ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

Written By:

ಬಿಳಿ ಬಣ್ಣದ ಮರ್ಸಿಡಿಸ್ ಎಂಎಲ್ ಎಸ್‌ಯುವಿ ಕಾರಿನಲ್ಲಿ ಆಗಮಿಸಿದ ಕಿಡಿಗೇಡಿಗಳು, ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಮೇಲೆ ಇಂಧನ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಮುಂಬೈನಲ್ಲಿ ನೆಡೆದಿದೆ.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಈ ಘಟನೆಯಲ್ಲಿ ಕಾರಿನ ಮುಂಭಾಗದ ಎಂಜಿನ್ ಭಾಗ ಸಂಪೂರ್ಣವಾಗಿ ಸುಟ್ಟು ಕಾರಕಲಾಗಿದ್ದು, ರಿಪೈರಿ ಮಾಡಲೂ ಆಗದ ಸ್ಥಿತಿಗೆ ಬಂದು ತಲುಪಿದೆ ಎನ್ನಬಹುದು. ಹೌದು, ಈ ಘಟನೆ ಅಪಾರ್ಟ್‌ಮೆಂಟ್ ಜನಕ್ಕೆ ನಿದ್ದೆಗೆಡಿಸಿದ್ದು, ಘಟನೆಯ ಸಂಪೂರ್ಣ ವಿಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಘಟನೆ ವಿವರ :

14 ರಂದು, ಮುಂಬೈ ಉಪನಗರವಾದ ಪಾಲವ ದೊಂಬಿವಲಿ ಎಂಬ ಸ್ಥಳದಲ್ಲಿ ಇರುವಂತಹ 'ಚಂಡಿವಲಿಯ ಶಿವ ಓಂ' ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ತಮ್ಮ ಸ್ನೇಹಿತನನ್ನು ಭೇಟಿಯಾಗಲು ಕಾರಿನ ಮಾಲೀಕ ರೋಹಿತ್ ಮೆಹ್ರಾ ಮತ್ತು ಅವರ ಪತ್ನಿ ರಾತ್ರಿ ವೇಳೆ ತೆರಳಿದ್ದರು.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಊಟ ಮುಗಿಸಿದ ದಂಪತಿ, ರಾತ್ರಿ ಅಪಾರ್ಟ್‌ಮೆಂಟ್‌ನಲ್ಲೇ ತಂಗಲು ನಿರ್ಧರಿಸಿದ್ದರು. ಆದರೆ, ಈ ದಂಪತಿಗಳ ಗ್ರಹಚಾರವೇ ಸರಿ ಇಲ್ಲ ಎಂದು ಕಾಣುತ್ತದೆ, ಮದ್ಯರಾತ್ರಿ ಬಂದ ಪುಂಡರ ಗುಂಪೊಂದು, ಎಂದು ಮರೆಯಲಾಗದ ಶಾಕ್ ನೀಡಿ ಕಾಲ್ಕಿತ್ತಿದೆ.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಹೌದು, ಮದ್ಯರಾತ್ರಿ 3.37ರ ಸುಮಾರಿಗೆ ಮರ್ಸಿಡಿಸ್ ಎಸ್‌ಯುವಿ ಕಾರಿನಲ್ಲಿ ಬಂದ ಗುಂಪು, ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಮೇಲೆ ಇಂಧನ ಸುರಿದು ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದೆ.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಘಟನೆ ನೆಡೆದ ಸ್ಥಳದಲ್ಲಿ ಯಾರೂ ಇಲ್ಲದೆ ಇರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದ್ದು, ಸ್ವಲ್ಪ ಸಮಯದ ನಂತರ ಆಗಮಿಸಿದ ಭದ್ರತಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.

ಮರ್ಸಿಡಿಸ್ ಕಾರಿನಲ್ಲಿ ಬಂದ ಗುಂಪೊಂದು, ಒಂದೇ ನಿಮಿಷದಲ್ಲಿ 12 ಲಕ್ಷದ ಕಾರನ್ನು ಸುಟ್ಟಿತು !!

ಇನ್ನು, ಬೆಳಗಿನ ಜಾವ 4.00 ಗಂಟೆಗೆ ರೋಹಿತ್ ಮೆಹ್ರಾ ಮತ್ತು ಅವರ ಪತ್ನಿಗೆ ಈ ಬೆಚ್ಚಿ ಬೀಳಿಸುವ ವಿಚಾರ ಗೊತ್ತಾಗಿದೆ. ನಿದ್ದೆಯ ಮಂಪರಿನಲ್ಲಿದ್ದ ಜೋಡಿಗೆ, ಈ ಘಟನೆ ಹೆಚ್ಚು ಘಾಸಿಗೊಳಿಸಿರುವುದಂತೂ ಗ್ಯಾರಂಟಿ.

ಸಕಿ ನಕಾ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ತನಿಖಾ ವರದಿಗಳು ಬಂದ ನಂತರ ಪೊಲೀಸರು ತಮ್ಮ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಸಿಸಿ ಟಿ.ವಿ ತುಣುಕಿನಲ್ಲಿ ದುಷ್ಕರ್ಮಿಗಳ ಬಿಳಿಯ ಮರ್ಸಿಡಿಸ್ ಎಂಎಲ್ ಎಸ್‌ಯುವಿ ಕಾರಿನ ನಂಬರ್ ಪ್ಲೇಟ್ ಸರಿಯಾಗಿ ಕಾಣಿಸದೆ ಇರುವುದು ತನಿಖೆಗೆ ಕೊಂಚ ಮಟ್ಟಿನ ಹಿನ್ನಡೆಗೆ ಕಾರಣವಾಗಿದೆ.

English summary
Miscreants in Mercedes SUV set a VW Vento on fire which is parked inside a Mumbai society.
Story first published: Thursday, November 30, 2017, 19:34 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark