ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

Written By:

ನೀವು ಹಲವು ವಿಧದ ಬೈಕ್‌ಗಳನ್ನು ನೋಡಿರುವೀರಾ? ಅಂದ ಹಾಗೆ ಸಾಮಾನ್ಯ ಬೈಕ್‌ವೊಂದಕ್ಕೆ ಇರುವ ಚಕ್ರಗಳೆಷ್ಟು? ಎರಡು ಎಂಬುದು ನಮ್ಮೆಲ್ಲರ ಉತ್ತರ.

ಆದರೆ ನಾವಿಂದು ನಾಲ್ಕು ಚಕ್ರಗಳನ್ನು ಹೊಂದಿರುವ ವಿಲಕ್ಷಣ ಮೋಟಾರ್ ಸೈಕಲ್‌ವೊಂದನ್ನು ಪರಿಚಯಿಸಲಿದ್ದೇವೆ. ಅಷ್ಟೇ ಯಾಕೆ ಇದು ಫೆರಾರಿ ಎಂಜಿನ್ ಕೂಡಾ ಪಡೆದಿರುವುದು ಇನ್ನೂ ವಿಶೇಷತೆಯಾಗಿದೆ.

ಹೌದು ನಾವು ಮಾತನಾಡುತ್ತಿರುವುದು ಲಝರೆತ್ ವಝುಮಾ ವಿ8ಎಫ್ ಕ್ವಾಡ್ ಬಗ್ಗೆ (Lazareth Wazuma V8F quad). ವಾಹನ ಜಗತ್ತಿನಲ್ಲಿ ವಿರಳಗಳಲ್ಲಿ ಅತಿ ವಿರಳ ಎಂದೇ ವಿಶ್ಲೇಷಿಸಬಹುದಾದ ವಿಶಿಷ್ಟ ವಿನ್ಯಾಸವನ್ನು ಈ ವಾಹನ ಪಡೆದುಕೊಂಡಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಲಜರೆತ್ ವಝುಮಾ ವಿ8ಎಫ್ ಕ್ವಾಡ್ ಗಾಡಿ ಈಗಾಗಲೇ ಉತ್ಪಾದನಾ ವರ್ಷನ್ ಪಡೆದುಕೊಳ್ಳುತ್ತಿದೆ. ಅಂದರೆ ಗ್ರಾಹಕರ ಬೇಡಿಕೆಯಸರವಾಗಿ ಸಿದ್ಧಗೊಳ್ಳಲಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಫ್ರಾನ್ಸ್‌ನ ಹೆಸರಾಂತ ಕಸ್ಟಮೈಸ್ಡ್ ಕಾರು ಹಾಗೂ ಮೋಟಾರ್ ಸೈಕಲ್ ತಯಾರಕರಾದ ಲಾಜರೆತ್ ಎಂಬ ಸಂಸ್ಥೆಯು ಈ ಅದ್ಭುತ ವಝಮಾ ವಿ8ಎಫ್ ವಾಹನವನ್ನು ತಯಾರಿಸಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಏಕಮಾತ್ರ ಪ್ರಯಾಣಿಕರಿಗೆ ಪಯಣಸಬಹುದಾದ ಈ ವಾಹನದಲ್ಲಿ ಫೆರಾರಿಯ ಶಕ್ತಿಶಾಲಿ ವಿ8 ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ನಾಲ್ಕು ಚಕ್ರಗಳ ಜತೆ ಅಗತ್ಯ ಬಿಡಿಭಾಗಳನ್ನು ಹೊಂದಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಮೊದಲ ಮಾದರಿಯಲ್ಲಿ 1970ರ ದಶಕದ ಫೆರಾರಿ 308ನಲ್ಲಿದ್ದ 3.0 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದೆ. ಇದು 250 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಬಿಎಂಡಬ್ಲ್ಯು ಎಂ3ಯ ಆರು ಸ್ಪೀಡ್ ಟ್ರಾನ್ಸ್‌ಮಿಷನ್ ಹೊಂದಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಫೆರಾರಿ 458 ಇಟಲಿಯ ಸೂಪರ್ ಕಾರಿನ ಜತೆ ಹೋಲಿಸಬಹುದಾದ ವಝುಮಾ ವಿ8ಎಫ್ 650 ಕೆ.ಜಿ. ಭಾರ ಹೊಂದಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಹಾಗೆಯೇ ಗಂಟೆಗೆ 322 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಇನ್ನು ಪವರ್ ಸ್ಟೀರಿಂಗ್‌ಗಳಂತಹ ಆಧುನಿಕ ಫೀಚರ್ಸ್‌ಗಳನ್ನು ಪಡೆದಿದೆ.

ಫೆರಾರಿ ಎಂಜಿನ್ ಪಡೆದ ಲಝರೆತ್ ಮೋಟಾರ್ ಸೈಕಲ್

ಅಷ್ಟಕ್ಕೂ ಜನ ಸಾಮಾನ್ಯರಿಗಂತೂ ಇದನ್ನು ಖರೀದಿಸುವುದು ಅಸಾಧ್ಯದ ಮಾತು. ಯಾಕೆಂದರೆ ಇದು 2 ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

English summary
What you are seeing is the Wazuma V8F Matt Edition and it has now entered production. Not in the general sense of the word, but at least more will be built if people order.
Story first published: Tuesday, November 5, 2013, 12:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark