ಭಾರತವನ್ನು ಮಟ್ಟ ಹಾಕಲು ಪಾಕ್ ಗೆ ಚೀನಾ ನೆರವು ?

By Nagaraja

ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪ್ರಕ್ಷುಬ್ದ ವಾತಾವರಣ ಮುಂದುವರಿದಿರುವಂತೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೆರೆಯ ಚೀನಾ ವಿವಾದತ್ಮಾಕ ಹೆಜ್ಜೆಯೊಂದನ್ನು ಮುಂದಿಟ್ಟಿದೆ. ಬಲ್ಲ ಮೂಲಗಳ ಪ್ರಕಾರ ಪಾಕಿಸ್ತಾನ ಜೊತೆಗೆ ಮಿಲಿಟರಿ ಒಪ್ಪಂದಕ್ಕೆ ಮುಂದಾಗಿರುವ ಚೀನಾ ಮುಂದಿನ ಒಂದು ದಶಕದೊಳಗೆ ಎಂಟು ಜಲಾಂತರ್ಗಾಮಿ ಯುದ್ಧ ನೌಕೆಗಳನ್ನು ಹಸ್ತಾಂತರಿಸಲಿದೆ.

2028ರ ವೇಳೆಯಾಗುವಾಗ ಪರಿಷ್ಕೃತ ಎಂಟು ಡೀಸೆಲ್ ಜಲಾಂತರ್ಗಾಮಿ ಯುದ್ಧ ನೌಕೆಗಳಿಗೆ ಪಾಕಿಸ್ತಾನ ಒಡೆಯನಾಗಲಿದೆ. ಈ ಸಂಬಂಧ ಚೀನಾ ಜೊತೆಗೆ ಬರೋಬ್ಬರಿ 5 ಮಿಲಿಯನ್ ಅಮೆರಿಕನ್ ಡಾಲರ್ ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಕಳೆದ ಎಪ್ರಿಲ್ ತಿಂಗಳಲ್ಲೇ ಕರಾಚಿ ಶಿಪ್ ಯಾರ್ಡ್ ಮತ್ತು ಎಂಜಿನಿಯರಿಂಗ್ ವರ್ಕ್ಸ್ (ಕೆಎಸ್ ಇಡಬ್ಲ್ಯು) ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಸೂಚನೆ ನೀಡಿದ್ದವು.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಜಲಾಂತರ್ಗಾಮಿ ಯುದ್ಧ ನೌಕೆಗಳು ಏರ್ ಇಂಡಿಪೆಡೆಂಟ್ ಪ್ರೊಪಲ್ ಷನ್ (ಎಐಪಿ) ವ್ಯವಸ್ಥೆಗಳನ್ನು ಪಡೆಯಲಿದೆ. ಇದು ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಜಲಾಂತರ್ಗಾಮಿ ನೌಕೆಗಳ ಖರೀದಿಗಾಗಿ ವಿಶೇಷ ಹಣಕಾಸು ನೆರವನ್ನು ಪಾಕಿಸ್ತಾನಕ್ಕೆ ಚೀನಾ ಒದಗಿಸಲಿದೆ. ಇದರಂತೆ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿಯಲ್ಲಿ ಯೋಜನೆ ವೆಚ್ಚವನ್ನು ಮರು ಪಾವತಿ ಮಾಡಲು ಅನುವು ಮಾಡಿಕೊಡಲಾಗುವುದು.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಚೀನಾ ಶಿಪ್ ಬಿಲ್ಡಿಂಗ್ ಟ್ರೇಡಿಂಗ್ ಕಂಪನಿ (ಸಿಎಸ್ ಟಿಸಿ) ಯಾವ ಶ್ರೇಣಿಗೆ ಸೇರಿದ ಜಲಾಂತರ್ಗಾಮಿ ನೌಕೆಗಳನ್ನು ಪಾಕ್ ಗೆ ಹಸ್ತಾಂತರಿಸಲಿದೆ ಎಂಬುದು ಇನ್ನು ಗೌಪ್ಯವಾಗಿದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಬಲ್ಲ ಮೂಲಗಳ ಪ್ರಕಾರ ಪೀಪಲ್ಸ್ ಲಿಬೆರೇಷನ್ ಆರ್ಮಿ ನೇವಿಗೆ (ಪಿಎಲ್ ಎಎನ್) ಸೇರಿದ ಟೈಪ್ 039 ಹಾಗೂ ಟೈಪ್ 041 ಯುವಾನ್ ಕ್ಲಾಸ್ ಸಾಂಪ್ರದಾಯಿಕ ಜಲಾಂತರ್ಗಾಮಿ ಯುದ್ಧ ನೌಕೆಗಳನ್ನು ಹಸ್ತಾಂತರಿಸಲಿದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಮೊದಲ ಹಂತವಾಗಿ ನಾಲ್ಕು ಜಲಾಂತರ್ಗಾಮಿ ಯುದ್ಧ ನೌಕೆಯನ್ನು 2023ರ ವೇಳೆಯಲ್ಲೂ ಮತ್ತು ಬಾಕಿ ಉಳಿದನ್ನು 2028ರ ಅವಧಿಯಲ್ಲಿ ರವಾನಿಸಲಿದೆ. ಇದು ಸಾಗರದಲ್ಲಿ ಪಾಕಿಸ್ತಾನ ಬಲ ವೃದ್ಧಿಸಿಕೊಳ್ಳಲಿದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಪಾಕಿಸ್ತಾನಕ್ಕೆ ಯುದ್ಧ ಟ್ಯಾಂಕರ್ ಗಳಿಂದ ಹಿಡಿದು, ಯುದ್ಧ ಹಡಗು ಹಾಗೂ ಯುದ್ಧ ವಿಮಾನಗಳನ್ನು ಹಸ್ತಾಂತರಿಸುವುದರಲ್ಲಿ ಚೀನಾ ಮುಂದಿದೆ. ಉಭಯ ರಾಷ್ಟ್ರಗಳು ಜಂಟಿಯಾಗಿ ಜಿ-17 ಥಂಡರ್ ಯುದ್ಧ ವಿಮಾನವನ್ನು ಅಭಿವೃದ್ಧಿಪಡಿಸುತ್ತಿದೆ.

ಪಾಕ್ ಗೆ ಜಲಾಂತರ್ಗಾಮಿ ಯುದ್ಧ ನೌಕೆ ಹಸ್ತಾಂತರಿಸಲಿರುವ ಚೀನಾ

ಒಟ್ಟಿನಲ್ಲಿ ಪಾಕಿಸ್ತಾನ ಹಾಗೂ ಚೀನಾ ನಡುವಣ ಮಿಲಿಟರಿ ಒಪ್ಪಂದವನ್ನು ಭಾರತ ಸಹ ಅತ್ಯಂತ ಜಾಗ್ರತೆಯಿಂದ ನಿಗಾವಹಿಸಬೇಕಿದೆ.

Most Read Articles

Kannada
Read more on ಭಾರತ india
English summary
Pakistan to acquire eight new stealth attack submarines from china by 2028
Story first published: Thursday, September 22, 2016, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X