ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳ ಮೊಹಮ್ಮದ್ ಶಮಿ ಕೂಡ ಒಬ್ಬರು. ಮೊಹಮ್ಮದ್ ಶಮಿ ತಮ್ಮ ವೃತ್ತಿ ಜೀವನದಲ್ಲಿ ಹಲವು ಬಾರಿ ಟೀಂ ಇಂಡಿಯಾ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವರು ಒಟ್ಟು 9 ವಿಕೆಟ್ ಪಡೆದು ಗಮನಸೆಳೆದಿದ್ದರು.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಒನ್ ಡೇ ಮ್ಯಾಚ್ ನಲ್ಲಿ 50 ವಿಕೆಟ್ ಪಡೆದ ಎರಡನೇ ಅತಿ ವೇಗದ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ ಹಲವು ದಾಖಲೆಗಳು ಮಾಡಿದ ಶಮಿ ಭಾರತ ತಂಡದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಈ ಬಾರಿಯ ಐಪಿಎಲ್ ನಲ್ಲಿ ಇವರು ಗುಜರಾತ್‌ ಟೈಟನ್ಸ್ ತಂಡದ ಪರವಾಗಿ ಆಟವಾಡಿದ್ದಾರೆ. ಮೊಹಮ್ಮದ್ ಶಮಿ ಅವರು ಇತ್ತೀಚೆಗೆ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಖರೀದಿಸಿದ್ದಾರೆ. ಮಿಸ್ಟರ್ ಕ್ಲೀನ್ ಎಂದು ಕರೆಯಲ್ಪಡುವ ಟಾಪ್-ಎಂಡ್ ರೂಪಾಂತರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮಿಸ್ಟರ್ ಕ್ಲೀನ್ ಟಾಪ್-ಎಂಡ್ ರೂಪಾಂತರದ ಬೆಲೆಯು ರೂ.3.05 ಲಕ್ಷವಾಗಿದೆ. ಕಾಂಟಿನೆಂಟಲ್ ಜಿಟಿ 650 ಆರಂಭಿಕ ಬೆಲೆ ರೂ.3.05 ಲಕ್ಷ ವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಜಿಟಿ 650 ಪ್ರಸ್ತುತ ರಾಯಲ್ ಎನ್‌ಫೀಲ್ಡ್‌ನ ಪ್ರಮುಖ ಮಾದರಿಯಾಗಿದೆ. ಜಿಟಿ 650 ಗಿಂತ ಮೊದಲು, ಜಿಟಿ 535 ರಾಯಲ್ ಎನ್‌ಫೀಲ್ಡ್‌ಗೆ ಪ್ರಮುಖ ಮೋಟಾರ್‌ಸೈಕಲ್ ಆಗಿತ್ತು. ಆದರೆ ನಂತರ ಜಿಟಿ 535 ಅನ್ನು ಸ್ಥಗಿತಗೊಳಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಹೊಸ ಫ್ಲ್ಯಾಗ್‌ಶಿಪ್ ಆಗಬಹುದಾದ ಹೆಚ್ಚಿನ ಹೊಸ ಮೋಟಾರ್‌ಸೈಕಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಕೆಫೆ ರೇಸರ್ ವಿನ್ಯಾಸದ ಭಾಷೆಯಿಂದಾಗಿ ಕಾಂಟಿನೆಂಟಲ್ ಜಿಟಿ 650 ಅನ್ನು ಅತ್ಯಂತ ಸುಂದರವಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದೆಂದು ಅನೇಕ ಜನರು ಪರಿಗಣಿಸುತ್ತಾರೆ. ಇತ್ತೀಚೆಗೆ ಅನೇಕ ದ್ವಿಚಕ್ರ ವಾಹನ ತಯಾರಕರು ಕೆಫೆ ರೇಸರ್ ಬೈಕ್ ಗಳನ್ನು ಬಿಡುಗಡೆಗೊಳಿಸುತ್ತಿಲ್ಲ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೋಟಾರ್‌ಸೈಕಲ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ವೃತ್ತಾಕಾರದ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ರೇಸಿಂಗ್ ಕೌಲ್‌ನೊಂದಿಗೆ ಸಿಂಗಲ್-ಸೀಟ್, 12.5-ಲೀಟರ್ ಇಂಧನ ಟ್ಯಾಂಕ್ ಮತ್ತು ಬ್ಲ್ಯಾಕ್-ಔಟ್ ಸ್ಪೋಕ್ಡ್ ವೀಲ್‌ಗಳೊಂದಿಗೆ ಬರುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಗಾಗಿ ಹಲವಾರು ಅಕ್ಸೆಸರೀಸ್ ಗಳನ್ನು ನೀಡುತ್ತದೆ. ಟೂರಿಂಗ್ ಸೀಟ್‌ಗಳು, ಸಸ್ಪೆನ್ಷನ್ ಫಿನಿಶರ್‌ಗಳು, ಇಂಜಿನ್ ಗಾರ್ಡ್‌ಗಳು, ರೇಸಿಂಗ್ ಸಿಂಗಲ್-ಸೀಟ್ ಕೌಲ್‌ಗಳು, ಫ್ಲೈ ಸ್ಕ್ರೀನ್‌ಗಳು, ರಿಸರ್ವಾಯರ್ ಕ್ಯಾಪ್‌ಗಳು, ಆಯಿಲ್ ಫಿಲ್ಟರ್ ಕ್ಯಾಪ್‌ಗಳು, ಬಾರ್-ಎಂಡ್ ಫಿನಿಶರ್‌ಗಳು, ಹೀಲ್ ಗಾರ್ಡ್‌ಗಳು, ಸ್ವಿಂಗಾರ್ಮ್ ಬಾಬಿನ್ಸ್, ಸಂಪ್ ಇವೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಇದರೊಂದಿಗೆ ಗಾರ್ಡ್, ಫೋರ್ಕ್ ಗೈಟರ್‌ಗಳು, ಇನ್‌ಟೇಕ್ ಕವರ್‌ಗಳು, ಬಾರ್-ಎಂಡ್ ಮಿರರ್‌ಗಳು ಮತ್ತು ಟೂರಿಂಗ್ ಮಿರರ್‌ಗಳು. ರಾಯಲ್ ಎನ್‌ಫೀಲ್ಡ್ ಮೃದುವಾದ ಪ್ಯಾನಿಯರ್ ರೈಕ್ ಗಳು, ವಾಟರ್-ರೆಸಿಟೆಂಡ್ ಕವರ್‌ಗಳು ಮತ್ತು ಬ್ಲಾಕ್ ಪ್ಯಾನಿಯರ್‌ಗಳನ್ನು ಸಹ ನೀಡುತ್ತದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕಿನಲ್ಲಿ 648 ಸಿಸಿ, ಫ್ಯೂಯಲ್-ಇಂಜೆಕ್ಟೆಡ್, ಫೋರ್-ಸ್ಟ್ರೋಕ್, ಪ್ಯಾರಲಲ್-ಟ್ವಿನ್ ಪೆಟ್ರೋಲ್ ಇಂಜಿನ್ ಜೊತೆಗೆ ಏರ್-ಆಯಿಲ್ ಕೂಲ್ಡ್ ಆಗಿದೆ. ಈ ಎಂಜಿನ್ 47 ಬಿಹೆಚ್‌ಪಿ ಪವರ್ ಮತ್ತು 52 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿ ಬರುತ್ತದೆ ಅದು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಪಡೆಯುತ್ತದೆ. ಆಳವಾದ ರಂಬ್ಲಿಂಗ್ ಧ್ವನಿಗಾಗಿ ಎಂಜಿನ್ 270-ಡಿಗ್ರಿ ಕ್ರ್ಯಾಂಕ್ ಅನ್ನು ಪಡೆಯುತ್ತದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಹೇಳುವಂತೆ 80 ಪ್ರತಿಶತದಷ್ಟು ಟಾರ್ಕ್ 2,500 ಆರ್‌ಪಿಎಂನಷ್ಟು ಕಡಿಮೆ ಲಭ್ಯವಿದೆ. ಎಂಜಿನ್ ಅದರ ಮೃದುತ್ವ ಮತ್ತು ಟಾರ್ಕ್ ವಿತರಣೆಗೆ ಹೆಸರುವಾಸಿಯಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮಿಸ್ಟರ್ ಕ್ಲೀನ್ ಹೊರತುಪಡಿಸಿ, ನಾಲ್ಕು ಬಣ್ಣಗಳಿವೆ. ಬ್ರಿಟಿಷ್ ರೇಸಿಂಗ್ ಗ್ರೀನ್ ಮತ್ತು ರಾಕರ್ ರೆಡ್ ಇದೆ. ಇವುಗಳ ಬೆಲೆ ರೂ.3.05 ಲಕ್ಷ (ಎಕ್ಸ್ ಶೋರೂಂ). ನಂತರ DUX ಡಿಲಕ್ಸ್ ಮತ್ತು ವೆಂಚುರಾ ಸ್ಟಾರ್ಮ್ ಇವೆ. ಇವೆರಡೂ ರೂ.3.14 ಲಕ್ಷ (ಎಕ್ಸ್ ಶೋರೂಂ) ವಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಈ ಬೈಕಿನ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಮಾಡಲಾಗುತ್ತದೆ. ಮೋಟಾರ್‌ಸೈಕಲ್ ಡ್ಯುಯಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ರಾಯಲ್ ಎನ್‌ಫೀಲ್ಡ್ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಮುಂಭಾಗದ ಟೈರ್ 100/90 ಆದರೆ ಹಿಂಭಾಗವು 130/70 ಅಳತೆ ಹೊಂದಿದೆ. ಈ ಟೈರ್‌ಗಳನ್ನು ಸಿಯೆಟ್‌ನಿಂದ ಪಡೆಯಲಾಗಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಚಾಸಿಸ್ ಬೋಲ್ಟ್ ಟ್ರಸ್ಸಿಂಗ್ನೊಂದಿಗೆ ಟ್ಯೂಬಲರ್ ಫ್ರೇಮ್ ನಿಂದ ಕೂಡಿದೆ. ಇದನ್ನು ಹ್ಯಾರಿಸ್ ಪರ್ಫಾರ್ಮೆನ್ಸ್ ವಿನ್ಯಾಸಗೊಳಿಸಿದ್ದಾರೆ. ಇನ್ನು ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. ಮುಂಭಾಗವು 41 ಎಂಎಂ ಯೂನಿಟ್ ಆಗಿದ್ದು 110 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ ಆದರೆ ಹಿಂಭಾಗವು 88 ಎಂಎಂ ಟ್ರ್ಯಾವೆಲ್ ಹೊಂದಿದೆ ಮತ್ತು ಪ್ರಿ-ಲೋಡ್ ಹೊಂದಾಣಿಕೆಯನ್ನು ಪಡೆಯುತ್ತದೆ. ಕಾಂಟಿನೆಂಟಲ್ ಜಿಟಿ 650 ಬೈಕಿನ ಸೀಟ್ ಎತ್ತರವು 804 ಎಂಎಂ ಆಗಿದೆ.

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಗಾಗಿ ಸಾಕಷ್ಟು ಮೋಟಾರ್ ಸೈಕಲ್‌ಗಳಲ್ಲಿ ಕೆಲಸ ಮಾಡುತ್ತಿದೆ. ಈ ತಿಂಗಳು ಅವರು ಹಂಟರ್ 350 ಅನ್ನು ಬಿಡುಗಡೆ ಮಾಡುತ್ತಾರೆ ಮತ್ತು ಈ ವರ್ಷದ ನಂತರ ಅವರು ಬಹು ನಿರೀಕ್ಷಿತ ಸೂಪರ್ ಮೀಟಿಯರ್ 650 ಅನ್ನು ಪ್ರಾರಂಭಿಸುತ್ತಾರೆ. ಅವರು ಈ ಹಿಂದೆ ಕ್ಲಾಸಿಕ್ ರಿಬಾರ್ನ್, ಸ್ಕ್ರಾಮ್ 411 ಮತ್ತು ಮೆಟಿಯರ್ 350 ಅನ್ನು ಬಿಡುಗಡೆ ಮಾಡಿದರು. ಇವೆಲ್ಲವೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಎ

ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್ ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಅತ್ಯುತ್ತಮ ಕೇಪ್ ರೇಸರ್ ಆದ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಖರೀದಿಸಿದ್ದಾರೆ. ಈ ಜಿಟಿ 650 ಪ್ರಸ್ತುತ ರಾಯಲ್ ಎನ್‌ಫೀಲ್ಡ್‌ನ ಪ್ರಮುಖ ಮಾದರಿಯಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಗಾಗಿ ಸಾಕಷ್ಟು ಬೈಕ್ ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Mohammad shami buys new royal enfield continental gt 650 price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X