ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

By Nagaraja

ಇಡೀ ವಾಹನ ಜಗತ್ತೇ ಪರಿಸರ ಸ್ನೇಹಿ ವಾಹಕಗಳ ಅಧ್ಯಯನ ಹಾಗೂ ಅಭಿವೃದ್ಧಿಯಲ್ಲಿ ತೊಡಗಿರುವಂತೆಯೇ ಭಾರತೀಯನೊಬ್ಬ ದುಬಾರಿ ಪೆಟ್ರೋಲ್ ಬದಲಿ ಇಂಧನವನ್ನು ಕಂಡು ಹುಡುಕಿದ್ದಾರೆ. ಅದುವೇ,

acetylene (ಅಸಿಟಿಲೀನ್ ಅನಿಲ)

ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ನಡುವಿನ ರಾಸಾಯನಿಕ ಮಿಶ್ರಣದ ಪ್ರತಿಕ್ರಿಯೆ ಭಾಗವಾಗಿ ಅಸಿಟಿಲೀನ್ ಅನಿಲ ರೂಪುಗೊಳ್ಳುತ್ತದೆ. ಅಷ್ಟಕ್ಕೂ ಈ ನೂತನ ತಂತ್ರಜ್ಞಾನ ವಾಹನ ಜಗತ್ತಿನಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನುಂಟು ಮಾಡಲಿದೆಯೇ? ಇದರ ಹಿಂದಿರುವ ವ್ಯಕ್ತಿ ಯಾರು ? ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಮಧ್ಯಪ್ರದೇಶ ನಿವಾಸಿ ಮೆಕ್ಯಾನಿಕ್ 44ರ ಹರೆಯದ ರಯೀಸ್ ಮಾರ್ಕನಿ (Raees Markani) ಈ ವಿನೂತನ ಇಂಧನ ತಂತ್ರಜ್ಞಾನದ ಸಂಶೋಧನೆ ಮಾಡಿದ್ದಾರೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಇಂಧನಗಳ ಬೆಲೆ ದಿನನಿತ್ಯ ದುಬಾರಿಯಾಗುತ್ತಿರುವುದು ಹಾಗೂ ವಾಹನಗಳ ಅಧ್ಯಯನವನ್ನು ಅತಿ ಹೆಚ್ಚು ಆಸಕ್ತಿ ಹೊಂದಿರುವುದೇ ರಯೀಸ್ ಅವರಿಗೆ ಈ ನೂತನ ತಂತ್ರಜ್ಞಾನ ಕಂಡುಹಿಡಿಯಲು ಸ್ಪೂರ್ತಿದಾಯಕವಾಗಿದೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಕಳೆದ ಆರು ತಿಂಗಳಿಂದ ನಿರಂತರ ಸಂಶೋಧೆಯಲ್ಲಿ ತೊಡಗಿರುವ ರಯೀಸ್ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶ ಕಂಡಿದ್ದು, ಪ್ರಾಯೋಗಿಕ ಸಂಚಾರವನ್ನು ನಡೆಸಿದ್ದಾರೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಪ್ರಸ್ತುತ ಇಂಧನವು ಪ್ರತಿ ಲೀಟರ್ 10 ರಿಂದ 20 ರು.ಗಳಷ್ಟು ಮಾತ್ರ ದುಬಾರಿಯೆನಿಸಲಿದೆ ಎಂದು ರಯೀಸ್ ಅಭಿಪ್ರಾಯಪಡುತ್ತಾರೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಅಸಿಟಿಲೀನ್ ಅನಿಲವನ್ನು ವೆಲ್ಡಿಂಗ್, ಪೋರ್ಟಬಲ್ ಲೈಟಿಂಗ್ ಸೇರಿದಂತೆ ಹಲವಾರು ಕೈಗಾರಿಕಾ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತದೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಈ ನೂತನ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹಕ್ಕು ಪತ್ರಕ್ಕಾಗಿ ರಯೀಸ್ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಈ ನಡುವೆ ರಯೀಸ್ ಅವರ ಈ ನೂತನ ಸಂಶೋಧನೆಯನ್ನು ಅರಿತುಕೊಂಡ ಚೀನಾ ಮೂಲದ ಸಂಸ್ಥೆಯೊಂದು ಈ ನಾವೀನ್ಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉತ್ಸುಕತೆ ವ್ಯಕ್ತಪಡಿಸಿತ್ತು.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಆದರೆ ಚೀನಾ ಸಂಸ್ಥೆಯ ಬೇಡಿಕೆಯನ್ನು ನಿರಾಕರಿಸಿದ್ದ ರಯೀಸ್, ತವರೂರಿನಲ್ಲೇ ತಯಾರಿಕಾ ಘಟಕವನ್ನು ನಿರ್ಮಿಸುವಂತೆ ಕೋರಿದ್ದರು.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಆಟೋಮೊಬೈಲ್ ಕ್ಷೇತ್ರವು ಪರಿಸರ ಸ್ನೇಹಿ ವಾಹಕಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿರುವ ಇದೇ ಸಂದರ್ಭದಲ್ಲಿ ರಯೀಸ್ ಅವರ ಈ ನೂತನ ಇಂಧನ ತಂತ್ರಜ್ಞಾನವು ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಂಡಿದೆ.

ಪೆಟ್ರೋಲ್ ಬದಲಿ ಇಂಧನ ಕಂಡುಹಿಡಿದ ಭಾರತೀಯ

ಒಟ್ಟಿನಲ್ಲಿ ರಯೀಸ್ ನೂತನ ತಂತ್ರಜ್ಞಾನಕ್ಕೆ ಭಾರತೀಯರಾದ ನಾವೆಲ್ಲರೂ ಹೆಮ್ಮೆಪಡಬಹುದಾಗಿದ್ದು, ಅತಿ ಬೇಗನೇ ಮನ್ನಣೆ ದೊರಕಲಿ ಎಂದು ಹಾರೈಸೋಣವೇ!


Most Read Articles

Kannada
English summary
Mechanic in Madhya Pradesh has invented Cheap Fuel
Story first published: Friday, October 16, 2015, 9:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X