ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಇಳಯ ದಳಪತಿ ಖ್ಯಾತಿಯ ವಿಜಯ್ ಅಭಿನಯದ ತಮಿಳು ಚಿತ್ರ ಮಾಸ್ಟರ್ ಯಶಸ್ಸಿನ ಹಾದಿಯಲ್ಲಿದೆ. ತಮಿಳು ಮಾತ್ರವಲ್ಲದೆ ಭಾರತದ ಇತರ ಭಾಷೆಯ ಜನರು ಕೂಡ ಈ ಚಿತ್ರದಲ್ಲಿ ಬರುವ ವಾಟಿ ಕಮಿಂಗ್ ಹಾಡಿಗೆ ಮನಸೋತಿದ್ದಾರೆ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಈ ಕಾರಣಕ್ಕಾಗಿಯೇ ಈ ಹಾಡಿಗೆ ನೃತ್ಯ ಮಾಡಿ ಅವುಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಇತ್ತೀಚಿಗೆ ಮುಂಬೈನ ಯುವಕನೊಬ್ಬ ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ವಾಟಿ ಕಮಿಂಗ್ ಹಾಡಿಗೆ ಡ್ಯಾನ್ಸ್ ಮಾಡಿದ್ದ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಸಿಗ್ನಲ್‌ನಲ್ಲಿ ಇದ್ದಕ್ಕಿದ್ದಂತೆ ಬೈಕಿನಿಂದ ಇಳಿದು ರಸ್ತೆಯ ಮಧ್ಯದಲ್ಲಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೊವನ್ನು ಸುಮಾರು 8 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈಗ ಪೊಲೆಂಡ್ ದೇಶದ ಡ್ಯಾನ್ಸರ್ ಒಬ್ಬ ಇದೇ ರೀತಿ ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಡ್ಯಾನ್ಸ್ ಮಾಡಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಸಿಗ್ನಲ್ ಲೈಟ್ ಕೆಂಪು ಬಣ್ಣದಲ್ಲಿದ್ದಾಗ ಆತ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿದ್ದಾನೆ. ಕಾರಿನಿಂದ ಇಳಿಯುವ ಆತ ಮೂನ್‌ವಾಕ್ ಎಂಬ ಜನಪ್ರಿಯ ಹಾಡಿಗೆ ಹೆಜ್ಜೆ ಹಾಕಿದ್ದಾನೆ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಟಿಕ್‌ಟಾಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ವೀಡಿಯೊ ನೋಡಿದ ಹಲವರು ಥ್ರಿಲ್ ಆಗಿರುವುದಾಗಿ ತಿಳಿಸಿದ್ದಾರೆ. ಈ ವೀಡಿಯೊವನ್ನು ಮತ್ತೆ ಮತ್ತೆ ನೋಡಿದರೂ ಬೇಸರವಾಗುವುದಿಲ್ಲವೆಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಇನ್ನೂ ಕೆಲವರು ಮೈಕೆಲ್ ಜಾನ್ಸನ್ ಅವರ ನೃತ್ಯಕ್ಕಿಂತ ಈ ನೃತ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಮಾರ್ಚ್ 28ರಂದು ಅಪ್ ಲೋಡ್ ಮಾಡಲಾದ ಈವೀಡಿಯೊವನ್ನು ಇದುವರೆಗೂ ಇಲ್ಲಿಯವರೆಗೆ 7.9 ದಶಲಕ್ಷ ಜನರು ವೀಕ್ಷಿಸಿದ್ದಾರೆ ಎಂಬುದು ಗಮನಾರ್ಹ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಈ ವೀಡಿಯೊ ಅಲ್ಪ ಅವಧಿಯಲ್ಲಿಯೇ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಡ್ಯಾನ್ಸ್ ಮಾಡಿದಾತನ ಹೆಸರು ಕಾಮಿಲ್ ಸ್ಜೆಪೆನ್ಕೊವ್ಸ್ಕಿ ಎಂದು ತಿಳಿದು ಬಂದಿದೆ. ಮೂಲತಃ ಡ್ಯಾನ್ಸರ್ ಆದ ಆತ ಮೂರು ವರ್ಷದಿಂದ ನೃತ್ಯ ಮಾಡುತ್ತಿದ್ದಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಆತ ಮನೆಯಲ್ಲಿದ್ದಾಗಲೂ ನೃತ್ಯ ಮಾಡುತ್ತಿರಬಹುದು. ಹೀಗಾಗಿ ಆತ ಕಾರಿನಲ್ಲಿ ಹೋಗುವಾಗ ಸಿಗ್ನಲ್‌ನಲ್ಲಿ ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿ ಎದುರಾದಾಗ ಡ್ಯಾನ್ಸ್ ಮಾಡಿದ್ದಾನೆ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಈ ಡ್ಯಾನ್ಸ್'ನಿಂದಾಗಿ ಆತ ಈಗ ವಿಶ್ವವಿಖ್ಯಾತ ವ್ಯಕ್ತಿಯಾಗಿದ್ದಾನೆ. ಮೂನ್‌ವಾಕ್ ನೃತ್ಯವನ್ನು ಜಗತ್ತಿಗೆ ಮೊದಲು ಪರಿಚಯಿಸಿದ್ದು ಮೈಕೆಲ್ ಜಾನ್ಸನ್. ಅವರು 1983ರ ಮೇ 16ರಂದು ವಿಶ್ವ ವೇದಿಕೆಯಲ್ಲಿ ಮೊದಲ ಬಾರಿಗೆ ಈ ನೃತ್ಯವನ್ನು ಪ್ರದರ್ಶಿಸಿದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ನೃತ್ಯವನ್ನು ನೋಡಿದವರು ಮನುಷ್ಯರು ಈ ರೀತಿಯಲ್ಲಿ ನೃತ್ಯ ಮಾಡಬಹುದೇ ಎಂದು ಆಶ್ಚರ್ಯಚಕಿತರಾದರು. ಈಗ ಹಲವಾರು ಜನರು ಈ ನೃತ್ಯ ರೂಪವನ್ನುಪ್ರದರ್ಶಿಸುತ್ತಿದ್ದಾರೆ.

ಟ್ರಾಫಿಕ್ ಸಿಗ್ನಲ್‌ನಲ್ಲಿಯೇ ಮೂನ್‌ವಾಕ್ ಮಾಡಿದ ಡ್ಯಾನ್ಸರ್

ಕೆಲವರು ಮೂನ್‌ವಾಕ್ ನೃತ್ಯದಲ್ಲಿ ಮೈಕೆಲ್ ಜಾನ್ಸನ್‌ರನ್ನು ಮೀರಿಸುವ ಮಟ್ಟಿಗೆ ಹೊಸ ಹೊಸ ಹೆಜ್ಜೆಗಳನ್ನು ಪರಿಚಯಿಸುತ್ತಿದ್ದಾರೆ. ಅದರಂತೆ ಈ ಪೊಲೆಂಡ್ ಡ್ಯಾನ್ಸರ್ ಕಾಮಿಲ್ ಸ್ಪೆಜೆನ್ಕೊವ್ಸ್ಕಿ ಸಹ ತನ್ನ ವಿಶಿಷ್ಟ ಪ್ರತಿಭೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

Most Read Articles

Kannada
English summary
Poland dancer does moonwalk dance in traffic signal video goes viral. Read in Kannada.
Story first published: Thursday, April 1, 2021, 9:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X