ಬೆಂಝ್ ಅಗೋಚರ ಕಾರು; ಇದೇನಾ ಮಾಯೆ?

By Nagaraja

ನಾವಿಂದು ಅತಿ ವಿಶೇಷ ಕಾರೊಂದನ್ನು ಪರಿಚಯಿಸಲಿದ್ದೇವೆ. ಈ ಕಾರನ್ನು ನೋಡಿದ ಮೊದಲ ನೋಟಕ್ಕೆ ಇದೇನಾ ಮಾಯೆ? ಎಂಬ ಭಾವನೆ ನಿಮ್ಮಲ್ಲಿ ಖಂಡಿತ ಮೂಡಲಿದೆ.

ಹೌದು, ಇದು ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್‌ನಿಂದ ನಿರ್ಮಾಣವಾಗಿರುವ ಅಗೋಚರ ಕಾರು ಕಾನ್ಸೆಪ್ಟ್ ಆಗಿದೆ. ಎಫ್ ಸೆಲ್ (F-Cell) ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನ ಮೂಲಕ ಈ ಕಾರನ್ನು ತಯಾರಿಸಲಾಗಿದೆ.

ಅಂದರೆ ಸಾಮಾನ್ಯ ಜನರಿಗೆ ಇಂತಹ ಕಾರುಗಳ ಸೃಷ್ಟಿಯನ್ನು ಊಹಿಸಲು ಸಾಧ್ಯವಿಲ್ಲ. ಇದರ 0.0 emission ಪರಿಸರಕ್ಕೆ ಅದೃಶ್ಯವಾಗಿ ಗೋಚರಿಸಲಿದೆ.

ಲೇಟೆಸ್ಟ್ ಎಲ್‌ಇಡಿ ತಂತ್ರಜ್ಞಾನವನ್ನು ಕಾರಿಗೆ ಆಳವಡಿಸಲಾಗಿದೆ. ಮತ್ತೊಂದು ಬದಿಯಲ್ಲಿರುವ ಎಸ್‌ಎಲ್‌ಆರ್ ಕ್ಯಾಮೆರಾವು ಎಲ್‌ಇಡಿಗೆ ಚಿತ್ರಗಳನ್ನು ಪಸರಿಸಲಿದೆ. ಮತ್ತೊಂದು ಬದಿಯ ಎಲ್ಲ ಚಿತ್ರಣಗಳನ್ನು ಕ್ಯಾಮೆರಾವು ಎಲ್‌ಇಡಿಗೆ ರವಾನಿಸಲಾಗಿದೆ. ಇದರಿಂದ ಕಾರು ಸಂಪೂರ್ಣವಾಗಿ ಅದೃಶ್ಯವಾದಂತೆ ಭಾಸವಾಗಲಿದೆ.

ಹಾಗಿದ್ದರೆ ಫೋಟೊ ಫೀಚರ್ ಮೂಲಕ ಈ ಮ್ಯಾಜಿಕ್ ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸೋಣ. ಅಂತಿಮದಲ್ಲಿ ನೀಡಿರುವ ವೀಡಿಯೊ ಲಿಂಕ್ ಕ್ಲಿಕ್ಕಿಸಲು ಮರೆಯದಿರಿ...

Mercedes-Benz Invisible Car

ಪರಿಸರ ಸ್ನೇಹಿ ಎಫ್-ಸೆಲ್ '0.0' emission ಎಲೆಕ್ಟ್ರಾನಿಕ್ ಕಾರುಗಳ ಪ್ರಚಾರಾರ್ಥವಾಗಿ ಮರ್ಸಿಡಿಸ್ ಬೆಂಝ್ ಇಂತಹದೊಂದು ಯೋಜನೆಯನ್ನು ಹಮ್ಮಿಕೊಂಡಿದೆ.

Mercedes-Benz Invisible Car

ಎಫ್ ಸೆಲ್ ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನದ ಕಾರು ಜನರಲ್ಲಿ ಅತ್ಯಂತ ಹೆಚ್ಚು ಕುತೂಹಲ ಸೃಷ್ಟಿ ಮಾಡಲು ಕಾರಣವಾಗಿದೆ.

Mercedes-Benz Invisible Car

ಬೆಂಝ್ ಅಗೋಚರ ಕಾರು ಎಲ್‌ಇಡಿ ತಂತ್ರಜ್ಞಾನದಿಂದ ಆವರಿಸಲ್ಪಟ್ಟಿದ್ದು, ಇದರ 0.0 emission ಪರಿಸರಕ್ಕೆ ಅದೃಶ್ಯವಾಗಿ ಗೋಚರಿಸಲಿದೆ.

Mercedes-Benz Invisible Car

ಕಾರು ಚಲಿಸುವ ವೇಳೆಗೆ ನಿಮಗೆ ಕಾರಿನ ಟೈರ್ ಮಾತ್ರ ಗೋಚರವಾಗಲಿದ್ದು, ಕಾರಿನ ಮತ್ತೊಂದು ಬದಿಗಿನ ಚಿತ್ರಗಳನ್ನು ವೀಕ್ಷಿಸಬಹುದು.

Mercedes-Benz Invisible Car

ಪತ್ತೇದಾರಿ ಜೇಮ್ಸ್ ಬಾಂಡ್ ಡೈ ಎನದರ್ ಡೇ ಸಿನೆಮಾದಲ್ಲೂ ಇದೇ ರೀತಿ ಅದೃಶ್ಯ ಕಾರುಗಳ ಕಾನ್ಸೆಪ್ಟ್ ಕಂಡುಬಂದಿರುವುದನ್ನು ನೀವು ನೆನಪಿಸಿಕೊಳ್ಳಬಹುದು.

Mercedes-Benz Invisible Car

ಒಂದು ವೇಳೆ ಮರ್ಸಿಡಿಸ್ ಬೆಂಝ್ ಅಗೋಚರ ಕಾರು ಮಾರುಕಟ್ಟೆಗೆ ಆಗಮನಿಸಿದ್ದರೆ ಭಾರಿ ಬೇಡಿಕೆ ಕಂಡುಬರಲಿದೆ. ಆದರೆ ಇದು ಸುಗಮ ಸಂಚಾರಕ್ಕೆ ವ್ಯತಿರಿಕ್ತವಾಗಿ ಬಾಧಿಸಲಿದೆಯೇ ಎಂಬುದು ಪ್ರಶ್ನೆಯ ವಿಷಯವಾಗಿದೆ.

ಮರ್ಸಿಡಿಸ್ ಬೆಂಝ್ ಅಗೋಚರ ಕಾರು- ವೀಡಿಯೋ

Most Read Articles

Kannada
English summary
Mercedes-Benz has done the unthinkable. It has made an invisible car, although only from one side. The German premium carmaker has promoted its zero emission F-Cell car in a unique way. It has made the F-Cell invisible using latest LED technology.
Story first published: Saturday, February 23, 2013, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X