ಈ ಅಂಗಡಿಯ ಮಾಲೀಕನ ತಾಳ್ಮೆಗೆ ನಮ್ಮದೊಂದು ಸಲಾಂ

Written By:

ಚೀನಾದಲ್ಲಿ ಒಬ್ಬ ವ್ಯಕ್ತಿ ತನ್ನ ಕಾರು ನಿಲ್ಲಿಸಲು ಸಮಯ ವ್ಯರ್ಥ ಮಾಡುವುದು ಬೇಡ ಎಂಬ ಕಾರಣಕ್ಕೆ ಕಾರನ್ನೇ ಡಿಪಾರ್ಟ್‌ಮೆಂಟಲ್ ಸ್ಟೋರ್ ಒಳಗೆ ನಿಗ್ಗಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ವಿಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ.

ಸಿ.ಸಿ.ಟಿ.ವಿ ಕ್ಯಾಮರಾದ ವಿಡಿಯೋ ತುಣುಕನ್ನು ನೀವು ಗಮನಿಸಿದರೆ ಅಂಗಡಿಯ ಮಾಲೀಕನ ಬಗ್ಗೆ ಖಂಡಿತ ವ್ಯಕ್ತಪಡಿಸುತ್ತೀರಿ. ಯಾವುದೇ ಅಂಗಡಿಯ ಮಾಲೀಕನಾದರೂ ಸಹ, ಈ ರೀತಿಯ ಕಾರು ತನ್ನ ಅಂಗಡಿಯೊಳಗೆ ನುಸುಳುವುದನ್ನು ಖಂಡಿತ ಮೆಚ್ಚಲಾರ.

ಆದರೆ, ಈ ಅಂಗಡಿಯಾತ ತನ್ನ ಗ್ರಾಹಕನನ್ನು ಸಂತುಷ್ಟಗೊಳಿಸಿ ಕಳುಹಿಸಿದ್ದು, ಎಲ್ಲರಿಗೂ ಮಾದರಿಯಾಗಿದ್ದಾನೆ. ಹೌದು, ಕಾರಿನ ಸಮೇತ ಅಂಗಡಿಯೊಳಗೆ ನುಗ್ಗಿದ ಗ್ರಾಹಕ ತನಗೆ ಬೇಕಾದ ಪದಾರ್ಥ ಕೇಳಿದ ತಕ್ಷಣ ಮಾಲೀಕ ವಸ್ತುವನ್ನು ತೆಗೆದುಕೊಟ್ಟು ತನ್ನ ಸಂಯಮ ಪ್ರದರ್ಶನ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ.

ಕೆಳಗಿನ ವೀಡಿಯೊವನ್ನು ನೋಡಿ !

English summary
A man in China drove his car straight into a departmental store so he could save time on parking.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark