ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

Written By:

ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿರುವ ಕಾರುಗಳು ಸದಾ ವಾಹನ ಪ್ರಿಯರ ಗಮನ ಸೆಳೆಯಲು ನೆರವಾಗುತ್ತದೆ. ಈ ಪಟ್ಟಿಗೆ ಸೇರಿದ ವಿನೂತನ ಕಾರೊಂದು ರಷ್ಯಾ ದೇಶದಲ್ಲಿ ಕಂಡುಬಂದಿದೆ.

ಸಂಪೂರ್ಣವಾಗಿ ಲೆಥರ್‌ನಿಂದ (ಚರ್ಮ) ತಯಾರಿಸಲಾದ ಕಾರನ್ನು ಇಲ್ಲಿ ಪರಿಚಯಸಲಾಗುತ್ತಿದೆ. ಕಾರು ತಯಾರಕರು ಇದಕ್ಕೆ ಮಿಲಿಯನ್ ಡಾಲರ್ ಬೇಡಿಕೆಯಿರಿಸಿದ್ದಾರೆ. ಅಂದರೆ ಕೋಟಿಗಳಷ್ಟು ದುಬಾರಿಯೆನಿಸಿದೆ.

ಕಾರಿನ ಪ್ರತಿಯೊಂದು ಭಾಗಗಳಿಗೆ ಚರ್ಮದ ಹೋದಿಕೆ ನೀಡಿರುವುದು ಈ ಕಾರಿನ ವಿಶೇಷತೆಯಾಗಿದೆ. ಇದರಿಂದಾಗಿ ಸಹಜವಾಗಿಯೇ ದರ ಕೂಡಾ ಸಾಕಷ್ಟು ದುಬಾರಿಯೆನಿಸಿದೆ.

ಪ್ಯೂಜೊ ಬ್ಯಾಡ್ಜ್

ಪ್ಯೂಜೊ ಬ್ಯಾಡ್ಜ್

ಪ್ರಸ್ತುತ ಲೆಥರ್ ಕಾರನ್ನು ಯಾರು ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಇದರಲ್ಲಿರುವ ಪ್ಯೂಜೊ ಬ್ಯಾಡ್ಜ್ ಸಂಪೂರ್ಣ ಪರಿಷ್ಕೃತಗೊಳಿಸಲಾಗಿರುವ ಕಾರೆಂಬುದನ್ನು ಸೂಚಿಸುತ್ತದೆ.

ಚರ್ಮ ಬಳಕೆ

ಚರ್ಮ ಬಳಕೆ

ಕಾಡುಕೋಣದ ಚರ್ಮವನ್ನು ಉಪಯೋಗಿಸಿ ಈ ಲೆಥರ್ ಕಾರು ತಯಾರಿಸಲಾಗಿದೆಯೆಂಬ ಮಾಹಿತಿಯಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಇದನ್ನು ಬಳಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಅಲಭ್ಯ.

ಇಂಟಿರಿಯರ್

ಇಂಟಿರಿಯರ್

ಕಾರಿನ ಒಳಗಡೆಯೂ ಲೆಥರ್ ಟಚ್ ನೀಡಲಾಗಿದೆ. ಇದು ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತಿದೆ.

ಎಂಜಿನ್

ಎಂಜಿನ್

ಎಂಜಿನ್ ಒಳಗಡೆಯೂ ಸಂಪೂರ್ಣ ಚರ್ಮದಿಂದ ಆವರಿಸಿರುವುದು ವಿಶೇಷತೆಯಾಗಿದೆ.

ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

ಇನ್ನು ಕಾರಿನ ಹಿಂದುಗಡೆಯೂ ಲೆಥರ್ ಬಳಸಿರುವುದನ್ನು ನೀವು ನೋಡಬಹುದು.

ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

ನುರಿತ ತರಬೇತಿ ಪಡೆದಿರುವ ಎಂಜಿನಿಯರ್ ಈ ಕಾರನ್ನು ವಿನ್ಯಾಸಗೊಳಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

ಎಂಜಿನ್ ಬಗ್ಗೆ ಮಾತನಾಡುವುದಾದರೆ ಇದರಲ್ಲಿ 2.5 ಲೀಟರ್ ಪೆಟ್ರೋಲ್ ಮಿಲ್ ಎಂಜಿನ್ ಆಳವಡಿಸಲಾಗಿದೆ.

ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

ಈ ಲೆಥರ್ ಕಾರಿನ ದರ 1.2 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂದರೆ ಇದು ಭಾರತೀಯ ರುಪಾಯಿ ಪ್ರಕಾರ 8.11 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ರಷ್ಯಾದಲ್ಲೊಂದು ಮಿಲಿಯನ್ ಡಾಲರ್ ಲೆಥರ್ ಕಾರ್

ಇನ್ನೊಂದು ಆಕರ್ಷಕ ಫೀಚರ್ ಏನೆಂದರೆ ಚರ್ಮದಿಂದ ತಯಾರಿಸಲಾಗಿರುವ ಈ ದುಬಾರಿ ಕಾರಿಗೆ ಜೀವಮಾನ ಪರ್ಯಂತ ವಾರಂಟಿ ನೀಡಲಾಗುತ್ತದೆ.

English summary
Car wraps are popular as they lend a unique style and makes the stand apart in the crowd or even win you a prize, like the woolen sweater wrapped Beetle from Germany. But we would say wrapping an entire car in leather is not just strange, but also obnoxious.
Story first published: Thursday, August 29, 2013, 11:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark