30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಲಾಕ್‌ಡೌನ್ ಅವಧಿಯಲ್ಲಿ ದೇಶದಲ್ಲಿ ಕಾರು ಕಳ್ಳತನ ಸಂಖ್ಯೆಯು ಹೆಚ್ಚಾಗಿದೆ. ಪೊಲೀಸರು ಕಳೆದ ಎರಡು ದಿನಗಳಲ್ಲಿ 80 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ 50ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿವೆ. ಕಾರುಗಳ್ಳರನ್ನು ಜೈಲಿಗಟ್ಟಲಾಗಿದೆ.

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಕಾರುಗಳ್ಳರ ಬಂಧನದಿಂದ ದೇಶಾದ್ಯಂತ ಹರಡಿರುವ ಕಾರುಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲ ಖಾಸಗಿ ವಿಮಾ ಕಂಪನಿಗಳ ಏಜೆಂಟರು ಈ ಗ್ಯಾಂಗ್‌ಗೆ ನೆರವಾಗಿರುವುದು ಬಹಿರಂಗಗೊಂಡಿದೆ. ವಶಪಡಿಸಿಕೊಂಡ ಕಾರುಗಳ ಒಟ್ಟು ಮೌಲ್ಯ ಸುಮಾರು ರೂ.30 ಕೋಟಿಗಳಾಗುತ್ತದೆ.

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಮಾಧ್ಯಮ ಮೂಲಗಳ ಪ್ರಕಾರ,ಬಂಧನಕ್ಕೊಳಗಾಗಿರುವವರಲ್ಲಿ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಮೊಹಮ್ಮದ್ ರಿಜ್ವಾನ್ ಸಹ ಸೇರಿದ್ದಾನೆ ಎಂದು ಲಕ್ನೋ ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಬ್ಯಾಂಕಾಕ್‌ನಲ್ಲಿ ಹೊಟೇಲ್ ಉದ್ಯಮಿಯಾಗಿದ್ದಾನೆ. ಭೋಜ್‌ಪುರಿ ಚಿತ್ರ ನಟ ನಾಸಿರ್ ಖಾನ್ ಕೂಡ ಈ ಗ್ಯಾಂಗ್‌ನ ಭಾಗವಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಒಟ್ಟು 5 ಜನರಿದ್ದಾರೆ ಎಂದು ತಿಳಿದು ಬಂದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

3 ಬಿಎಂಡಬ್ಲ್ಯು, 4 ಟೊಯೋಟಾ ಫಾರ್ಚೂನರ್, ಹೋಂಡಾ ಸಿಟಿ, ಹ್ಯುಂಡೈ ಕ್ರೆಟಾ ಸೇರಿದಂತೆ 50 ವಿವಿಧ ದುಬಾರಿ ಕಾರುಗಳನ್ನು ಲಕ್ನೋ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ. ಮೊರಾದಾಬಾದ್, ಮೀರತ್, ಸೀತಾಪುರ, ಕಾನ್ಪುರ ನಗರಗಳಿಂದ ಈ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ವಿಚಾರಣೆ ವೇಳೆ ಕೆಲವು ಖಾಸಗಿ ವಿಮಾ ಕಂಪನಿ ಏಜೆಂಟರುಗಳ ಹೆಸರುಗಳು ಹೊರಬಂದಿದ್ದು, ಅವರಿಂದ ಅಪಘಾತಕ್ಕೀಡಾದ ಕಾರು ಹಾಗೂ ಎಸ್‌ಯುವಿಗಳನ್ನು ಖರೀದಿಸಲಾಗಿದೆ. ಈ ಏಜೆಂಟರು ದೇಶಾದ್ಯಂತವಿರುವ ಸೆಕೆಂಡ್ ಹ್ಯಾಂಡ್ ಕಾರು ಡೀಲರ್‌ಗಳ ಬಳಿ ವ್ಯವಹಾರ ಕುದುರಿಸುತ್ತಿದ್ದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಗ್ಯಾಂಗ್‌ನ ಮಾಸ್ಟರ್ ಮೈಂಡ್ ರಿಜ್ವಾನ್ ಇದುವರೆಗೆ 11 ಜನರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಲಕ್ನೋ ಪೊಲೀಸರು ವಿವಿಧ ರಾಜ್ಯಗಳಿಗೆ ಹೋಗಿ ಅಲ್ಲಿನ ಪೊಲೀಸರ ನೆರವಿನಿಂದ ಇತರ ವಾಹನಗಳನ್ನು ವಶಪಡಿಸಿಕೊಳ್ಳಲು ಹಾಗೂ ಉಳಿದವರನ್ನು ಬಂಧಿಸಲು ಮುಂದಾಗಿದ್ದಾರೆ. ರಿಜ್ವಾನ್‌ನ ಗ್ಯಾಂಗ್ ಸದಸ್ಯರು ದೇಶಾದ್ಯಂತ ಹರಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಹಾನಿಗೊಳಗಾದ ಹಾಗೂ ಅಪಘಾತಕ್ಕೀಡಾದ ಕಾರುಗಳನ್ನು ಖರೀದಿಸುತ್ತಿದ್ದ ಖದೀಮರು ನಂತರ ಅವುಗಳ ಚಾಸಿಸ್ ನಂಬರ್‌ಗಳನ್ನು ಕದ್ದ ಕಾರಿನಲ್ಲಿರಿಸುತ್ತಿದ್ದರು. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದ ಖದೀಮರು ನಂತರ ಕದ್ದ ಕಾರುಗಳನ್ನು ಮತ್ತೊಂದು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

30ಕ್ಕೂ ಹೆಚ್ಕು ಐಷಾರಾಮಿ ಕಾರು ಕದ್ದು ಜೈಲು ಸೇರಿದ ನಟ

ಕದ್ದ ಕಾರುಗಳ ಮಾರಾಟ ಜಾಲವು ಅಸ್ಸಾಂನಿಂದ ರಾಜಸ್ಥಾನದವರೆಗೆ ಹಾಗೂ ಹಿಮಾಚಲ ಪ್ರದೇಶದಿಂದ ತೆಲಂಗಾಣದವರೆಗೆ ಹರಡಿಕೊಂಡಿದೆ. ಖದೀಮರ ಈ ಘನ ಕಾರ್ಯಕ್ಕೆ ವಿಮಾ ಕಂಪನಿಗಳ ಏಜೆಂಟರು ನೆರವಾದ ಕಾರಣಕ್ಕೆ ಸುಲಭವಾಗಿ ಕಾರುಗಳನ್ನು ಕದಿಯುತ್ತಿದ್ದರು.

Most Read Articles

Kannada
English summary
Lucknow Police arrests Bhojpuri film actor for stealing 30 luxury cars. Read in Kannada.
Story first published: Wednesday, June 24, 2020, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X