ಯುವಕನ ಸಮೇತ ಬೈಕ್ ಸೀಜ್ ಮಾಡಿದ ಪೊಲೀಸರು: ವಿಡಿಯೋ ವೈರಲ್

Written By:

ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಪಾರ್ಕ್ ಮಾಡಿದ್ದರು ಸಹ ದಂಡ ಕಟ್ಟಲು ಹಿಂದೆ ಸರಿದ ಯುವಕನನ್ನು ಪೊಲೀಸರು ಬೈಕ್ ಸಮೇತ ವ್ಯಾನ್ ಹಿಂದೆ ಚೈನಿಗೆ ಕಟ್ಟಿ ಎಳೆದುಕೊಂಡು ಹೋಗಿರುವ ಘಟನೆ ಕಾನ್ಪುರದಲ್ಲಿ ನೆಡೆದಿದೆ.

ನಿಷೇಧಿಸಿರುವ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದ ಯುವಕ ಬೈಕಿನಿಂದ ಕೆಳಗಿಳಿಯಲು ನಿರಾಕರಿಸಿದ ಕಾರಣ ಪೊಲೀಸರು ಯುವಕನನ್ನು ಚೈನಿಗೆ ಕಟ್ಟಿ ಕರೆದೊಯ್ದು ಪೊಲೀಸ್ ಸ್ಟೇಷನಿನಲ್ಲಿ ಕೂರಿಸಿದ್ದಾರೆ ಎನ್ನಲಾಗಿದೆ.

ಯುವಕ ಬೈಕಿನಿಂದ ಇಳಿಯದೆ ಮತ್ತು ದಂಡ ಕೂಡ ಕಟ್ಟದೆ ಇದ್ದದ್ದು ಪೊಲೀಸರು ಪಿತ್ತ ನೆತ್ತಿಗೇರಿಸಿ ಈ ರೀತಿಯ ಕ್ರಮ ಕೈಗೊಂಡಿದ್ದಾರೆ. ಸದ್ಯ ಯುವಕ ಈ ರೀತಿ ಹೋಗಿದ್ದರು ಎಲ್ಲಿಯೂ ಬಿದ್ದು ಪೆಟ್ಟು ಮಾಡಿಕೊಳ್ಳದೆ ಇದ್ದದ್ದು ಆತನ ಅದೃಷ್ಟವೇ ಸರಿ.

ಈ ಘಟನೆ ಕಾನ್ಪುರ ನಗರದ ಬಡ ಚೌರಾಹು ಎಂಬ ನಗರದಲ್ಲಿ ನೆಡೆದಿದ್ದು, ಈ ವೀಡಿಯೊವನ್ನು ಬೈಕಿನ ಮಾಲೀಕನ ಸ್ನೇಹಿತ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗಿದೆ.

Read more on ಪೊಲೀಸ್ police
English summary
A man in Kanpur, Uttar Pradesh was caught by police for parking illegally in the street. Traffic cops tried to tow the bike from the no-parking zone, but the rider reportedly refused to get off from the two-wheeler or pay the fine.
Story first published: Friday, March 10, 2017, 17:08 [IST]
Please Wait while comments are loading...

Latest Photos