ರೋಲ್ಸ್ ರಾಯ್ಸ್ 14 ಅತಿ ದುಬಾರಿ ಕಾರುಗಳು

Written By:

ವಿಶ್ವದ ಅತಿ ಪುರಾತನ ಹಾಗೂ ಐಕಾನಿಕ್ ಕಾರು ಸಂಸ್ಥೆಗಳಲ್ಲಿ ಒಂದಾಗಿರುವ ಬ್ರಿಟನ್‌ನ ರೋಲ್ಸ್ ರಾಯ್ಸ್ ಕಂಪನಿಯನ್ನು 1906 ಮಾರ್ಚ್ 15ರಂದು ಚಾರ್ಲ್ಸ್ ಸ್ಟಿವರ್ಟ್ ರೋಲ್ಸ್ ಮತ್ತು ಸರ್ ಫ್ರೆಡೆರಿಕ್ ಹೆನ್ರಿ ರೋಲ್ಸ್ ಎಂಬವರು ಸೇರಿ ಸ್ಥಾಪಿಸಿದ್ದರು.

Also Read: ಟಿಪ್ಪು ಕೀರ್ತಿ ಪತಾಕೆ ಹಾರಿಸಿದ ರೋಲ್ಸ್ ರಾಯ್ಸ್ ಮೈಸೂರು ಘೋಸ್ಟ್ ಕಲೆಕ್ಷನ್

ಹೀಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ರೋಲ್ಸ್ ರಾಯ್ಸ್ ಅನೇಕ ಅತ್ಯುತ್ತಮ ಕಾರುಗಳನ್ನು ಕೊಡುಗೆಯಾಗಿ ನೀಡಿದೆ. ಪ್ರಸ್ತುತ ಬಿಎಂಡಬ್ಲ್ಯು ಒಡೆತನದಲ್ಲಿರುವ ರೋಲ್ಸ್ ರಾಯ್ಸ್ ಸಂಸ್ಥೆಯ 14 ಅತಿ ದುಬಾರಿ ಮಾದರಿಗಳ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ. ಈ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

01. ರೋಲ್ಸ್ ರಾಯ್ಸ್ ಫ್ಯಾಂಟಮ್

01. ರೋಲ್ಸ್ ರಾಯ್ಸ್ ಫ್ಯಾಂಟಮ್

ಬೆಲೆ: 8.2 ಮಿಲಿಯನ್ ಅಮೆರಿಕನ್ ಡಾಲರ್

ಚಿನ್ನ ಲೇಪಿತ ರೋಲ್ಸ್ ರಾಯ್ಸ್ ಫಾಂಟಂ ಕಾರನ್ನು ದುಬೈ ಮೂಲದ ಉದ್ಯಮಿಯೊಬ್ಬರು ಖರೀದಿಸಿದ್ದಾರೆ. ನಿಮಗಿದು ಗೊತ್ತೇ? ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಈ ಕಾರಿನ ವಿವಿಧ ಭಾಗಗಳಲ್ಲಾಗಿ 24 ಕೆ.ಜಿಯಷ್ಟು 18 ಕ್ಯಾರೆಟ್ ಚಿನ್ನವನ್ನು ಬಳಕೆ ಮಾಡಲಾಗಿದೆ. ಅಷ್ಟೇ ಯಾಕೆ ಶತ್ರುವಿನಿಂದ ರಕ್ಷಣೆಗಾಗಿ ವಿಶೇಷ ಆರ್ಮಡ್ ವ್ಯೂಹ ರಚನೆ ಕೂಡಾ ಮಾಡಲಾಗಿದೆ.

2. 1904 ರೋಲ್ಸ್ ರಾಯ್ಸ್ 10 ಎಚ್‌ಪಿ

2. 1904 ರೋಲ್ಸ್ ರಾಯ್ಸ್ 10 ಎಚ್‌ಪಿ

ಬೆಲೆ: 7.25 ಮಿಲಿಯನ್ ಅಮೆರಿಕನ್

ಕ್ಲಾಸಿಕ್ ಕಾರುಗಳಿಗೆ ಹೆಸರುವಾಸಿಯಾಗಿರುವ ರೋಲ್ಸ್ ರಾಯ್ಸ್‌ನ ಈ ವಿಂಟೇಜ್ ಕಾರು 7.25 ಅಮೆರಿಕ್ ಡಾಲರ್ ಗಳಷ್ಟು ಬೆಲೆ ಬಾಳುತ್ತದೆ. ರೋಲ್ಸ್ ರಾಯ್ಸ್ ಸಂಸ್ಥೆಯ ಸ್ಥಾಪಕರಾಗಿರುವ ಚಾರ್ಲ್ ರಾಯ್ಸ್ ಅವರೇ ಇದನ್ನು ನಿರ್ಮಿಸಿದ್ದಾರೆ. ಒಟ್ಟು ಇಂತಹ 17 ಗಾಡಿಗಳನ್ನು ತಯಾರಿಸಲಾಗಿದೆ. ಇದರಲ್ಲಿ 1.8 ಲೀಟರ್ ಎಂಜಿನ್ ಆಳವಡಿಸಲಾಗಿದ್ದು 10 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ 3 ಸ್ಪೀಡ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

3. 1912 ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್

3. 1912 ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್

ಬೆಲೆ: 3 ಮಿಲಿಯನ್ ಅಮೆರಿಕನ್ ಡಾಲರ್

ಈ ಅತಿ ವಿಶಿಷ್ಟ ರೋಲ್ಸ್ ರಾಯ್ಸ್ ಕಾರು ಎಲ್ಲ ಅರ್ಥದಲ್ಲೂ ಪುರಾತನ ರಾಜ ಮನೆತನದವರಿಗೆ ಹೇಳಿ ಮಾಡಿಸಿದಂತಿದೆ. ಮುಂಭಾಗದಲ್ಲಿ ಎದ್ದು ಕಾಣಿಸುವ ಹೆಡ್ ಲೈಟ್, ಬದಿಯಲ್ಲಿ ಶಕ್ತಿ ತುಂಬುವ ಅಲಾಯ್ ವೀಲ್ ಹಾಗೂ ಸಂಪೂರ್ಣ ಆವರಿಸ್ಪಟ್ಟ ಕ್ಯಾಬಿನ್ ಪ್ರದೇಶವು ಅತಿ ವಿಶಿಷ್ಟವಾಗಿಸಿದೆ.

04. ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ

04. ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕೂಪೆ

ಬೆಲೆ: 1.6 ಮಿಲಿಯನ್ ಅಮೆರಿಕನ್ ಡಾಲರ್

ರೋಲ್ಸ್ ರಾಯ್ಸ್ ಕ್ಲಾಸಿಕ್ ಕಾರುಗಳಿಗೆ ಸ್ವಲ್ಪ ವಿಶ್ರಾಂತಿ. ಇನ್ನು ಸ್ವಲ್ಪ ಆಧುನಿಕ ಕಾರುಗಳತ್ತ ಕಣ್ಣಾಯಿಸೋಣವೇ. ಎಲ್ಟಾನ್ ಜಾನ್ ಏಡ್ಸ್ ಸಹಾಯಾರ್ಥ ಸಂಸ್ಥೆಗೆ ಏರ್ಪಡಿಸಲಾಗಿದ್ದ ಹರಾಜಿನಲ್ಲಿ ಈ ರೋಲ್ಸ್ ರಾಯ್ಸ್ ಕಾರು ಗರಿಷ್ಠ ಮೊತ್ತವನ್ನು ಸಂಗ್ರಹಿಸಿದೆ. ಪ್ರಸ್ತುತ ಕಾರಿನಡಿಯಲ್ಲಿ 6.75 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, 453 ಅಶ್ವಶಕ್ತಿ ಉತ್ಪಾದಿಸುತ್ತದೆ.

05. ರೋಲ್ಸ್ ರಾಯ್ಸ್ ಫ್ಯಾಂಟಮ್ ಇಯರ್ ಆಫ್ ದಿ ಡ್ರಾಗನ್ ಎಡಿಷನ್

05. ರೋಲ್ಸ್ ರಾಯ್ಸ್ ಫ್ಯಾಂಟಮ್ ಇಯರ್ ಆಫ್ ದಿ ಡ್ರಾಗನ್ ಎಡಿಷನ್

ಬೆಲೆ: 1.2 ಮಿಲಿಯನ್ ಅಮೆರಿಕನ್ ಡಾಲರ್

ರೋಲ್ಸ್ ರಾಯ್ಸ್ ಅತಿ ವಿರಳ ಕಾರು ಸಂಗ್ರಹಾಲಯದಲ್ಲಿ ಡ್ರಾಗನ್ ಎಡಿಷನ್ ಒಂದಾಗಿದೆ. ಈ ವಿಶೇಷ ಆವೃತ್ತಿ ಬಿಡುಗಡೆಯಾದ ಎರಡು ತಿಂಗಳಲ್ಲೇ ಎಲ್ಲ ಯುನಿಟ್ ಗಳ ಮಾರಾಟ ಕಂಡಿತ್ತು.

06. ರೋಲ್ಸ್ ರಾಯ್ಸ್ ವಿಶೇಷ ಆವೃತ್ತಿ - ಡ್ರಾಪ್ ಹೆಡ್ ಕೂಪೆ

06. ರೋಲ್ಸ್ ರಾಯ್ಸ್ ವಿಶೇಷ ಆವೃತ್ತಿ - ಡ್ರಾಪ್ ಹೆಡ್ ಕೂಪೆ

ಬೆಲೆ: 1 ಮಿಲಿಯನ್ ಅಮೆರಿಕನ್ ಡಾಲರ್

ಜಗತ್ತಿನ ಅತ್ಯಂತ ಶಕ್ತಿಶಾಲಿ 30 ವ್ಯಕ್ತಿಗಳಿಗಾಗಿ ನಿರ್ಮಿಸಲಾಗಿರುವ ರೋಲ್ಸ್ ರಾಯ್ಸ್ ಡಾಪ್ ಹೆಡ್ ಕೂಪೆ ಸೀಮಿತ ಆವೃತ್ತಿಯ ಪ್ರಮುಖ ಸೂತ್ರಧಾರಿ ಇಟಲಿಯ ಖ್ಯಾತ ವಿನ್ಯಾಸಗಾರ ಬಿಜಾನ್ ಪಕ್ಜಾದ್ (Bijan Pakzad) ಅವರಾಗಿದ್ದಾರೆ. ಸಾಮನ್ಯಾ ರೋಲ್ಸ್ ರಾಯ್ಸ್ ಗಿಂತಲೂ ವಿಭಿನ್ನವಾಗಿ ಇದು ವಿಶೇಷ ಹಳದಿ ಮಿಶ್ರಣದ ದೇಹ ರಚನೆಯನ್ನು ಪಡೆದುಕೊಂಡಿದೆ.

07. ರೋಲ್ಸ್ ರಾಯ್ಸ್ ಫ್ಯಾಂಟಮ್ ಹೀರ್ಸ್ ಬಿ12

07. ರೋಲ್ಸ್ ರಾಯ್ಸ್ ಫ್ಯಾಂಟಮ್ ಹೀರ್ಸ್ ಬಿ12

ಬೆಲೆ: 662,000 ಅಮೆರಿಕನ್ ಡಾಲರ್

ಶವದ ಗಾಡಿಯೂ ಇಷ್ಟೊಂದು ದುಬಾರಿಯೇ ? ಹೌದು ಈ 23 ಅಡಿ ಉದ್ದದ ರೋಲ್ಸ್ ರಾಯ್ಸ್ ಬಿ12 ಹೀರ್ಸ್ (Hearse) ಅಥವಾ ಶವದ ಗಾಡಿಯನ್ನು ಗಣ್ಯ ವ್ಯಕ್ತಿಗಳ ಮರಣದ ಬಳಿಕ ಅಂತಿಮ ಯಾತ್ರೆಗಾಗಿ ವಿಶೇಷವಾಗಿ ನಿರ್ಮಿಸಲಾಗಿದೆ. ಇದರಲ್ಲಿ 6.75 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದೆ.

08. ರೋಲ್ಸ್ ರಾಯ್ಸ್ ಆಲ್ ಕಾರ್ಬನ್ ಫೈಬರ್ ಫ್ಯಾಂಟಮ್ ಕೂಪೆ

08. ರೋಲ್ಸ್ ರಾಯ್ಸ್ ಆಲ್ ಕಾರ್ಬನ್ ಫೈಬರ್ ಫ್ಯಾಂಟಮ್ ಕೂಪೆ

ಬೆಲೆ: 420000 ಅಮೆರಿಕನ್ ಡಾಲರ್

ಕ್ಯಾಲಿಫೋರ್ನಿಯಾ ತಳಹದಿಯ ಸಿಂಬಾಲಿಕ್ ಮೋಟಾರ್ ಕಾರು ಕಂಪನಿ ವಿನ್ಯಾಸಿತ ರೋಲ್ಸ್ ರಾಯ್ಸ್ ಆಲ್ ಕಾರ್ಬನ್ ಫೈಬರ್ ಫ್ಯಾಂಟಮ್ ಕೂಪೆ ಕಾರು ಹೆಚ್ಚಿನ ಕ್ರೀಡಾತ್ಮಕ ಶೈಲಿಯನ್ನು ಮೈಗೂಡಿಸಿ ಬಂದಿದೆ. ಕಾರ್ಬನ್ ಫೈಬರ್ ದೇಹ ರಚನೆಯಿಂದ ಕಾರಿನ ಒಟ್ಟಾರೆ ಭಾರ ಗಣನೀಯವಾಗಿ ಕುಸಿತ ಕಂಡಿದೆ. ಇದರಲ್ಲಿ 6.75 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, 453 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಆರು ಸ್ಪೀಡ್ ಆಟೋ ಗೇರ್ ಬಾಕ್ಸ್ ಇದರಲ್ಲಿದೆ.

09. ರೋಲ್ಸ್ ರಾಯ್ಸ್ ಫ್ಯಾಂಟಮ್ ಆರ್ಮರ್ಡ್ ಎಡಿಷನ್

09. ರೋಲ್ಸ್ ರಾಯ್ಸ್ ಫ್ಯಾಂಟಮ್ ಆರ್ಮರ್ಡ್ ಎಡಿಷನ್

ನಿಮಲ್ಲಿ ಯಾರಿಗಾದರೂ ಜೀವ ಬೆದರಿಕೆಯಿದೆಯೇ? ಹಾಗಿದ್ದರೆ ಸಂಪೂರ್ಣ ಭದ್ರತೆ ಒದಗಿಸುವ ರೋಲ್ಸ್ ರಾಯ್ಸ್ ಫ್ಯಾಂಟಮ್ ಆರ್ಮರ್ಡ್ ಎಡಿಷನ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು ವಿಆರ್7 ದರ್ಜೆಯ ಭದ್ರತಾ ಮಟ್ಟವನ್ನು ಕಾಪಾಡಿಕೊಂಡಿದ್ದು, ಹೈ ಟೆಕ್ ಫೈಬರ್ ಪರಿಕರಗಳನ್ನು ಬಳಕೆ ಮಾಡಲಾಗಿದೆ. ಅಲ್ಲದೆ ಎಕೆ-47, ಗ್ರೇನೆಡ್ ದಾಳಿಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತವಾಗಿದೆ.

10. ರೋಲ್ಸ್ ರಾಯ್ಸ್ ಟು ಟೋನ್ ಘೋಸ್ಟ್

10. ರೋಲ್ಸ್ ರಾಯ್ಸ್ ಟು ಟೋನ್ ಘೋಸ್ಟ್

ಈ ಜೋಡಿ ಬಣ್ಣದ ರೋಲ್ಸ್ ರಾಯ್ಸ್ ಘೋಸ್ಟ್ 2012 ಜಿನೆವಾ ಆಟೋ ಶೋದಲ್ಲಿ ಭರ್ಜರಿ ಪಾದಾರ್ಪಣೆಗೈದಿತ್ತು. ಆಕರ್ಷಕ ವಿನ್ಯಾಸ ಇದರ ಮಗದೊಂದು ಸ್ಪೆಷಾಲಿಟಿ ಆಗಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ವಿನ್ಯಾಸ ಮಾರ್ಪಾಡುಗೊಳಿಸುವ ಅವಕಾಶ ಒದಗಿಸಲಾಗಿದೆ.

11. ರೋಲ್ಸ್ ರಾಯ್ಸ್ 101ಇಎಕ್ಸ್ ಟಂಗ್‌ಸ್ಟನ್ ಎಡಿಷನ್

11. ರೋಲ್ಸ್ ರಾಯ್ಸ್ 101ಇಎಕ್ಸ್ ಟಂಗ್‌ಸ್ಟನ್ ಎಡಿಷನ್

ಹೊಸ ವಿನ್ಯಾಸ ಹಾಗೂ ತಂತ್ರಗಾರಿಕೆಗಳನ್ನು ಪ್ರಯೋಗ ಮಾಡಿ ನೋಡುವುದರತ್ತ ಸದಾ ಉತ್ಸುಕರಾಗಿರುವ ರೋಲ್ಸ್ ರಾಯ್ಸ್ ಮಾದರಿಗಳಿಗೆ 101ಇಎಕ್ಸ್ ಟಂಗ್‌ಸ್ಟನ್ ಎಡಿಷನ್ ಒಂದು ಉದಾಹರಣೆಯಾಗಿದೆ. ವಿಶೇಷ ಮೈ ಬಣ್ಣ, ಅಲ್ಯೂಮಿನಿಯಂ ಬೊನೆಟ್, ಕ್ರೋಮ್ ಸ್ಪರ್ಶ, ಸ್ಟೈನ್ ಲೆಸ್ ಸ್ಟೀಲ್ ಎಕ್ಸಾಸ್ಟ್ ಪೈಪ್, ಗ್ರೇ ಲೆಥರ್ ಸೀಟು, ಫೈಬರ್ ಒಪ್ಟಿಕ್ ಲೈಟಿಂಗ್ ಇದರ ಪ್ರಮುಖ ಆಕರ್ಷಣೆಯಾಗಿದೆ.

12. ಪ್ರೊಜೆಕ್ಟ್ ಖಾನ್ ರೋಲ್ಸ್ ರಾಯ್ಸ್ ಫ್ಯಾಂಟಮ್

12. ಪ್ರೊಜೆಕ್ಟ್ ಖಾನ್ ರೋಲ್ಸ್ ರಾಯ್ಸ್ ಫ್ಯಾಂಟಮ್

ಒಳಗಿನ ವಿನ್ಯಾಸ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಾ ತಯಾರಿಸಿರುವ ವಿಶೇಷ ಆವೃತ್ತಿ ಇದಾಗಿದೆ. ಇದಕ್ಕೆ ಮುತ್ತಿನ ಮೈ ಬಣ್ಣ ಹೆಚ್ಚಿನ ಮೆರಗು ತುಂಬಿದೆ. ಜನಪ್ರಿಯ ಕಸ್ಟಮೈಸ್ಡ್ ವಿನ್ಯಾಸಗಾರ ಅಫ್ಜಲ್ ಖಾನ್ ಮನದಲ್ಲಿ ಇಂತಹದೊಂದು ಯೋಚನೆ ಹೊಳೆದಿತ್ತು. 22 ಇಂಚುಗಳ ಬೆಳ್ಳಿ ಅಲಾಯ್ ವೀಲ್ ಮಗದೊಂದು ಆಕರ್ಷಣೆಯಾಗಿದೆ.

13. ಮಾನ್ಸೋರಿ ರೋಲ್ಸ್ ರೋಯ್ಸ್ ಘೋಸ್ಟ್

13. ಮಾನ್ಸೋರಿ ರೋಲ್ಸ್ ರೋಯ್ಸ್ ಘೋಸ್ಟ್

ಹೆಸರಾಂತ ಬೇಸ್ ಬಾಲ್ ಆಟಗಾರ ಫ್ರಾನ್ಸಿಸ್ಕೊ ಕಾರ್ಡೆರೊ (Francisco Cordero) ಮಾನ್ಸೋರಿ (Mansory) ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 24.5 ಇಂಚುಗಳ ಕ್ರೋಮ್ ಲೇಪಿತ ಅಲಾಯ್ ವೀಲ್, ಬಿಳಿ ವರ್ಣದ ಹೆಡ್ ಲೈಟ್, ಬಂಪರ್, ರಿಯರ್ ಸ್ಪಾಯ್ಲರ್ ಎಲ್ಲವೂ ವಿಶೇಷ ವಿನ್ಯಾಸಗೊಳಿಸಲಾಗಿದೆ.

14. ರೋಲ್ಸ್ ರಾಯ್ಸ್ ಘೋಸ್ಟ್ ವಿಶೇಷ ಆವೃತ್ತಿ

14. ರೋಲ್ಸ್ ರಾಯ್ಸ್ ಘೋಸ್ಟ್ ವಿಶೇಷ ಆವೃತ್ತಿ

One Thousand and One Nights ಘೋಸ್ಟ್ ವಿಶೇಷ ಆವೃತ್ತಿಯಲ್ಲಿ ಮ್ಯಾಟ್ ಫಿನಿಶಿಂಗ್ ನೀಡಲಾಗಿದೆ. ಇದು ಅರಬಿಯ One Thousand and One Nights ವಾಕ್ಯದಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಇವನ್ನೂ ಓದಿ

ದೇವರು ಕೊಟ್ಟ ತಂಗಿ; ಅರ್ಪಿತಾಗೆ ಸಲ್ಲು 4.5 ಕೋಟಿಯ ಕಾರು ಗಿಫ್ಟ್ ಮುಂದಕ್ಕೆ ಓದಲು ಕ್ಲಿಕ್ಕಿಸಿ

English summary
Rolls-Royce 14 most expensive cars
Story first published: Monday, October 19, 2015, 11:48 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more