ ಸಂಶೋಧನೆಗಳಿಗಾಗಿ ಲೇಸರ್ ಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಕೆಲವು ಬಾರಿ ರಾತ್ರಿ ಸಮಯದಲ್ಲಿ ತೆರೆದ ಜಾಗಗಳಲ್ಲಿ ನಡೆಯುವ ಮನರಂಜನೆ ಕಾರ್ಯಕ್ರಮಗಳಲ್ಲಿ ಲೇಸರ್ ಕಿರಣಗಳನ್ನು ಬಳಕೆ ಮಾಡಲಾಗುತ್ತದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ಇದು ಕೆಲವು ಸಂದರ್ಭದಲ್ಲಿ ಉದ್ದೇಶಪೂರ್ವಕ ಅಥವಾ ಆಕಸ್ಮಿಕವಾಗಿ ಆಕಾಶದಲ್ಲಿ ಸಂಚರಿಸುವ ವಿಮಾನಗಳ ಮೇಲೆ ದಾಳಿಯಿಡುವ ಸಾಧ್ಯತೆಯಿರುತ್ತದೆ. ಇದರಿಂದ ಅವಘಡಗಳು ಸಂಭವಿಸುತ್ತದೆ.

ವಿಮಾನಯಾನಕ್ಕೆ ಭೀತಿ ತಂದಿತ್ತ ಲೇಸರ್ ಕಿರಣ ದಾಳಿ ಪ್ರಕರಣ

ವಿಮಾನಗಳ ಮೇಲೆ ಸಂಭವಿಸುತ್ತಿರುವ ಲೇಸರ್ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಸಾವಿರಾರು ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

Most Read Articles

Kannada
Read more on ವಿಮಾನ plane
English summary
lasers lights to cause damage to an aircraft
Story first published: Thursday, April 7, 2016, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X