ನಾಯಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

Written By:

ಸಣ್ಣ ತಳಿ ನಾಯಿಯನ್ನು ಐಷಾರಾಮಿ ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದ ಕಾರಣಕ್ಕೆ 'ರಿಚ್ ಕಿಡ್ಸ್ ಒಫ್ ಲಂಡನ್' ಇನ್‌ಸ್ಟಗ್ರಾಂ ಖಾತೆ ವಿರುದ್ಧ ಎಲ್ಲರು ಕಿಡಿಕಾರಿದ್ದಾರೆ.

ನಾಯಿ ಮರಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

ಐಷಾರಾಮಿ ಸೂಪರ್ ಕಾರನ್ನು ಸ್ವಚ್ಛಗೊಳಿಸಲು ಸಣ್ಣ ತಳಿಯ ನಾಯಿಗಳನ್ನು ಬಳಸುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಇನ್‌ಸ್ಟಗ್ರಾಂ ಬಳಕೆದಾರರ ಗುಂಪು 'ರಿಚ್ ಕಿಡ್ಸ್ ಒಫ್ ಲಂಡನ್' ಪ್ರಾಣಿ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ನಾಯಿ ಮರಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

ಇತ್ತೀಚಿಗೆ ಈ ಇನ್‌ಸ್ಟಗ್ರಾಂ ಬಳಕೆದಾರರ ಗುಂಪು ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಈ ವಿಡಿಯೋದಲ್ಲಿ ಸಣ್ಣ ತಳಿಯ ನಾಯಿಮರಿಯೊಂದನ್ನು ಬಳಸಿ ಮಸೆರಟಿ ಎಂಸಿ 12 ಸೂಪರ್ ಕಾರನ್ನು ಸ್ವಚ್ಛಗೊಳಿಸಲಾಗುತ್ತಿದೆ.

ನಾಯಿ ಮರಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

ಈ ವಿಡಿಯೋ ಅತ್ಯಂತ ಅಮಾನವೀಯವಾಗಿದ್ದು, ಇದರ ವಿರುದ್ಧ ತಾವು ಹೊರಾಡುವುದಾಗಿ ಪ್ರಾಣಿ ಪ್ರೇಮಿಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

"6.0-ಲೀಟರ್ ಮಸೆರಾಟಿ ಎಂಸಿ 12 ಕಾರನ್ನು ಸ್ವಚ್ಛಗೊಳಿಸಲು ಇರುವ ಏಕೈಕ ಮಾರ್ಗ 100% ನೈಸರ್ಗಿಕವಾಗಿ ಸಿಗುವ ನಾಯಿ ಮರಿಯಾಗಿದ್ದು, ಇದರಿಂದ ಹೆಚ್ಚು ಹೊಳಪು ಕಾರಿಗೆ ಬರಲಿದೆ" ಎಂಬ ಶೀರ್ಷಿಕೆ ಇರುವ ಈ ವಿಡಿಯೋ ಎಲ್ಲರಿಗೂ ಕೋಪ ತರಿಸಿರುವುದಂತೂ ಸತ್ಯ.

ನಾಯಿ ಮರಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

"ನಾಯಿಗೆ ಯಾವುದೇ ರೀತಿಯ ತೊಂದರೆ ಕೊಡಲಾಗಿಲ್ಲ, ಬದಲಾಗಿ ನಾಯಿ ಹೆಚ್ಚು ಖುಷಿಯಾಗಿತ್ತು" ಎಂದು ನಾಯಿಯ ಮಾಲೀಕರು ಮತ್ತು ವೀಡಿಯೊವನ್ನು ಚಿತ್ರಿಸಿದವರು ಹೇಳಿಕೊಂಡಿದ್ದಾರೆ.

ನಾಯಿ ಮರಿಯನ್ನು ಕಾರು ಸ್ವಚ್ಛಗೊಳಿಸಲು ಉಪಯೋಗಿಸಿದರು : ವಿಡಿಯೋ ವೈರಲ್

ಮುಂದುವರೆಸಿ, "ನಿಮಗೆಲ್ಲರಿಗೂ ಹಾಸ್ಯಪ್ರಜ್ಞೆ ಇಲ್ಲದೆ ಇರುವುದು ನನಗೆ ಹೆಚ್ಚು ದುಃಖ ಉಂಟು ಮಾಡಿದ್ದು, ಇದಕ್ಕಿಂತ ಚನ್ನಾಗಿರುವ ರೀತಿಯಲ್ಲಿ ಕಾರನ್ನು ಸ್ವಚ್ಛಗೊಳಿಸುವ ರೀತಿ ಗೊತ್ತಿದ್ದರೆ ತಿಳಿಸಿ" ಎಂದು ಕಾಮೆಂಟ್ ಮಾಡಿದ್ದಾರೆ.

English summary
Read in Kannada about Rich kid uses Puppy to clean Maserati MC car. To know more about this issue click on this link
Please Wait while comments are loading...

Latest Photos