Just In
- 3 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 1 hr ago
6 ಏರ್‌ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- News
ಬೆಂಗಳೂರು ಟ್ರಾಫಿಕ್ನಿಂದಾಗಿ ಆಂಬುಲೆನ್ಸ್ನಲ್ಲಿ ಹಸುಗೂಸು ಸಾವು!
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹೀಂದ್ರಾ ಥಾರ್ ಆಫ್-ರೋಡ್ ಎಸ್‍ಯುವಿ ಖರೀದಿಸಿದ ಜನಪ್ರಿಯ ನಟ
ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಪ್ರಸ್ತುತ ತಲೆಮಾರಿನ ಥಾರ್ ಎಸ್‍ಯುವಿಯನ್ನು 2020ರಲ್ಲಿ ಬಿಡುಗಡೆಗೊಳಿಸಿತ್ತು. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.
Recommended Video
ಈ ಜನಪ್ರಿಯ ಥಾರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಸೆಲಬ್ರಿಟಿಗಳು ಕೂಡ ಈ ಜನಪ್ರಿಯ ಆಫ್-ರೋಡ್ ಎಸ್‍ಯುವಿಯನ್ನು ಖರೀದಿಸುತ್ತಿದ್ದಾರೆ.

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಜಯಸೂರ್ಯ ಅವರು ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ನಟ ತನ್ನ ಕುಟುಂಬದೊಂದಿಗೆ ತನ್ನ ಥಾರ್ ಅನ್ನು ವಿತರಣೆ ಪಡೆಯುವ ವಿಡಿಯೋ ಈಗಾಗಲೇ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಿಡಿಯೋವನ್ನು lifein4×4 ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿಡಿಯೋದಲ್ಲಿ ನಟ ತನ್ನ ಪತ್ನಿ, ಮಗ ಮತ್ತು ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರನ್ನು ಅನಾವರಣಗೊಳಿಸಿದ ನಂತರ, ನಟನು ಮಹೀಂದ್ರಾ ಡೀಲರ್‌ಶಿಪ್‌ನಿಂದ ಎಸ್‍ಯುವಿಯನ್ನು ಓಡಿಸುತ್ತಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 4×4 ಎಸ್‍ಯುವಿಗಳಲ್ಲಿ ಒಂದಾಗಿದೆ. ಇದು ಹೊಸ ಸ್ಕಾರ್ಪಿಯೋ ಎನ್ ನಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹಳೆಯ ಮಹೀಂದ್ರ ಥಾರ್‌ಗೆ ಹೋಲಿಸಿದರೆ, ಕಾರು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಎಸ್‍ಯುವಿಯು ಬಿಡುಗಡೆಗಡೆಯಾದ ದಿನದಿಂದ ಅದೇ ರೀತಿಯ ಪ್ರಬಲ ಬೇಡಿಕೆಯನ್ನು ಹೊಂದಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.

ಈ ಮಹೀಂದ್ರಾ ಥಾರ್ ಆಪ್-ರೋಡ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ.

ಇನ್ನು ಈ ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ,ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಹೊಂದಿದೆ. ಈ ಥಾರ್ ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಉತ್ಪನ್ನಗಳನ್ನು ವಿಶ್ವದರ್ಜೆ ಗುಣಮಟ್ಟ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡುತ್ತಿರುವ ಮಹೀಂದ್ರಾ ಕಂಪನಿಯು ಕಳೆದ ಒಂದು ವರ್ಷದಿಂದ ಭಾರೀ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದ್ದು, ಶೀಘ್ರದಲ್ಲಿಯೇ ಕಂಪನಿಯು ನ್ಯೂ ಜನರೇಷನ್ ಥಾರ್ ಮಾದರಿಯಲ್ಲಿ 5 ಡೋರ್ ವರ್ಷನ್ ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯು ಥಾರ್ ಹೊಸ ಕಾರು ಮಾದರಿಯಲ್ಲಿ 3 ಡೋರ್ ವರ್ಷನ್ ಮಾತ್ರ ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಮಾದರಿಯಲ್ಲಿ 5 ಡೋರ್ ವರ್ಷನ್ ಸಹ ಅಭಿವೃದ್ದಿಪಡಿಸುತ್ತಿದೆ.

ಹೊಸ 5 ಡೋರ್ ವರ್ಷನ್ ಕಾರ್ಯಕ್ಷಮತೆ ಕುರಿತಾಗಿ ಈಗಾಗಲೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದ್ದು, ಕಂಪನಿಯು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಪರಿಚಯಿಸಲಿದೆ. ಆಫ್-ರೋಡ್ ಪ್ರಿಯರಿಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ನೊಂದಿಗೆ 60 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ. ಇನ್ನು ಸುಮಾರು 40 ಸಾವಿರಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಮಾದರಿಗಾಗಿ ಕಾಯುತ್ತಿದ್ದು, ಹೊಸ ಕಾರು ಆಫ್-ರೋಡ್‌ಗಿಂತಲೂ ಲೈಫ್‌ಸ್ಟೈಲ್ ಮಾದರಿಗಾಗಿ ಬದಲಾಗುತ್ತಿದೆ.

ಒಟ್ಟಾರೆಯಾಗಿ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಭಾರತದಲ್ಲಿ ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಮಾದರಿಯಾಗಿದೆ.