ಬೈಕ್‌ಗೆ ಗುಡ್‌ಬೈ ಹೇಳಿ; ಬಂದಿದೆ ಯಾಂತ್ರೀಕೃತ ರಾಕೆಟ್ ಸ್ಕೇಟ್

By Nagaraja

ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನಸಾಮಾನ್ಯರು ಸದಾ ಕೊರಗುತ್ತಲೇ ಇದ್ದಾರೆ. ಇಂತಹ ಸಮಸ್ಯೆಗಳನ್ನು ಎಷ್ಟು ದಿನ ಸಹಿಸಿಕೊಳ್ಳುತ್ತೀರಾ? ಚಿಂತೆ ಮಾಡಬೇಡಿ 500 ಅಮೆರಿಕನ್ ಡಾಲರ್ (ಅಂದಾಜು 30 ಸಾವಿರು ರುಪಾಯಿ) ಖರ್ಚು ಮಾಡಿದರೆ ಸಾಕು. ಅತ್ಯಾಧುನಿಕ ಯಾಂತ್ರೀಕೃತ ರಾಕೆಟ್ ಸ್ಕೇಟ್ ನಿಮ್ಮದಾಗಿಸಬಹುದು.

ಇನ್ನು ನಿಮ್ಮ ದೈನಂದಿನ ಚಟುವಟಿಕೆಗಳ ನಿರ್ವಹಣೆ ಅಥವಾ ಕಚೇರಿಗೆ ತೆರಳುವುದು ತುಂಬಾನೇ ಸುಲಭ. ಇದು ನೀವು ಸಾಧಾರಣವಾಗಿ ಬಳಕೆ ಮಾಡುವ ಪಾದರಕ್ಷೆಗಳ ಕೊರತೆಯನ್ನು ನೀಗಿಲಿದೆ ಎಂಬುದು ಸಹ ಮಹತ್ವವೆನಿಸುತ್ತದೆ. ಆಕ್ಟನ್ (Acton) ಎಂಬ ಸಂಸ್ಥೆಯು ರಾಕೆಟ್ ಸ್ಕೇಟ್ ಅಭಿವೃದ್ಧಿಪಡಿಸಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ಲಾಸ್ ಏಜಂಲೀಸ್ ಸಂಶೋಧಕರು ಈ ಅತಿ ನೂತನ ಯಾತ್ರೀಕೃತ ರೋಲರ್ ಸ್ಕೇಟಿಂಗ್ ಕಂಡುಹುಡುಕಿದ್ದಾರೆ. ಇದು ಕಾಲಿನ ಚಲನವಲನಗಳನ್ನು ಮಾನೀಟರು ಮಾಡಿಕೊಂಡು ಚಲಿಸಲಿದೆ. ಅಂದರೆ ನೀವು ಬಯಸಿದ ರೀತಿಯಲ್ಲಿ ಹಿಂದೂ ಮುಂದಕ್ಕೆ ಚಲಿಸಬಹುದು.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ವೇಗವರ್ಧನೆಗಾಗಿ ಮುಂದಕ್ಕೆ ಬಾಗಿದರೆ ಸಾಕು. ಹಾಗೆಯೇ ಹಿಂದಕ್ಕೆ ಬಾಗಿದರೆ ಬ್ರೇಕ್ ಬೀಳಲಿದೆ. ಆರಂಭದಲ್ಲಿ ಇದು ಸ್ವಲ್ಪ ಕಷ್ಟವೆನಿಸಿದರೂ ಕೆಲವೇ ದಿನಗಳಲ್ಲಿ ಅಭ್ಯಾಸಿಸಬಹುದಾಗಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ವಿದ್ಯುತ್ ನಿಯಂತ್ರಿತ ಈ ರಾಕೆಟ್ ಸ್ಕೇಟ್‌ನಲ್ಲಿ ಎರಡು ಮೋಟಾರು ಹಬ್‌ಗಳು ಇರಲಿದೆ. ಇದರಲ್ಲಿ ಆನ್ ಬೋರ್ಡ್ ಮೈಕ್ರೋಪ್ರೊಸೆಸರ್ ಹಾಗೂ ಲಿಥಿಯಂ ಇಯಾನ್ ಬ್ಯಾಟರಿ ನಿಯಂತ್ರಣ ಪ್ರಮುಖವಾಗಿರಲಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ಇದಕ್ಕೆ ಯಾವುದೇ ರಿಮೋಟ್ ಕಂಟ್ರೋಲರ್ ಅಥವಾ ಸಂಪೂರ್ಣ ವೈರ್‌ಲೆಸ್ ಎಂದೇ ವ್ಯಾಖ್ಯಾನಿಸಬಹುದು. ಇದು ಮೂರು ಮಾದರಿಗಳಲ್ಲಿ ದೊರಕಲಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ಇದರ ಲಿಥಿಯಂ ಇಯಾನ್ ಬ್ಯಾಟರಿ 1.5 ತಾಸುಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಅಂತೆಯೇ ಗರಿಷ್ಠ ಗಂಟೆಗೆ 19 ಕೀ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ಮಗದೊಂದು ಆಕರ್ಷಕ ವೈಶಿಷ್ಟ್ಯವೆಂದರೆ ಇದರ ಬಳಕೆಯಿಲ್ಲದಿದ್ದಾಗ ಮನೆಯ ಭದ್ರತಾ ರೋಬೊಟ್ ಆಗಿಯೂ ಬಳಕೆ ಮಾಡಬಹುದಾಗಿದೆ.

ರಾಕೆಟ್ ಸ್ಕೇಟ್; ಬಳಕೆ ತುಂಬಾನೇ ಸರಳ

ಒಟ್ಟಾರೆಯಾಗಿ ರಾಕೆಟ್ ಸ್ಕೇಟ್ ಬಳಕೆಯೊಂದಿಗೆ ಇನ್ನು ಮುಂದೆ ಮೆಟ್ಟಲು ಏರಿಳಿಯುವುದು, ಓಡಾಡುವುದು ಎಲ್ಲವೂ ತುಂಬಾನೇ ಸುಲಭ. ಸ್ಕೇಟ್ ನಿರ್ವಹಣೆಗಾಗಿ ವಿಶೇಷ ಅಪ್ಲಿಕೇಷನ್ ಸೌಲಭ್ಯ ಸಹ ಕೊಡಲಾಗಿದೆ. ಇದರಲ್ಲಿ ಸ್ಕೇಟ್ ಟ್ರ್ಯಾಕಿಂಗ್, ಗೇಮ್ ಹಾಗೂ ಸಾಮಾಜಿಕ ಚಟುವಟಿಕೆಗಳ ಸೌಲಭ್ಯವಿರಲಿದೆ.

ವೀಡಿಯೋ ವೀಕ್ಷಿಸಿ

Most Read Articles

Kannada
English summary
If there is anybody out there who watched Star Trek or Back To The Future, and wondered if you could have one of those ultra-cool gadgets? Well, we are not quite there yet, but a company named Action has shown positive signs by introducing what they call Rocket Skates.
Story first published: Saturday, July 12, 2014, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X