ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?
ಅನುಷ್ಕಾ ಶೆಟ್ಟಿ 36ನೇ ಹುಟ್ಟುಹಬ್ಬದಂದು ನಟ ಪ್ರಭಾಸ್ ಐಷಾರಾಮಿ ಗಿಫ್ಟ್ ಒಂದನ್ನು ನೀಡಿರುವ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಬಾಹುಬಲಿ-2 ಚಿತ್ರದ ಮೂಲಕ ರಾಷ್ಟ್ರಾದ್ಯಂತ ಭಾರಿ ಬೇಡಿಕೆಯ ನಟನಾಗಿರುವ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮಾಂಕುರದ ಗುಸು-ಗುಸು ಸುದ್ದಿಗಳು ಹರಿದಾಟುತ್ತಿದ್ದು, ಹೀಗಿರುವಾಗಲೇ ಅನುಷ್ಕಾ ಶೆಟ್ಟಿ 36ನೇ ಹುಟ್ಟುಹಬ್ಬದಂದು ನಟ ಪ್ರಭಾಸ್ ಐಷಾರಾಮಿ ಗಿಫ್ಟ್ ಒಂದನ್ನು ನೀಡಿರುವ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಅನುಷ್ಕಾ ಶೆಟ್ಟಿ ಮೊನ್ನೆಯಷ್ಟೇ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಕಾರ್ ಡ್ರೈವರ್‌ಗೆ ದುಬಾರಿ ಬೆಲೆಯ ಗಿಫ್ಟ್ ನೀಡಿ ಭಾರೀ ಚರ್ಚೆಗೆ ಕಾರಣರಾಗಿದ್ದರು.

ಆದ್ರೆ ಲೆಟೆಸ್ಟ್ ಏನೆಂದ್ರೇ ಅನುಷ್ಕಾ ಶೆಟ್ಟಿಗೆ ನಟ ಪ್ರಭಾಸ್ ಕೂಡಾ ಐಷಾರಾಮಿ ಬಿಎಂಡಬ್ಲ್ಯು ಕಾರುನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಇದರಿಂದ ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಬಗೆಗಿನ ಪ್ರೇಮಾಂಕುರದ ಬಗ್ಗೆ ಮತ್ತಷ್ಟು ಚರ್ಚೆ ನಡೆಯುತ್ತಿವೆ.

ಅನುಷ್ಕಾ ಶೆಟ್ಟಿಯವರ ಹುಟ್ಟು ಹಬ್ಬಕ್ಕೆ ಬಾಹುಬಲಿ ಪ್ರಭಾಸ್ ಏನು ಗಿಫ್ಟ್ ಕೊಟ್ಟಿರಬಹುದೆಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಮಾಧ್ಯಮವೊಂದರ ವರದಿ ಪ್ರಕಾರ ಪ್ರಭಾಸ್ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಅನುಷ್ಕಾ ಶೆಟ್ಟಿಯವರಿಗೆ ಗಿಫ್ಟ್ ಆಗಿ ನೀಡಿದ್ದಾರೆನ್ನಲಾಗಿದೆ.

ಈ ಹಿಂದೆ ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದ ಪ್ರಭಾಸ್ ತಾನಿನ್ನೂ ಮದುವೆಯಾಗುವ ಕುರಿತು ಯೋಜನೆಯನ್ನು ಮಾಡಿಲ್ಲವೆಂದಿದ್ದರು. ಆದ್ರೆ ಇದೀಗ 52 ಲಕ್ಷ ಮೌಲ್ಯದ ಬಿಎಂಡಬ್ಲ್ಯು 5 ಸೀರಿಸ್ ಕಾರುನ್ನು ಉಡುಗೊರೆ ನೀಡಿದ್ದಾರೆ.
ತಪ್ಪದೇ ಓದಿ-ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

ಬಾಹುಬಲಿ ಚಿತ್ರದ ನಂತರ ಇವರಿಬ್ಬರ ಪ್ರೇಮಕತೆ ಎಲ್ಲೆಡೆ ಹಾಟ್ ಟಾಪಿಕ್ ಆಗಿತ್ತು. ಹೀಗಾಗಿ ಈ ಬಗ್ಗೆ ಮಾಧ್ಯಮ ಪ್ರಶ್ನೆಗೆ ಹುಷಾರ್ ಆಗಿ ಉತ್ತರ ನೀಡುವ ಮೂಲಕ ನಾವಿಬ್ರು ಕ್ಲೋಸ್ ಫ್ರೇಂಡ್ಸ್ ಅಂತ್ಲೇ ಪ್ರಭಾಸ್ ಹಾಗು ಅನುಷ್ಕಾ ಹೇಳಿಕೊಂಡು ಬಂದಿದ್ರು.

ಸದ್ಯ ಪ್ರಭಾಸ್ ಸಿನಿಮಾ ರಂಗಕ್ಕೆ ಕಾಲಿಟ್ಟು 15 ವರ್ಷಗಳಾಗಿದ್ದು, ಸದ್ಯ ‘ಸಾಹೋ' ಚಿತ್ರದಲ್ಲಿ ಶ್ರದ್ದಾ ಕಪೂರ್ ಜೊತೆ ಪ್ರಭಾಸ್ ಅಭಿನಯಿಸುತ್ತಿದ್ದರೆ, ಹಾಗೆಯೇ ಅನುಷ್ಕಾ ಶೆಟ್ಟಿ ‘ಭಾಗಮತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
Trending on Kannada DriveSpark :
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!
ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!
ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಕಾರನ್ನು ಎಳೆದೊಯ್ದ ಟ್ರಾಫಿಕ್ ಪೊಲೀಸರು..!!


Click it and Unblock the Notifications








