ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಪೋರ್ಷೆ ಕಾರಿನ ಮಾಲೀಕರೊಬ್ಬರಿಗೆ ದುಬಾರಿ ಮೊತ್ತದ ದಂಡವನ್ನು ಅಹಮದಾಬಾದ್ ಪೊಲೀಸರು ವಿಧಿಸಿದ್ದಾರೆ. ಈ ಮೂಲಕ ಅಹಮದಾಬಾದ್ ಟ್ರಾಫಿಕ್ ಪೊಲೀಸರು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಸಂಚಾರಿ ನಿಯಮ ಉಲ್ಲಂಘನೆಗಾಗಿ ವಿಧಿಸಿರುವ ಆ ದುಬಾರಿ ಮೊತ್ತ ಬರೊಬ್ಬರಿ ರೂ.27 ಲಕ್ಷವಾಗಿದೆ. ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ವಿಧಿಸಲ್ಪಟ್ಟ ಅತಿ ಹೆಚ್ಚು ಮೊತ್ತ ಎಷ್ಟಿರಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಹೀಗೊಂದು ಕುತೂಹಲಕ್ಕೆ ಉತ್ತರವೇ ಅಹಮದಾಬಾದ್ ಪೊಲೀಸರು ವಿಧಿಸಿರುವ ದಂಡ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ರೂ.27 ಲಕ್ಷವೇ ಭಾರತದ ಸಂಚಾರಿ ನಿಯಮದ ಇತಿಹಾಸದಲ್ಲಿ ಟ್ರಾಫಿಕ್ ಪೊಲೀಸರು ವಿಧಿಸಿದ ಅತಿ ದುಬಾರಿ ದಂಡವಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಅಹಮದಾಬಾದ್ ಪೊಲೀಸರು ಎಂದಿನಂತೆ ತಪಾಸಣೆ ನಡೆಸುವ ವೇಳೆಯಲ್ಲಿ ನಂಬರ್ ಪ್ಲೇಟ್‌ ಇಲ್ಲದ ಪೋರ್ಷೆ 911 ಕಾರು ಕಣ್ಣಿಗೆ ಬಿದ್ದಿದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಈ ವೇಳೆ ಈ ಕಾರ್ ಅನ್ನು ತಡೆದು ತಪಾಸಣೆ ನಡೆಸಿದ್ದಾರೆ. ಕಾರಿನ ಮಾಲೀಕರು ಕಾರಿನ ದಾಖಲೆಗಳನ್ನು ಹೊಂದಿರಲಿಲ್ಲ. ಇದರಿಂದಾಗಿ ಪೊಲೀಸರು ಮಾಲೀಕರಿಗೆ ಒಟ್ಟು ರೂ.9.8 ಲಕ್ಷ ದಂಡ ವಿಧಿಸಿದ್ದರು. ಈ ಕಾರಿಗೆ ಅಂದು ನಂಬರ್ ಪ್ಲೇಟ್ ಇರಲಿಲ್ಲ. ಅಷ್ಟೇ ಅಲ್ಲ, ಅಗತ್ಯ ದಾಖಲೆಗಳೂ ಇರಲಿಲ್ಲವಂತೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಅಗತ್ಯ ದಾಖಲೆಗಳು ಅಂದರೆ ಆರ್​ಸಿ, ವಿಮಾ ಪತ್ರ, ಚಾಲನಾ ಪರವಾನಗಿ, ವಾಯುಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಸೇರಿ ಯಾವುದೇ ದಾಖಲೆ ಪತ್ರಗಳು ಇರಲಿಲ್ಲ. ತಿಂಗಳುಗಳ ನಂತರ ಪೊಲೀಸರು ದಂಡದ ಪ್ರಮಾಣವನ್ನು ಪರಿಷ್ಕರಿಸಿ ರೂ.27.68 ಲಕ್ಷಕ್ಕೆ ದಂಡವನ್ನು ಏರಿಸಿದರು.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಈ ಬಗ್ಗೆ ಟ್ವೀಟ್ ಮಾಡಿರುವ ಅಹಮದಾಬಾದ್ ಪೊಲೀಸರು, ಇದು ಸಂಚಾರ ನಿಯಮ ಉಲ್ಲಂಘನೆಗಾಗಿ ದೇಶದಲ್ಲಿ ವಿಧಿಸಲಾದ ಗರಿಷ್ಠ ಪ್ರಮಾಣದ ದಂಡ ಎಂದು ಬರೆದುಕೊಂಡಿದ್ದಾರೆ. ಈ ದಂಡವನ್ನು ಹೊಸ ಸಂಚಾರಿ ನಿಯಮದ ಪ್ರಕಾರ ಪರಿಷ್ಕರಿಸಲಾಗಿದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಪೋರ್ಷೆ ವಾಹನ ಸಂಖ್ಖೆಯನ್ನು ಜೆಹೆಚ್‍01 ಡಿಬಿ 0524 ಎಂದು ಗುರುತಿಸಲಾಗಿದೆ. ಅದೇಶದ ಪ್ರಕಾರ ಬಾಕಿ ತೆರಿಗೆ (07-ಜನವರಿ -2020 ರಿಂದ 28-ಆಗಸ್ಟ್ -2033) ರೂ.16 ಲಕ್ಷವಾಗಿದೆ. ಎಂವಿ ತೆರಿಗೆಗೆ ವಿಧಿಸುವ ಬಡ್ಡಿ ರೂ.7,68,000 ಲಕ್ಷವಾದರೆ, ಇನ್ನೂ ದಂಡ ರೂ.4 ಲಕ್ಷವಾಗಿದೆ. ಹೀಗೆ ಎಲ್ಲಾವನ್ನು ಸೇರಿಸಿ ಒಟ್ಟು ದಂಡದ ಮೊತ್ತ ರೂ.27.68 ಲಕ್ಷಗಳಾಗಿದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ವಶಕ್ಕೆ ಪಡೆದಿರುವ ಕಾರು ಪೋರ್ಷೆ 911 ಕ್ಯಾರೆರಾ ಎಸ್ ಮಾದರಿಯಾಗಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.82 ಕೋಟಿಗಳಾಗಿದೆ. ಅಹಮದಾಬಾದ್ ಟ್ರಾಫಿಕ್ ಪೊಲೀಸರ ಟ್ವಿಟರ್ ಪೋಸ್ಟ್‌ನಲ್ಲಿರುವ ಕಾರು ಹಳೆಯ ತಲೆಮಾರಿನ ಪೋರ್ಷೆ 911 ಕ್ಯಾರೆರಾ ಎಸ್ ಆಗಿದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಈ ಕಾರು 3.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಫ್ಲಾಟ್-ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 6500 ಆರ್‍‍ಪಿ‍ಎಂನಲ್ಲಿ 444 ಬಿ‍‍ಹೆಚ್‍‍ಪಿ ಪವರ್ ಹಾಗೂ 2300 ಆರ್‍‍ಪಿ‍ಎಂನಲ್ಲಿ 530 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಇದು ಕಾರಿನ ಹಿಂದಿರುವ ವ್ಹೀಲ್‍‍ಗಳಿಗೆ ಪವರ್ ನೀಡುತ್ತದೆ. ಈ ಕಾರು ಆಕರ್ಷಕವಾದ ಪರ್ಫಾಮೆನ್ಸ್ ನೀಡುತ್ತದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 307 ಕಿ.ಮೀಗಳಾಗಿದೆ. ಪೋರ್ಷೆ 911 ಕ್ಯಾರೆರಾ ಎಸ್ ಕಾರು 0 - 100 ಕಿ.ಮೀ ವೇಗವನ್ನು 3.7 ಸೆಕೆಂಡುಗಳಲ್ಲಿ ಕ್ರಮಿಸಿದರೆ, 200 ಕಿ.ಮೀ ವೇಗವನ್ನು 12.4 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಪೋರ್ಷೆ 911 ಜರ್ಮನ್ ಮೂಲದ ಕಂಪನಿಯ ಸರಣಿಯಲ್ಲಿರುವ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ. ಗಮನ ಸೆಳೆಯುವ ಪರ್ಫಾಮೆನ್ಸ್ ನೊಂದಿಗೆ ಈ ಕಾರು ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ಹೊಂದಿದೆ. ಕಂಪನಿಯು ಇತ್ತೀಚೆಗೆ ಈ ಸೂಪರ್ ಕಾರಿನ ಎರಡನೇ ತಲೆಮಾರಿನ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗಿವೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಈ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ರಸ್ತೆ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಳೆದ ವರ್ಷ ನೂತನ ಸಂಚಾರಿ ನಿಯಮವನ್ನು ಜಾರಿಗೊಳಿಸಿತ್ತು.

ದಂಡ ವಿಧಿಸುವುದರಲ್ಲಿ ಹೊಸ ದಾಖಲೆ ಬರೆದ ಅಹಮದಾಬಾದ್ ಪೊಲೀಸರು

ನೂತನ ಸಂಚಾರಿ ನಿಯಮ ಜಾರಿಯಾದ ಬಳಿಕ ಭಾರೀ ಪ್ರಮಾಣದಲ್ಲಿ ದುಬಾರಿ ದಂಡವನ್ನು ವಿಧಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಅದೇ ಸಾಲಿಗೆ ಅಹಮದಾಬಾದ್ ಪೊಲೀಸರು ದುಬಾರಿ ದಂಡ ವಿಧಿಸಿರುವ ಈ ಪ್ರಕರಣವು ಸೇರಿದೆ.

Most Read Articles

Kannada
English summary
Porsche Carrera S Owner Fined Rs 27.68 Lakh For Traffic Violations: Details - Read in Kannada
Story first published: Thursday, January 9, 2020, 12:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X