ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

Written By:

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬುಲೆಟ್ ರೈಲು ಯೋಜನೆ ಜಾರಿಗೊಳ್ಳುತ್ತಿದ್ದು, ಸೆಪ್ಟಂಬರ್ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಸೆಪ್ಟಂಬರ್ ಅಂತ್ಯಕ್ಕೆ ಯೋಜನೆ ಆರಂಭಗೊಳ್ಳಲಿದ್ದು, ಮೊದಲನೇ ಹಂತದ ಬುಲೆಟ್ ಟ್ರೈನ್ 2023ರ ವೇಳೆಗೆ ತನ್ನ ಸೇವೆಯನ್ನು ಆರಂಭಗೊಳಿಸುವ ನಿರೀಕ್ಷೆಯಲ್ಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಮುಂಬೈ ಹಾಗೂ ಅಹಮದಾಬಾದಿನ ನಡುವಿನ 508ಕಿ.ಮೀ ದೂರವನ್ನು ಬುಲೆಟ್ ಟ್ರೈನ್ 2 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದ್ದು, ಗರಿಷ್ಠ 350 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

508 ಕಿ.ಮೀ ದೂರದ ಮುಂಬೈ ಹಾಗೂ ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಗೆ ಜಪಾನ್ ನಿಂದ ಸಾಲ ಪಡೆಯಲಾಗಿದ್ದು, ಇದಕ್ಕಾಗಿ 97,636 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಈ ಯೋಜನೆಗೆ ಶೇ.81ರಷ್ಟು ಜಪಾನ್ ಸರ್ಕಾರವೇ ಸಾಲ ನೀಡುತ್ತಿದ್ದು, ಈ ಹಿಂದೆ ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಫಲಪ್ರದಗೊಂಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ವಿಶೇಷ ವಾಹನ ಯೋಜನೆಯಡಿಯಲ್ಲಿ ಈ ಯೋಜನೆಗೆ ರೈಲ್ವೆ ಇಲಾಖೆ ಈಗಾಗಲೇ 200 ಕೋಟಿ ರೂಪಾಯಿ ನೀಡಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ಶೇ. 25ರಷ್ಟು ಈಕ್ವಿಟಿ ಹಾಗೂ ಭಾರತೀಯ ರೈಲ್ವೆಸ್ ಶೇ.50ರಷ್ಟು ಪಾಲು ಹೊಂದಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

2018ರ ಅಂತ್ಯಕ್ಕೆ ಜಪಾನೀಸ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿ (ಜಿಐಸಿಎ) ಜೊತೆ ಭಾರತೀಯ ರೈಲ್ವೆ ಒಪ್ಪಂದ ಮಾಡಿಕೊಳ್ಳಲಿದ್ದು, ಥಾಣೆಯ ಬಳಿ ಎಲಿಮೇಟೆಡ್ ಟ್ರ್ಯಾಕ್ ಹಾಗೂ 21 ಕಿಮಿ ಜಲಾಂತರ್ಗತ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

12 ನಿಲ್ದಾಣಗಳ ನಿರ್ಮಾಣ

ಮುಂಬೈ ಮತ್ತು ಅಹಮದಾಬಾದ್ ನಡುವೆ ಒಟ್ಟು 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ವಿರಾರ್, ವಾಪಿ, ಸೂರತ್, ಭರೂಚ್, ವಡೋದರಾ, ಆನಂದ್ ಮತ್ತು ಅಹಮದಾಬಾದ್ ಸೇರಿದಂತೆ 12 ನಿಲ್ದಾಣಗಳು ಬುಲೆಟ್ ಟ್ರೈನ್ ಸಂಪರ್ಕ ಪಡೆಯಲಿವೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ನಿಲ್ದಾಣಗಳ ಸಮೀಕ್ಷಾ ಕಾರ್ಯವು ಬಹುತೇಕ ಅಂತಿನ ಹಂತ ತಲುಪಿದ್ದು, 12 ನಿಲ್ದಾಣಗಳ ಪೈಕಿ 4 ಮಹಾರಾಷ್ಟ್ರ ಮತ್ತು 8 ನಿಲ್ದಾಣಗಳು ಗುಜರಾತ್‌ನಲ್ಲಿ ಬರಲಿವೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಕೇವಲ 2 ಗಂಟೆ ಪ್ರಯಾಣ

ಸದ್ಯ ಮುಂಬೈ-ಅಹಮದಾಬಾದ್ ತಲುಪಲು ಕನಿಷ್ಠ 7 ಗಂಟೆ ಅವಧಿ ಬೇಕು. ಆದ್ರೆ ಬುಲೆಟ್ ಟ್ರೈನ್‌ನಲ್ಲಿ ಉಭಯ ನಗರಗಳ ಮಧ್ಯೆ ಕೇವಲ 2 ಗಂಟೆಗಳಲ್ಲಿ ಸಂಚರಿಸಬಹುದು.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

5 ಕಡೆಗೆ ಬುಲೆಟ್ ರೈಲು ಕಾರಿಡಾರ್

ಹೌದು.. 2023ರ ವೇಳೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ ಸಂಚರಿಸಲಿದ್ದು, ತದನಂತರ ದೆಹಲಿ-ಮುಂಬೈ, ಮುಂಬೈ-ಚೆನ್ನೈ, ದೆಹಲಿ-ಕೊಲ್ಕತ್ತಾ, ದೆಹಲಿ-ನಾಗ್ಪುರ್ ಮತ್ತು ಮುಂಬೈ-ನಾಗ್ಪುರ್ ನಡುವೆ ಬುಲೆಟ್ ಟ್ರೈನ್ ಸಂಚರಿಸಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಪ್ರತಿ ಗಂಟೆಗೆ 350 ಕಿ.ಮಿ ವೇಗ

ಬಹುನೀರಿಕ್ಷಿತ ಬುಲೆಟ್ ಟ್ರೈನ್ ಪ್ರತಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸುವ ಗುರಿ ಹೊಂದಿದ್ದು, 1200 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಜೊತೆಗೆ ಸಾಮಾನ್ಯ ಎಸಿ ರೈಲು ಪ್ರಯಾಣಕ್ಕಿಂತಲೂ ಬುಲೆಟ್ ಪ್ರಯಾಣ ದುಬಾರಿಯಾಗಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಭಾರತದ ಕನಸಿಗೆ ಜಪಾನ್ ಬೆಂಬಲ

ಈ ಬೃಹತ್ ಯೋಜನಗೆ ಸುಮಾರು 97,636 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಶೇ.81ರಷ್ಟು ಜಪಾನ್ ಸರ್ಕಾರ ಹೂಡಿಕೆ ಮಾಡುತ್ತಿದೆ. ಈ ಹಿನ್ನೆಲೆ 50 ವರ್ಷಗಳ ಅವಧಿಯಲ್ಲಿ ಭಾರತವು ಈ ಸಾಲವನ್ನು ಮರುಪಾವತಿ ಮಾಡಬೇಕಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಒಟ್ಟಿನಲ್ಲಿ ದೇಶದ ಹೆಮ್ಮೆಯ ಬುಲೆಟ್ ಟ್ರೈನ್ ಕನಸಿಗೆ ಕಾಲ ಒದಗಿ ಬಂದಿದ್ದು, ಬುಲೆಟ್ ಟ್ರೈನ್ ಹೊಂದಿದ ಕೆಲವೇ ಕೆಲವು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಕೂಡಾ ಸೇರ್ಪಡೆಯಾಗಲಿದೆ.

Read more on ರೈಲು train
English summary
Read in Kannada about bullet train project in India is all set to kick off this year.
Story first published: Friday, June 2, 2017, 13:00 [IST]
Please Wait while comments are loading...

Latest Photos