ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಸುಮ್ಮನೆ ಒಂದು ಮುಖ್ಯ ರಸ್ತೆಯಲ್ಲಿ ರೌಂಡ್ ಹೋಗಿ ಬನ್ನಿ. ನಿಮಗೆ 10 ನಿಮಿಷದಲ್ಲಿ ಕಡಿಮೆ ಅಂದ್ರು 15ರಿಂದ 20 ವಾಹನಗಳು ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನಗಳು ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಇನ್ಮುಂದೆ ಹೀಗೆ ಬೇಕಾಬಿಟ್ಟಿಯಾಗಿ ಸ್ಟಿಕ್ಕರ್ ಹಾಕಿ ಓಡಾಡುವ ವಾಹನ ಮಾಲೀಕರು ಸೀಜ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಹೌದು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ನಂತರ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುತ್ತಿದ್ದ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನ ಮಾಲೀಕರಿಗೆ ಬಾಂಬೆ ಹೈಕೋರ್ಟ್ ಶಾಕಿಂಗ್ ಸುದ್ದಿ ನೀಡಿದ್ದು, ನಿಯಮಬಾಹಿರವಾಗಿ ಸ್ಟಿಕ್ಕರ್‌ಗಳನ್ನು ಬಳಸುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುವಂತೆ ಪೊಲೀಸ್ ಇಲಾಖೆಗೆ ಖಡಕ್ ಆದೇಶ ನೀಡಿದೆ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಮಾಹಾರಾಷ್ಟ್ರದಲ್ಲಿ ಈಗಾಗಲೇ ಖಾಸಗಿ ವಾಹನ ಮೇಲೆ ಸ್ಟಿಕ್ಕರ್ ಅಂಟಿಸುವುದು ನಿಯಮಬಾಹಿರವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾರಿಗೆ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪ್ರೆಸ್, ಪೊಲೀಸ್ ಮತ್ತು ಲಾಯರ್ ವಾಹನಗಳೇ ಹೆಚ್ಚು ಭಾಗಿಯಾಗಿರುವುದು ಕಂಡುಬಂದಿದೆ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಹೀಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲನೆ ಮಾಡಿದ ಬಾಂಬೆ ಹೈಕೋರ್ಟ್ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ದ ಕೂಡಲೇ ಕ್ರಮ ಜರುಗಿಸುವಂತೆ ಆದೇಶಿಸಿದ್ದು, ಕೋರ್ಟ್ ಆದೇಶ ಮೇರೆಗೆ ಮಾಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಸ್ಟಿಕ್ಕರ್ ಹೊಂದಿರುವ ವಾಹನಗಳ ವಿರುದ್ಧ ವಿಶೇಷ ಕಾರ್ಯಚರಣೆ ನಡೆಯುತ್ತಿದ್ದಾರೆ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಮುಂಬೈ ಮತ್ತು ಪುಣೆಯಲ್ಲಿ ಈಗಾಗಲೇ ಸಾವಿರಾರು ಸ್ಟಿಕ್ಕರ್ಸ್ ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆದು ದಂಡವಿಧಿಸುತ್ತಿರುವ ಪೊಲೀಸರು, ನಿಯಮಬಾಹಿರವಾಗಿ ಪ್ರೆಸ್, ಪೊಲೀಸ್, ಲಾಯರ್ ಮತ್ತು ಆರ್ಮಿ ಸ್ಟಿಕ್ಕರ್ ಹೊಂದಿರುವ ವಾಹನ ಮಾಲೀಕರಿಗೆ ರೂ. 200 ದಂಡ ವಿಧಿಸಿದ್ದಾರೆ. ಜೊತೆಗೆ ಸ್ಟಿಕ್ಕರ್ ಅಂಟಿಸುವ ಶಾಪ್ ಮಾಲೀಕರಿಗೂ ಎಚ್ಚರಿಕೆ ನೀಡಲಾಗುತ್ತಿದ್ದು, ನಿಯಮಬಾಹಿರ ಸ್ಟಿಕ್ಕರ್ಸ್ ಅಂಟಿಸಿದ್ದಲ್ಲಿ ಶಾಪ್ ಮಾಲೀಕರ ವಿರುದ್ಧವೂ ಕ್ರಮ ಜರಗಿಸಲು ಮುಂದಾಗಿದ್ದಾರೆ.

ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಂಚಾರಿ ನಿಯಮಗಳ ಉಲ್ಲಂಘಟನೆ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಈಗಾಗಲೇ ಸಂಸತ್‌ನಲ್ಲಿ ಅನುಮೋದನೆ ಕೂಡಾ ದೊರೆತಿದೆ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಇದರಿಂದ ಪ್ರಸ್ತುತ ಚಾಲ್ತಿಯಲ್ಲಿ ದಂಡದ ಮೊತ್ತಗಳು ದುಪ್ಪಟ್ಟಾಗಿದ್ದು, ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಗರಿಷ್ಠ ಮಟ್ಟದ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿದರೂ ಕಡಿಮೆ ದಂಡದೊಂದಿಗೆ ಬಚಾವ್ ಆಗಬಹುದಾದ ಸನ್ನಿವೇಶ ಇನ್ಮುಂದೆ ಇರುವುದಿಲ್ಲ.

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಲೈಸೆನ್ಸ್ ಇಲ್ಲದೇ ವಾಹನ ಸವಾರಿ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು ಮತ್ತು ಅಪಾಯಕಾರಿ ವಾಹನ ಚಾಲಾಯಿಸುವುದರ ವಿರುದ್ಧ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡಲಾಗುತ್ತಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಪ್ರೆಸ್, ಪೊಲೀಸ್, ಲಾಯರ್ ಸ್ಟಿಕ್ಕರ್ಸ್ ಹಾಕಿದ್ರೆ ವಾಹನ ಸೀಜ್ ಆಗುವುದು ಗ್ಯಾರಂಟಿ..!

ಈ ಹಿಂದೆ ಇದ್ದ ಬಹುತೇಕ ಸಂಚಾರಿ ನಿಯಮಗಳ ದಂಡಗಳ ಮೊತ್ತವು ಕನಿಷ್ಠ ರೂ. 500ಕ್ಕೆ ಏರಿಕೆಯಾಗಿದ್ದಲ್ಲಿ ಆಂಬ್ಯುಲೆನ್ಸ್ ಮತ್ತು ಯೋಗ್ಯತಾ ಪ್ರಮಾಣ ಪತ್ರವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದಕ್ಕೆ ರೂ. 3 ಸಾವಿರದಿಂದ ರೂ. 10 ಸಾವಿರ ತನಕ ದಂಡ ವಿಧಿಸಲು ಅನುಮತಿಸಲಾಗಿದೆ.

Most Read Articles

Kannada
English summary
Maharashtra Cops Taking Action Against Private Vehicles With ‘Police’, ‘Press’, Stickers. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X