ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

Written By:

ಬಸ್ ಮತ್ತು ಟೆಂಪೋ ನಡುವೆ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, 12 ಮಂದಿ ತೀವ್ರ ಗಾಯಗೊಂಡ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ನೆಡೆದಿದೆ.

To Follow DriveSpark On Facebook, Click The Like Button
ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾಂವ್ ಪ್ರದೇಶದಲ್ಲಿ ನಿಂತಿದ್ದ ಟೆಂಪೋಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟು, 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡ ದುರ್ಘಟನೆ ನೆಡೆದಿದೆ. ಬಸ್ ಚಾಲಕ ಟೆಂಪೋ ನಿಂತಿರುವುದನ್ನು ಗಮನಿಸದೆ ಈ ದುರ್ಘಟನೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

ಈ ಅಪಘಾತ ನಸುಕಿನಲ್ಲಿ ಸಂಭವಿಸಿದ್ದು, ಈ ಘಟನೆ ನೆಡೆದ ಸಮಯದಲ್ಲಿ ಈ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿತ್ತು ಎಂಬ ಮಾಹಿತಿ ಹೊರಬಂದಿದೆ.

ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

ಪುಣೆಯಿಂದ ನಾಸಿಕ್‍ನ ತ್ರಯಂಬಕೇಶ್ವರ್‍ಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ತೆರಳುತ್ತಿದ್ದಾಗ ಪುಣೆಯಿಂದ 77 ಕಿ.ಮೀ. ದೂರದಲ್ಲಿ ಮುಂಜಾನೆ 1.45ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ನಾರಾಯಣಗಾಂವ್ ಪೊಲೀಸರು ತಿಳಿಸಿದ್ದಾರೆ.

ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

"ಸತ್ತವರ ಗುರುತನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ ಹಾಗು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ" ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ; 9 ಮಂದಿ ಸಾವು

ಮಳೆಗಾಲದ ಸಮಯದಲ್ಲಿ ಮುಂದಿರುವ ವಸ್ತು ಕಾಣಿಸದೆ ಇರುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ವಿಶೇಷವಾಗಿ ಕತ್ತಲೆಯ ಸಮಯದಲ್ಲಿ ಚಾಲಕ ಹೆಚ್ಚು ಜಾಗರೂಕನಾಗಿ ಇರಬೇಕಾಗುತ್ತದೆ. ಹೆಡ್‌ಲೈಟ್‌ನಿಂದ ಚೆಲ್ಲುವ ಬೆಳಕು ಸಾಕಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂಬ ಮಾತುಗಳು ಸಹ ಆಗಾಗ ಕೇಳಿಬರುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

Read more on ಅಪಘಾತ accident
English summary
The dangers of monsoon begin, as the latest news from Pune is that of an accident that involved a bus and a Tempo. The accident killed nine and left 12 others injured.
Story first published: Monday, August 28, 2017, 17:54 [IST]
Please Wait while comments are loading...

Latest Photos