ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ..!

Written By:

ಕಸ್ಟಮ್ ಬೈಕ್‌ಗಳ ಬಗೆಗೆ ಮಾತಾನಾಡುತ್ತಿದ್ದರೆ ನಮಗೆ ಥಟ್ ಅಂತಾ ನೆನಪಿಗೆ ಬರೋದು ರಾಯಲ್ ಎನ್‌ಫೀಲ್ಡ್. ಏಕೆಂದರೆ ಅತಿ ಹೆಚ್ಚು ಕಸ್ಟಮ್ ಬೈಕ್‌ಗಳು ಸಿದ್ಧವಾಗವುದು ಇದರಿಂದಲೇ. ಆದ್ರೆ ನಾಸಿಕ್ ಮೂಲದ ಆರ್ನಿಥಾಪ್ಟರ್ ಮೋಟೋ ಡಿಸೈನ್ ವಿಶಿಷ್ಠ ವಿನ್ಯಾಸದ ಕಸ್ಟಮ್ ಚಾಪರ್ ತಯಾರಿಸಿದೆ.

To Follow DriveSpark On Facebook, Click The Like Button
ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ

ಮೊದಲ ನೋಟದಲ್ಲೇ ಗಮನಸೆಳೆಯುವ ಕಸ್ಟಮ್ ಅವೆಂಜರ್ 220 ಬೈಕ್, ಸಾಕಷ್ಟು ತಯಾರಿಯೊಂದಿಗೆ ಪರಿವರ್ತನೆಗೊಂಡಿದೆ. ಮೆಟಾಲಿಕ್ ಆರೇಂಜ್ ಮತ್ತು ಬ್ಲ್ಯಾಕ್ ಫಿನಿಶಿಂಗ್ ಬೈಕ್ ಅಂದವನ್ನು ಹೆಚ್ಚಿಸಿದ್ದು, ಹ್ಯಾಂಡಲ್ ಬಾರ್ ಅನ್ನು ಅದ್ಭುತ ವಿನ್ಯಾಸ ಮಾಡಲಾಗಿದೆ. ಇನ್ನೊಂದು ಪ್ರಮುಖ ವಿಚಾರವೆನೆಂದರೆ ಈ ಬೈಕಿನ ವಿನ್ಯಾಸದಲ್ಲಿ ಫ್ರಂಟ್ ಮತ್ತು ಬ್ಯಾಕ್ ಫೆಂಡರ್ ಎರಡನ್ನು ಪ್ರತ್ಯೇಕಗೊಳಿಸಲಾಗಿದೆ.

ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ

ಎಚ್ಚರಿಕೆಯಿಂದ ಹೊಸ ವಿನ್ಯಾಸವನ್ನು ಗಮನಿಸಿದರೆ ತಿಳಿಯಬೇಕಾದ ವಿಚಾರಗಳು ಸಾಕಷ್ಟಿವೆ. ಮೂಲ ಬೈಕ್ ವಿನ್ಯಾಸವನ್ನು ತೊಡೆದುಹಾಕಿರೋ ಕಸ್ಟಮ್ ಚಾಪರ್, ಹಿಂದಿನ ಚೌಕಟ್ಟನ್ನು ತೆಗೆದುಹಾಕಿದೆ. 15-ಇಂಚಿನ ಚಕ್ರ ಹಾಗು ಅಗಲವಾದ ಟೈರ್ ಅಳವಡಿಸಲಾಗಿದೆ.

ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ

ಆರ್ನಿಥಾಪ್ಟರ್ ಮೋಟೋ ವಿನ್ಯಾಸದಲ್ಲಿ ಸೀಟುಗಳನ್ನು ಮಾಡಿಫೈ ಮಾಡಲಾಗಿದ್ದು, ಗ್ಲ್ಯಾಮರ್ ಲುಕ್ ನೀಡಲಾಗಿದೆ. 220 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 19ಬಿಎಚ್‌ಪಿ ಮತ್ತು 17.5ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೇ 5 ಸ್ಪೀಡ್ ಗೇರ್ ಬಾಕ್ಸ್ ವ್ಯವಸ್ಥೆ ಹೊಂದಿದೆ.

ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ

ಹವ್ಯಾಸಿ ಬೈಕ್ ಸವಾರರಿಗೆ ಸಖತ್ ಥ್ರಿಲ್ ಕೊಡುವ ಆರ್ನಿಥಾಪ್ಟರ್ ಮೋಟೋ ವಿನ್ಯಾಸ, ಮೂಲ ಅವೆಂಜರ್‌ ವಿನ್ಯಾಸವನ್ನು ನಾಚಿಸುವಂತಿದೆ. ಆದ್ರೆ ಕಾರ್ಯಕ್ಷಮತೆಯಲ್ಲಿ ಅವೆಂಜರ್ ಹಿಂದಿಕ್ಕಲು ಸಾಧ್ಯವಾಗದಿದ್ದರು, ಮಾಡಿಫೈ ಎಕ್ಸಾಸ್ಟ್ ವ್ಯವಸ್ಥೆ ಲಾಭದಾಯಕವಾಗಿದೆ.

ಕಸ್ಟಮ್ ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ; ಬೈಕ್ ಹೆಸರು ತಿಳಿದರೆ ಆದೀತು ಅಚ್ಚರಿ

ಇನ್ನು ಚಾಪರ್ ಆರ್ನಿಥಾಪ್ಟರ್ ಮೋಟೋ ವಿನ್ಯಾಸ ನಿಮಗೆ ಇಷ್ಟವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಕೆಳಗಿನ ಡೋಮಿನಾರ್ 400 ಚಿತ್ರಗಳು ನಿಮ್ಮ ಸೆಳೆಯದೆ ಇರಲಾರವು.

English summary
Ornithopter Moto Design has built a custom chopper based on a Bajaj Avenger 220, which has a love it or hate it design.
Please Wait while comments are loading...

Latest Photos