ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಕರೋನಾ ವೈರಸ್ ವಿಶ್ವದ ಎಲ್ಲಾ ದೇಶಗಳಿಗೆ ಸವಾಲನ್ನು ಒಡ್ಡಿದೆ. ಈ ವೈರಸ್ ಪ್ರತಿದಿನ ಹೆಚ್ಚು ಹೆಚ್ಚು ಜನರಿಗೆ ಹರಡುತ್ತಿದೆ. ಇದರಿಂದಾಗಿ ಜಾಗತಿಕ ಸಮುದಾಯವು ಆನಾರೋಗ್ಯದ ಭೀತಿಯನ್ನು ಎದುರಿಸುತ್ತಿದೆ. ಕರೋನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ.

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಭಾರತದಲ್ಲಿಯೂ ಈ ಮಹಾಮಾರಿ ವೈರಸ್ ತನ್ನ ಕ್ರೂರತೆಯನ್ನು ತೋರಿಸಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ವೈರಸ್ ಹರಡುವ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಏಪ್ರಿಲ್ 14ರವರೆಗೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಈ ಎರಡನೇ ಹಂತದ ಲಾಕ್‌ಡೌನ್ ಜನರನ್ನು ಗೊಂದಲಕ್ಕೀಡು ಮಾಡಿದೆ. ಮೊದಲ ಹಂತದ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುವ ಮುನ್ನವೇ ಎರಡನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆದರೆ ಕರೋನಾದ ಕಪಿಮುಷ್ಟಿಯಿಂದ ಪಾರಾಗಲು ಈ ರೀತಿಯ ಕ್ರಮಗಳು ಅವಶ್ಯಕವಾಗಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಆಯಾ ರಾಜ್ಯಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ, ಮುಂಬೈ ಪೊಲೀಸರು ತಮ್ಮ ವ್ಯಾನ್‌ಗಳನ್ನು ಆಂಟಿಸೆಪ್ಟಿಕ್ ಮಷಿನ್‌ಗಳನ್ನಾಗಿ ಬಳಸಲು ನಿರ್ಧರಿಸಿದ್ದಾರೆ.

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ವೈರಸ್ ಇರುವುದು ಪತ್ತೆಯಾಗಿದೆ. ಇದರಿಂದಾಗಿ ಮಹಾರಾಷ್ಟ್ರವು ಭಾರತದಲ್ಲಿ ಕರೋನಾದಿಂದ ಹೆಚ್ಚು ಬಳಲುತ್ತಿರುವ ರಾಜ್ಯವಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಮಹಾರಾಷ್ಟ್ರದ ಪ್ರಮುಖ ನಗರಗಳಾದ ಮುಂಬೈ ಹಾಗೂ ಪುಣೆ ನಗರಗಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರ ಸರ್ಕಾರವು ಅನೇಕ ಕ್ರಮಗಳೊಂದಿಗೆ, ಕರೋನಾ ವಿರುದ್ಧ ಹೋರಾಡುತ್ತಿದೆ. ಇದರಲ್ಲಿ ಆಂಟಿಸೆಪ್ಟಿಕ್ ಸ್ಪ್ರೇ ಸಹ ಸೇರಿದೆ.

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಈ ಉದ್ದೇಶದಿಂದ ಮುಂಬೈ ನಗರ ಪೊಲೀಸರ ವಾಹನಗಳನ್ನು ವಿಶೇಷ ತಾಂತ್ರಿಕ ಉಪಕರಣಗಳ ಸಹಾಯದಿಂದ ಆಂಟಿಸೆಪ್ಟಿಕ್ ಸ್ಪ್ರೇ ಸಿಂಪಡಿಸುವ ವಾಹನವನ್ನಾಗಿ ಮಾರ್ಪಡಿಸಲಾಗಿದೆ. ಈ ವಾಹನಗಳು ನಗರದ ಮೂಲೆ ಮೂಲೆಗೂ ಹೋಗಿ ಆಂಟಿಸೆಪ್ಟಿಕ್ ಸ್ಪ್ರೇ ಸಿಂಪಡಿಸುತ್ತವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಈ ಹೊಸ ಯೋಜನೆಯ ಬಗ್ಗೆ ಮುಂಬೈ ನಗರ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿರುವ ಫೋಟೋಗಳಲ್ಲಿ ಪೊಲೀಸ್ ವ್ಯಾನ್‌ಗಳು ಆಂಟಿಸೆಪ್ಟಿಕ್ ಸ್ಪ್ರೇ ಸಿಂಪಡಿಸುವ ವಾಹನಗಳಾಗಿ ಬದಲಾಗಿರುವುದನ್ನು ಕಾಣಬಹುದು.

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ಪ್ರತಿ ಪ್ರದೇಶಕ್ಕೆ ಒಂದು ವ್ಯಾನ್‌ನಂತೆ ಈ ವ್ಯಾನ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ವ್ಯಾನ್‌ಗಳು ಈಗಾಗಲೇ ತಮ್ಮ ಕೆಲಸವನ್ನು ಆರಂಭಿಸಿವೆ. ಕರೋನಾ ವೈರಸ್‌ನಿಂದ ಜನರನ್ನು ರಕ್ಷಿಸಲು ಪೊಲೀಸರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆಂಟಿಸೆಪ್ಟಿಕ್ ಮಷಿನ್‌ಗಳಾಗಿ ಬದಲಾದ ಪೊಲೀಸ್ ವ್ಯಾನ್‌ಗಳು

ದೇಶದ ಹಲವು ಭಾಗಗಳಲ್ಲಿ ಕಹಿ ಘಟನೆಗಳು ನಡೆದಿದ್ದರೂ, ಪೊಲೀಸರು ತಮ್ಮ ಕುಟುಂಬದವರಿಂದ ದೂರವಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವುಗಳ ಜೊತೆಗೆ ತಮ್ಮ ವ್ಯಾನ್‌ಗಳನ್ನೇ ಆಂಟಿಸೆಪ್ಟಿಕ್ ಮಷಿನ್‌ಗಳನ್ನಾಗಿ ಬಳಸುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ.

Most Read Articles

Kannada
English summary
Mumbai police turn their vans into Sanitisation units. Read in Kannada.
Story first published: Saturday, April 18, 2020, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X