ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

Written By:

ನಿಮಗೆಲ್ಲರಿಗೂ ಸ್ಕೇಟಿಂಗ್ ತುಂಬಾ ಚಿರಪರಿಚಿತ. ಪಟ್ಟಣ ಪ್ರದೇಶದಲ್ಲಿ ಚಿಕ್ಕದವರಿಂದ ಹಿಡಿದು ಹದಿಹರೆಯದವರು ಸಹ ವಾರಂತ್ಯದ ಸಂದರ್ಭದಲ್ಲಿ ಸ್ಕೇಟಿಂಗ್ ಮಾಡುವುದು ತಮ್ಮ ಹವ್ಯಾಸದ ಭಾಗವಾಗಿರುತ್ತದೆ.

ಇಂತಹದೊಂದು ಚಿಂತನೆಗೆ ಮುಂದಾಗಿರುವ ಕೈಲ್ ಡೋರ್ಕ್‌ಸೆನ್ (kyle doerksen) ಅತಿ ವಿಶೇಷವಾದ ಒನ್ ವೀಲ್ ಸ್ವಯಂ ಸಮತೋಲನದ ಸ್ಕೇಟ್ ಬೋರ್ಡ್ ಅಭಿವೃದ್ಧಿಪಡಿಸಿದ್ದಾರೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಇದರ ವಿಶಿಷ್ಟತೆ ಏನೆಂದರೆ ಒನ್ ವೀಲ್ ವಿದ್ಯುತ್ ಚಾಲಿತ ಬಂಡಿ ಲಿಥಿಯಂ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತಿದ್ದು, ಸ್ವಯಂ ಸಮತೋಲನ ಮಾಡಬಹುದಾಗಿದೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಇದರ ತಯಾರಕರೇ ಹೇಳುವ ಪ್ರಕಾರ, ಒನ್‌ವೀಲ್ ಸೆಲ್ಫ್ ಬಾಲನ್ಸಿಂಗ್ ಚಾಲನೆಯು ನಿಮ್ಮಲ್ಲಿ ಸ್ವಚ್ಛಂಧವಾಗಿ ಬಾನೆತ್ತರಕ್ಕೆ ಹಾರುವ ಭಾವನೆಯನ್ನುಂಟು ಮಾಡಲಿದೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಇದರಲ್ಲಿ ಚಲಿಸುವುದು ಸ್ಕೇಟಿಂಗ್ ಮಾಡುವುದರಷ್ಟು ಸರಳ ಹಾಗೂ ಸುಲಭ. ಮುಂದಕ್ಕೆ ಚಲಿಸಬೇಕಾದ್ದಲ್ಲಿ ಮುಂಭಾಗಕ್ಕೆ ಬಾಗಿದರಾಯಿತು. ಅದೇ ರೀತಿ ವೇಗ ಕಡಿತಗೊಳಿಸಲು ಮತ್ತೆ ಹಿಂದಕ್ಕೆ ಬಾಗುತ್ತಿರಬೇಕು. ಇನ್ನು ತಿರುವು ಪಡೆಯಲು ಇದನ್ನು ಗಟ್ಟಿಯಾಗಿ ಒತ್ತಿ ಹಿಡಿದು ನಿಮಗೆ ಬೇಕಾದ ದಿಕ್ಕಿಗೆ ಚಲಿಸಬಹುದಾಗಿದೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಕ್ಯಾಲಿಫೋರ್ನಿಯಾ ತಲಹದಿಯ ಫ್ಯೂಚರ್ ಮೊಷನ್ ಪ್ರಕಾರ, ಒನ್ ವೀಲ್ ಗಂಟೆಗೆ 12 ಮೈಲ್ ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಇದರಲ್ಲಿ 48 ವೋಲ್ಟ್ ಲಿಥಿಯಂ ನ್ಯಾನೋ ಪೋಸ್ಪೇಟ್ ಬ್ಯಾಟರಿ ಆಳಡಿಸಲಾಗಿದ್ದು, 20 ನಿಮಿಷಗಳಲ್ಲೇ ಚಾರ್ಜ್ ಮಾಡಿಸಬಹುದಾಗಿದೆ (ಫಾಸ್ಟ್ ಚಾರ್ಜರ್). ಹಾಗೆಯೇ ಸ್ಟಾಂಡರ್ಡ್ ಚಾರ್ಜರ್‌ಗೆ 2 ತಾಸು ತಗುಲಲಿದೆ. ಹಾಗೆಯೇ 4-6 ಮೈಲ್ ದೂರದ ವರೆಗೆ ಚಲಿಸಬಹುದಾಗಿದೆ.

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಅಷ್ಟಕ್ಕೂ ಸ್ಕೇಟಿಂಗ್ ತರಹನೇ ಒನ್ ವೀಲ್ ಚಾಲನೆ ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯ. ಯಾಕೆಂದರೆ ಕೊನೆಯಲ್ಲಿ ಹಲ್ಲು ಮುರಿದು ಹೋದ್ದಲ್ಲಿ ನಾವಲ್ಲ ಬವಾಬ್ದಾರರು!

ಸ್ವಯಂ ಸಮತೋಲನದ ಒನ್‌ವೀಲ್ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್

ಅಮೆರಿಕ ನಿರ್ಮಿತ ಒನ್ ವೀಲ್ ಸ್ಕೇಟ್ ಬೋರ್ಡ್ ನಿರ್ಮಾಣದಲ್ಲಿ ಅತ್ಯುತ್ತಮ ಗುಣಮಟ್ಟದ ಪರಿಕರಗಳನ್ನು ಬಳಕೆ ಮಾಡಲಾಗಿದೆ. ಇದರಲ್ಲಿರುವ ಹಬ್ ಮೋಟಾರು ವಿಶಿಷ್ಟವಾಗಿರುತ್ತದೆ.

ಫೋಟೊ ಕೃಪೆ: ಒನ್ ವೀಲ್ ಫೇಸ್‌ಬುಕ್

English summary
Onewheel: the self-balancing electric skateboard that gives you the feeling of flying
Story first published: Saturday, May 10, 2014, 17:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark