ಲಗ್ಷುರಿ ಲೈಫ್‌ಸ್ಟೈಲ್‌ಗೆ ಹೊಂದಿಕೆಯಾದ ಮೋಟಾರ್ ಹೋಮ್

Written By:

ದುಡ್ಡಿದ್ದವನೇ ದೊಡ್ಡಪ್ಪ ಎಂಬ ಗಾದೆ ಮಾತು ಇಲ್ಲಿ ಅರ್ಥಪೂರ್ಣವಾಗುತ್ತದೆ. ಯಾಕೆಂದರೆ ದೊಡ್ಡ ಪ್ರಮಾಣದ ಮೊತ್ತವನ್ನು ಯಾವ ರೀತಿ ಖರ್ಚು ಮಾಡಬೇಕೆಂಬುದನ್ನು ತಿಳಿಯದೇ ಹೋದಾಗ ಶ್ರೀಮಂತರು ಆಡಂಬರ ಜೀವನದತ್ತ ಮೊರೆ ಹೋಗುತ್ತಾರೆ.

ಇದೇ ರೀತಿ ತಯಾರಿಸಲಾಗಿರುವ ಮನರಂಜನ ವಾಹನ ಇದಾಗಿದೆ. ಮನೆಯಲ್ಲಿ ಲಭ್ಯವಾಗುವ ಎಲ್ಲ ಆಡಂಬರ ಜೀವನದ ಸೌಲಭ್ಯಗಳು ಈ ಸಂಚಾರಿ ಮೋಟಾರ್ ಹೋಮ್‌ನಲ್ಲಿ ಲಭ್ಯವಾಗಲಿದೆ.

ಪ್ರಮುಖವಾಗಿಯೂ ಪ್ರವಾಸ ಇಷ್ಟಪಡುವ ಅಥವಾ ದೀರ್ಘ ಪಯಣ ಬಯಸುವ ಪ್ರಯಾಣಿಕರಿಗಾಗಿ ಇದನ್ನು ತಯಾರಿಸಲಾಗಿದೆ. ಮಾರ್ಚಿ ಮೊಬೈಲ್ (Marchi Mobile ) ಬಿಡುಗಡೆ ಮಾಡಿರುವ ಈ ಲಗ್ಷುರಿ ಮೋಟಾರ್ ಹೋಮ್‌ನ ಹೆಸರು eleMMent Palazzo ಆಗಿದೆ.

ಇನ್ನು ದರದ ಬಗ್ಗೆ ಮಾತನಾಡುವುದಾದರೆ ಜಸ್ಟ್ 15 ಕೋಟಿ ರು.ಗಳಾಗಿವೆ. ಇನ್ನು ಹೆಚ್ಚು ತಿಳಿಯಬೇಕೆಂದರೆ ಫೋಟೊ ಫೀಚರ್ ಕ್ಲಿಕ್ಕಿಸಲೇ ಬೇಕಾಗುತ್ತದೆ.

Marchi Mobile eleMMent Palazzo

Marchi Mobile eleMMent Palazzo

ಶ್ರೀಮಂತ ವ್ಯಕ್ತಿಗಳ ಮನೆಯಲ್ಲಿ ಲಭ್ಯವಾಗುವ ಎಲ್ಲ ಆಡಂಬರ ಸೌಲಭ್ಯಗಳು ಈ ಮೋಟಾರ್ ಹೋಮ್‌ನಲ್ಲಿ ಲಭ್ಯವಾಗಲಿದೆ. ದುಡ್ಡು ಬಗ್ಗೆ ಚಿಂತಿಸುವುದಿಲ್ಲವಾದರೆ ಖಂಡಿತ ಇದನ್ನು ತಮ್ಮದಾಗಿಸಿಬಹುದು.

Marchi Mobile eleMMent Palazzo

Marchi Mobile eleMMent Palazzo

ಮೊದಲ ನೋಟದಲ್ಲೇ ಫ್ರಂಟ್ ಡಿಸೈನ್ ಮನ ಸೆಳೆಯುತ್ತಿದೆ. ಇದರ ಏರೋಡೈನಾಮಿಕ್ ವಿನ್ಯಾಸ ಶೇಕಡಾ 20ರಷ್ಟು ಇಂಧನ ಉಳಿತಾಯ ಮಾಡಲು ನೆರವಾಗಲಿದೆ. ಹಾಗೆಯೇ eleMMent Palazzo 530 ಬಿಎಚ್‌ಪಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

Marchi Mobile eleMMent Palazzo

Marchi Mobile eleMMent Palazzo

ಈ ಮೋಟಾರ್ ಹೋಮ್ ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದೆ. ಕಿಚನ್, ವಾಶ್ ರೂಂ ಸಹಿತ ಮಾಸ್ಟರ್ ಬೆಡ್ ಹೊಂದಿದೆ. ಹಾಗೆಯೇ ಎರಡು ಅಂತಸ್ತಿನ ಈ ಬಸ್ ಮೇಲ್ಗಡೆ ಬಾಲ್ಕನಿ ಕೂಡಾ ಇದೆ.

Marchi Mobile eleMMent Palazzo

Marchi Mobile eleMMent Palazzo

ಇದನ್ನು ಸಣ್ಣ ಆಫೀಸ್ ಎಂದೇ ಕೂಡಾ ಬೇಕಾದರೆ ವಿಶ್ಲೇಷಿಸಬಹುದು. ಯಾಕೆಂದರೆ ಉದ್ಯಮಿಗಳಿಗೆ ನೆರವಾಗುವ ರೀತಿಯಲ್ಲಿ ಕಾನ್ಫೆರನ್ಸ್ ರೂಂ ಕೂಡಾ ಇದೆ.

Marchi Mobile eleMMent Palazzo

Marchi Mobile eleMMent Palazzo

ಮನರಂಜನೆಯತ್ತವೂ ಹೆಚ್ಚಿನ ಮಹತ್ವ ಕೊಡಲಾಗಿದೆ. ಇದರ ಇಂಟಿರಿಯರ್ ಕಲರ್ ಕೂಡಾ ಖರೀದಿದಾರರನ್ನು ಆಕರ್ಷಿಸುವಂತಿದೆ.

Marchi Mobile eleMMent Palazzo

Marchi Mobile eleMMent Palazzo

ಒಟ್ಟಿನಲ್ಲಿ ಶ್ರೀಮಂತರಿಗಾಗಿ ತಯಾರಿಸಲಾಗಿರುವ ಅತಿ ನೂತನ ಮೋಟಾರ್ ಹೋಮ್ ಇದಾಗಿದೆ. ಹಾಗಾಗಿ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ.

Marchi Mobile eleMMent Palazzo

Marchi Mobile eleMMent Palazzo

ಲಗ್ಷುರಿ ಫೀಚರ್ಸ್

Marchi Mobile eleMMent Palazzo

Marchi Mobile eleMMent Palazzo

ಡಿಸೈನ್ ಲೇಔಟ್

English summary
Recreational vehicles or motor homes are vehicles equipped with most amenities of a home. These RVs are usually used by families on long family trips and caravans. The use of a RV has evolved from just a home on wheels to some thing that offers opulence and luxury
Story first published: Saturday, February 9, 2013, 9:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark